'ಅಮಿತ್ ಶಾ ಇಲ್ಲೆ ಠಿಕಾಣಿ ಹೂಡಿದ್ರೂ, ಕಾಂಗ್ರೆಸ್‍ಗೆ ನಷ್ಟವಿಲ್ಲ'

Posted By:
Subscribe to Oneindia Kannada

ಕಲಬುರಗಿ, ಆಗಸ್ಟ್ 13 : ಅಮಿತ್ ಶಾ, ನರೇಂದ್ರ ಮೋದಿ ಯಾರೇ ಬರಲಿ, ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿ. ಕಾಂಗ್ರೆಸ್ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರಿಗೆ ಆಗಮಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ

ಅಮಿತ್ ಶಾ ರಾಜ್ಯ ಭೇಟಿ ಬಗ್ಗೆ ಕಲಬುರಗಿ ಜಿಲ್ಲೆಯ ಆಳಂದನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯವರು ಸಾಮಾಜಿಕ ನ್ಯಾಯದ ವಿರೋಧಿಗಳು. ಅಹಿಂದ ಜನರು ಯಾವುದೇ ಕಾರಣಕ್ಕೂ ಬಿಜೆಪಿ ಜತೆ ಹೋಗುವುದಿಲ್ಲ. ಹೀಗಾಗಿ ಮೋದಿ, ಷಾ ಬೆಂಗಳೂರಿನಲ್ಲಿ ಏನೇ ತಂತ್ರಗಾರಿಕೆ ಮಾಡಿದರೂ ಕಾಂಗ್ರೆಸ್ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ" ಎಂದರು.

No loss for congress if Amith shah stay in karnataka-cm Siddaramaiah

ವೀರಶೈವ-ಲಿಂಗಾಯತ ಧರ್ಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಚೌಕಟ್ಟಿನಲ್ಲಿ ಏನು ಮಾಡಲು ಸಾಧ್ಯವಿದೆಯೋ ಅದನ್ನು ಮಾಡುತ್ತೇವೆ.

ಚಿತ್ರಗಳು : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ

Amit Shah gives clear instructions to state BJP leaders before coming to Karnataka

ಕೇಂದ್ರಕ್ಕೆ ಶಿಫಾರಸು ಮಾಡುವುದಷ್ಟೇ ನಮ್ಮ ಕೆಲಸ. ನಾವು ಸೂಜಿ ಇದ್ದಂತೆ. ಸಮಾಜವನ್ನು ಒಗ್ಗೂಡಿಸುತ್ತೇವೆ. ಆದರೆ, ಬಿಜೆಪಿ ಕತ್ತರಿ ಇದ್ದಂತೆ. ಸಮಾಜ ಒಡೆಯುವ ಕೆಲಸ ಮಾಡುತ್ತಾರೆ ಎಂದು ಟೀಕಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
No loss for congress Amith shah stay in karnataka, said CM Siddaramaiah in Alanda, Kalaburagi district on Sunday.
Please Wait while comments are loading...