• search
 • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನಾಟಕದ ಮುಖ್ಯಮಂತ್ರಿ ರಿಮೋಟ್ ಸಿಎಂ : ನರೇಂದ್ರ ಮೋದಿ

|
   ಇಂದಿನಿಂದ ಕರ್ನಾಟಕದಲ್ಲಿ ಮೋದಿ ಆರ್ಭಟ..! ಛಿದ್ರವಾಗುತ್ತಾ ಖರ್ಗೆ ಭದ್ರಕೋಟೆ..! | Oneindia Kannada

   ಕಲಬುರಗಿ, ಮಾರ್ಚ್ 06 : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದರು. ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರ ಕಲಬುರಗಿಯಲ್ಲಿ ಮೋದಿ ಚುನಾವಣಾ ಪ್ರಚಾರ ನಡೆಸಿದರು.

   ಕಲಬುರಗಿಯ ಎನ್‌.ವಿ.ಮೈದಾನದಲ್ಲಿ ಬುಧವಾರ ಕರ್ನಾಟಕ ಬಿಜೆಪಿ ಬೃಹತ್ ಸಮಾವೇಶವನ್ನು ಆಯೋಜಿಸಿತ್ತು. ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು 'ಕರ್ನಾಟಕ ಸರ್ಕಾರ ರೈತರ ವಿರೋಧಿ' ಎಂದು ಟೀಕಿಸಿದರು.

   ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸೇರಿದ ಡಾ.ಉಮೇಶ್ ಜಾಧವ್

   Narendra Modi rally in Kalaburagi highlights

   ಬೀದರ್‌ಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ವಜುಭಾಯಿ ವಾಲಾ ಸ್ವಾಗತಿಸಿದರು. ಬಳಿಕ ಹೆಲಿಪಾಕ್ಟರ್‌ನಲ್ಲಿ ನರೇಂದ್ರ ಮೋದಿ ಅವರು ಕಲಬುರಗಿಗೆ ಆಗಮಿಸಿದರು.

   ಕಾಂಗ್ರೆಸ್ ನಿಂದ 10 ಸೀಟು ಗಿಟ್ಟಿಸಿಕೊಂಡಿದ್ದೇವೆ ಎಂದ ದೇವೇಗೌಡ

   ಭಾರತ್ ಪೆಟ್ರೋಲಿಯಂ ಡಿಪೋ ಸೇರಿದಂತೆ ಕಲಬುರಗಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಸರ್ಕಾರಿ ಕಾರ್ಯಕ್ರಮದ ಬಳಿಕ ಬಿಜೆಪಿಯ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು.

   ಕುಟುಂಬ ರಾಜಕಾರಣದ ಬಗ್ಗೆ ಯಡಿಯೂರಪ್ಪರನ್ನು ಪ್ರಶ್ನಿಸಿದ ಅನಿತಾ ಕುಮಾರಸ್ವಾಮಿ

   Newest First Oldest First
   1:31 PM, 6 Mar
   ಪರಾಕ್ರಮಿ ಭಾರತ್‌ ಕೇ ಲಿಯೇ ಭಾರತ್ ಮಾತಾಕಿ ಜೈ ವೀರ್ ಜವಾನ್‌ ಕೇ ಲಿಯೇ ಭಾರತ್ ಮಾತಾಕಿ ಜೈ ಎಂದು ನರೇಂದ್ರ ಮೋದಿ ಭಾಷಣ ಮುಕ್ತಾಯಗೊಳಿಸಿದರು
   1:30 PM, 6 Mar
   ದಿನ-ರಾತ್ರಿ ಒಂದೇ ಮಾತು ಕೇಳುತ್ತಿದ್ದಾರೆ. ಮೋದಿ ಹಠಾವೋ ಮೋದಿ ಹಠಾವೋ. ಮೋದಿ ಭಯೋತ್ಪಾದನೆ, ಬಡತನದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರು ಮೋದಿ ಹಠಾವೋ ಎಂದು ಕೆಲಸ ಮಾಡುತ್ತಿದ್ದಾರೆ.
   1:28 PM, 6 Mar
   ಸ್ಥಿರ ಸರ್ಕಾರವಿದ್ದರೆ ಅಭಿವೃದ್ಧಿಗೆ ಸಹಾಯಕವಾಗಲಿದೆ. ಕರ್ನಾಟಕದಲ್ಲಿರುವ ಸರ್ಕಾರವನ್ನೊಮ್ಮೆ ನೋಡಿ. ಒಬ್ಬರು ಆ ಕಡೆ ಮತ್ತೊಬ್ಬರು ಈ ಕಡೆ ಎಳೆಯುತ್ತಾರೆ
   1:23 PM, 6 Mar
   ಜನ್‌ಧನ್ ಖಾತೆ, ಆಧಾರ್ ಕಾರ್ಡ್‌ನಿಂದಾಗಿ ಜನರ ಖಾತೆಗೆ ನೇರವಾಗಿ ಹಣ ಬರುತ್ತಿದೆ. ದೆಹಲಿ ಸರ್ಕಾರ 1000 ರೂ. ನೀಡಿದರೆ ಅಷ್ಟು ಹಣ ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೇ ರೈತರನ್ನು ತಲುಪುತ್ತಿದೆ.
   1:21 PM, 6 Mar
   ಕಬ್ಬು ಬೆಳೆಗಾರರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಎಥೆನಾಲ್ ಮೂಲಕ ಇಂಧನದ ಬೇಡಿಕೆ ಪೂರೈಕೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುತ್ತಿವೆ.
   1:20 PM, 6 Mar
   ಮೋದಿ ಇರುವ ತನಕ ಕಳ್ಳರ ಅಂಗಡಿ ಬಂದ್ ಆಗಿರಲಿದೆ. ದೆಹಲಿಯ ಸರ್ಕಾರ ರೈತರ ಖಾತೆಗೆ ನೇರವಾಗಿ 2 ಸಾವಿರ ರೂ. ಹಾಕಿದರೆ ನಿಮಗೆ ಏಕೆ ಹೊಟ್ಟೆ ನೋವು? ಎಂದು ನರೇಂದ್ರ ಮೋದಿ ಪ್ರಶ್ನಿಸಿದರು.
   1:18 PM, 6 Mar
   ತಮ್ಮ ಭರವಸೆಯನ್ನು ಈಡೇರಿಸಲು ಸಾಧ್ಯವಾಗದ ಮುಖ್ಯಮಂತ್ರಿಗಳು. ಬೇರೆ ಸರ್ಕಾರ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತದೆ ಎಂದರೆ ಅದಕ್ಕೂ ಅಡ್ಡಗಾಲಯ ಹಾಕುತ್ತಿದ್ದಾರೆ.
   1:17 PM, 6 Mar
   ಸಾಲಮನ್ನಾದ ಹೆಸರಿನಲ್ಲಿ ಇವರು ಮತ ಕೇಳಿದ್ದರು ಅಲ್ಲವೇ, ಎಲ್ಲಾ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಹೇಳಿರಲಿಲ್ಲವೇ? ಈಗ ಸಂಪೂರ್ಣ ಸಾಲಮನ್ನಾ ಆಗಿದೆಯೇ?
   1:16 PM, 6 Mar
   ಕರ್ನಾಟಕ ಜನರ ತೀರ್ಪನ್ನು ಧಿಕ್ಕರಿಸಿ ಮೈತ್ರಿ ಮಾಡಿಕೊಂಡಿರುವ ಎರಡೂ ಪಕ್ಷಗಳು ರೈತ ವಿರೋಧಿಯಾಗಿವೆ. ರಿವೋಟ್‌ನಿಂದ ಚಲಿಸುವ ಮುಖ್ಯಮಂತ್ರಿಗಳು ರೈತ ವಿರೋಧಿಯಾಗಿದ್ದಾರೆ.
   1:15 PM, 6 Mar
   ರಾಜ್ಯದ ರೈತರ ಖಾತೆಗೆ 2000 ರೂ. ಜಮಾಗೊಂಡರೆ ಅವರು ಮೋದಿ ಮೋದಿ ಎನ್ನುತ್ತಾರೆ. ಅದಕ್ಕೆ ಕರ್ನಾಟಕ ಸರ್ಕಾರ ಇನ್ನೂ ರೈತರ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿಲ್ಲ.
   1:12 PM, 6 Mar
   ಅಸಂಘಟಿತ ವರ್ಗದ ಕಾರ್ಮಿಕರ ಅನುಕೂಲಕ್ಕಾಗಿ ಪಿಂಚಣಿ ಯೋಜನೆ ಜಾರಿಗೆ ತಂದಿದ್ದೇವೆ
   1:11 PM, 6 Mar
   15 ವರ್ಷದಿಂದ ತೆರಿಗೆದಾರರು ಬೇಡಿಕೆ ಇಡುತ್ತಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಅದನ್ನು ಈಡೇರಿಸಿರಲಿಲ್ಲ. ಈ ವರ್ಷದ ಬಜೆಟ್‌ನಲ್ಲಿ ನಾವು ಆದಾಯ ತೆರಿಗೆ ಮಿತಿಯನ್ನು ಹೆಚ್ಚಳ ಮಾಡಿದ್ದೇವೆ.
   1:00 PM, 6 Mar
   ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇದರಿಂದಾಗಿ ಉತ್ತರ ಕರ್ನಾಟಕ ಮಾತವಲ್ಲ. ಇಡೀ ರಾಜ್ಯದ ಜನರಿಗೆ ಸಹಾಯಕವಾಗಲಿದೆ.
   12:58 PM, 6 Mar
   ಕಲಬುರಗಿಯಲ್ಲಿ ಭಾರತ್ ಪೆಟ್ರೋಲಿಂನ ಡಿಪೋ ಆರಂಭಿಸಲಾಗಿದೆ
   12:58 PM, 6 Mar
   ದಶಕಗಳ ನಂತರ ಬೀದರ್-ಕಲಬುರಗಿ ರೈಲು ಮಾರ್ಗವನ್ನು ನಮ್ಮ ಸರ್ಕಾರವೇ ಪೂರ್ಣಗೊಳಿಸಿದೆ. ಗುಲ್ಬರ್ಗಾದ ಅಭಿವೃದ್ಧಿಗೆಗಾಗಿ ಅಮೃತ ಯೋಜನೆಯನ್ನು ಕೇಂದ್ರ ಸರ್ಕಾರ ನೀಡಿದೆ.
   12:56 PM, 6 Mar
   ಕಳೆದ ಬಾರಿ ಚುನಾವಣೆ ಪ್ರಚಾರಕ್ಕೆ ನಿಮ್ಮ ಮುಂದೆ ಬಂದಿದ್ದೆ. ಇಲ್ಲಿನ ಸಾಮಾನ್ಯ ಜನರ ಅಭಿವೃದ್ಧಿಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದ್ದೆ. ಕರ್ನಾಟಕದ ಅಭಿವೃದ್ಧಿಗೆ ಅಗತ್ಯ ಸಹಕಾರವನ್ನು ನೀಡಿದೆ.
   12:54 PM, 6 Mar
   ಕಲಬುರಗಿಗೆ ಆಗಮಿಸಿದ್ದಕ್ಕೆ ಬಹಳ ಸಂತೋಷವಾಗಿದೆ ಎಂದು ಕನ್ನಡದಲ್ಲಿ ಮಾತನಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸಿದರು
   12:51 PM, 6 Mar
   ಕೋಲಿ ಸಮುದಾಯವನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕು ಎಂದು ಬಿ.ಎಸ್.ಯಡಿಯೂರಪ್ಪ ಮನವಿ ಸಲ್ಲಿಸಿದರು
   12:50 PM, 6 Mar
   ಯುಪಿಎ ಸರ್ಕಾರ ಹಲವು ಹಗರಣದಲ್ಲಿ ಸಿಲುಕಿತ್ತು. ದೇಶದ ಅರ್ಥ ವ್ಯವಸ್ಥೆ ಹಾಳು ಮಾಡಲಾಗಿತ್ತು. ಕಳೆದ 5 ವರ್ಷಗಳಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದು ಕೇಂದ್ರ ಸರ್ಕಾರವನ್ನು ಹೊಗಳಿದ ಬಿ.ಎಸ್.ಯಡಿಯೂರಪ್ಪ
   12:47 PM, 6 Mar
   ವಿಶ್ವದಲ್ಲೇ ಪ್ರಬಲ ನಾಯಕರಾಗಿ ಬೆಳೆದಿರುವ ಮೋದಿಗೆ ಸ್ವಾಗತ. ಭಯೋತ್ಪಾದನೆ ನಿರ್ಮೂಲನೆ ಮಾಡಲು ನೀವು ತೆಗೆದುಕೊಂಡಿರುವ ನಿರ್ಧಾರಗಳಿಗೆ ಅಭಿನಂದನೆ ಎಂದು ಹೇಳಿದ ಯಡಿಯೂರಪ್ಪ
   12:45 PM, 6 Mar
   ಪೇಟ ತೊಡಿಸಿ, ಬೆಳ್ಳಿಗದೆ ನೀಡಿ ಪ್ರಧಾನಿ ಮೋದಿಗೆ ಕಲಬುರಗಿಯಲ್ಲಿ ಕರ್ನಾಟಕ ಬಿಜೆಪಿಯಿಂದ ಸನ್ಮಾನ
   12:44 PM, 6 Mar
   ಸಮಾವೇಶದಲ್ಲಿ ಸ್ವಾಗತ ಭಾಷಣ ಮಾಡುತ್ತಿರುವ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ
   12:42 PM, 6 Mar
   ಕಲಬುರಗಿಯಲ್ಲಿ ಮೋದಿ ಸಮಾವೇಶ
   12:40 PM, 6 Mar
   ಸಮಾವೇಶದ ಮುಖ್ಯ ವೇದಿಕೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
   12:40 PM, 6 Mar
   ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಮಾಜಿ ಸಚಿವ ಆರ್.ಅಶೋಕ ಸೇರಿದಂತೆ ವಿವಿಧ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
   12:39 PM, 6 Mar
   ಡಾ.ಉಮೇಶ್ ಜಾಧವ್, ಮಾಲೀಕಯ್ಯ ಗುತ್ತೇದಾರ್, ಬಾಬೂರಾವ್ ಚಿಂಚನಸೂರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಒಂದಾಗಿದ್ದಾರೆ ಹಲವು ಬಿಜೆಪಿ ನಾಯಕರು
   12:36 PM, 6 Mar
   ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿರುವ ಲೋಕಸಭಾ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ತವರು ನೆಲದಲ್ಲಿ ನರೇಂದ್ರ ಮೋದಿ
   12:35 PM, 6 Mar
   ಕರ್ನಾಟಕದಲ್ಲಿ 2ನೇ ಚುನಾವಣಾ ಪ್ರಚಾರ ಸಮಾವೇಶ ನಡೆಸುತ್ತಿರುವ ಪ್ರಧಾನಿ ಮೋದಿ. ಫೆ.10ರಂದು ಹುಬ್ಬಳ್ಳಿಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು
   12:35 PM, 6 Mar
   ಡಾ.ಉಮೇಶ್ ಜಾಧವ್ ಅವರು ನೀಡಿದ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಇನ್ನು ಅಂಗೀಕಾರ ಮಾಡಿಲ್ಲ
   12:34 PM, 6 Mar
   ಸೋಮವಾರ ಚಿಂಚೋಳಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಡಾ.ಉಮೇಶ್ ಜಾಧವ್
   READ MORE

   English summary
   Prime Minister of India Narendra Modi addressed rally in Kalaburagi, Karantaka on March 6, 2019 here are the highlights. Kalaburagi home town for the Lok Sabha Congress leader Mallikarjun Kharge.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X