ಕಲಬುರಗಿ : ಜಿಲ್ಲಾಧಿಕಾರಿಯಾಗಿ ಉಜ್ವಲ್‍ ಕುಮಾರ್ ಅಧಿಕಾರ ಸ್ವೀಕಾರ

Posted By:
Subscribe to Oneindia Kannada

ಕಲಬುರಗಿ, ಜುಲೈ 25 : ಕಲಬುರಗಿಯ ನೂತನ ಜಿಲ್ಲಾಧಿಕಾರಿಯಾಗಿ ಉಜ್ವಲ್‍ ಕುಮಾರ್ ಘೋಷ್ ಅಧಿಕಾರ ವಹಿಸಿಕೊಂಡರು. ಮೊದಲು ಜಿಲ್ಲಾಧಿಕಾರಿಯಾಗಿದ್ದ ವಿಪುಲ್ ಬನ್ಸಲ್ ಅವರನ್ನು ರಾಜ್ಯ ಸರ್ಕಾರ ಕಳೆದ ವಾರ ವರ್ಗಾವಣೆ ಮಾಡಿತ್ತು.

ಸೋಮವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಉಜ್ವಲ್‍ ಕುಮಾರ್ ಘೋಷ್ ಅಧಿಕಾರ ವಹಿಸಿಕೊಂಡರು. ಮೂಲತಃ ಜಾರ್ಖಂಡ್ ರಾಜ್ಯದವರಾದ ಉಜ್ವಲ್‍ ಕುಮಾರ್ ಘೋಷ್ ಅವರು, 2008ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ.[24 ಐಎಎಸ್ ಅಧಿಕಾರಿಗಳ ವರ್ಗಾವಣೆ]

New DC takes charge in Kalaburagi

ತಮ್ಮ ಪ್ರೊಬೇಷನರಿ ಅವಧಿಯನ್ನು ಕಲಬುರಗಿ ಜಿಲ್ಲೆಯಲ್ಲಿ ಪೂರ್ಣಗೊಳಿಸಿ ರಾಯಚೂರು ಜಿಲ್ಲೆಯ ಲಿಂಗಸಗೂರ ಉಪ ವಿಭಾಗಾಧಿಕಾರಿಯಾಗಿ ಉಜ್ವಲ್‍ ಕುಮಾರ್ ಘೋಷ್ ಸೇವೆ ಸಲ್ಲಿಸಿದ್ದಾರೆ. ಬೀದರ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.[27 ಐಎಎಸ್ ಅಧಿಕಾರಿಗಳ ವರ್ಗಾವಣೆ]

ಈ ಮೊದಲು ವಿಪುಲ್ ಬನ್ಸಲ್ ಅವರು ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದರು. ಕಳೆದ ವಾರ ಸರ್ಕಾರ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಮಾಡಿತ್ತು. ಉಜ್ವಲ್‍ ಕುಮಾರ್ ಘೋಷ್ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Ujjwal Kumar Ghosh took over charge as the Deputy Commissioner of Kalaburagi on Monday, July 25, 2016.
Please Wait while comments are loading...