ವಿರೋಧಿಗಳ ಹುನ್ನಾರ ಯಶಸ್ವಿ ಆಗೋದಿಲ್ಲ:ಮಲ್ಲಿಕಾರ್ಜುನ ಖರ್ಗೆ
Recommended Video
ಕಲಬುರಗಿ, ಏಪ್ರಿಲ್ 23:ವಿರೋಧಿಗಳು ಏನೇ ಮಸಲತ್ತು ಮಾಡಿದರೂ ಈ ಬಾರಿ ಜನರು ತೀರ್ಮಾನ ಮಾಡಿದ್ದಾರೆ. ನನ್ನ ಖಂಡಿತ ದೆಹಲಿಗೆ ಕಳಿಸ್ತಾರೆ. ಆದರೆ ವಿರೋಧಿಗಳು ತಡೆಯುವ ಹುನ್ನಾರ ಯಶಸ್ವಿ ಆಗೋದಿಲ್ಲ ಎಂದು ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿ ನಗರದ ಮತಗಟ್ಟೆಯಲ್ಲಿ ಮತದಾನ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗ್ಗೆಯಿಂದಲೇ ಜನರು ತುಂಬಾ ಸಂತೋಷದಿಂದ ಮತದಾನ ಮಾಡುತ್ತಿದ್ದಾರೆ. ಉತ್ಸಾಹ ಖುಷಿ ಕಾಣುತ್ತಿದೆ. ನಾನು ಕಳೆದ 11 ಬಾರಿಯಿಂದಲೂ ಇದೇ ಮತಗಟ್ಟೆಯಲ್ಲಿ ಮತದಾನ ಮಾಡಿದ್ದೇನೆ. 12ನೇ ಬಾರಿಯೂ ಇಲ್ಲೇ ಮತದಾನ ಮಾಡಿದ್ದೇನೆ ಎಂದರು.
ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಮೊಮ್ಮಗ ಹಾಗೂ ಪತ್ನಿ ರಾಧಾಬಾಯಿ ಸಮೇತ ಕಲಬುರಗಿಯ ಬ್ರಮ್ಮಪೂರನ ಬಸವನಗರದಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಹಾಗೂ ಪತ್ನಿ ಶೃತಿ ಪ್ರಿಯಾಂಕ್ ಖರ್ಗೆ ಅವರು ಗುಂಡಗುರ್ತಿ ಗ್ರಾಮದ ಬೂತ್ ನಂ. 26 ರಲ್ಲಿ ಮತದಾನ ಮಾಡಿದರು.

ಪ್ರತಿಶತ ಮತದಾನ
ಕಲಬುರ್ಗಿ ಜಿಲ್ಲೆಯಲ್ಲಿ ಬೆಳಗಿನ ಹನ್ನೊಂದು ಗಂಟೆಗೆ ಒಟ್ಟು ಶೇ .18.01 ರಷ್ಟು ಮತದಾನ ದಾಖಲಾಗಿದೆ. ಅಫಜಲಪುರ ಶೇ .20.62, ಚಿತಾಪುರ ಶೇ .17.98, ಗುರುಮಿಟ್ಟಕಲ್ ಶೇ .14.82, ಸೇಡಂ ಶೇ .13.91, ಕಲಬುರ್ಗಿ ಗ್ರಾಮೀಣ ಶೇ .16.61, ಗುಲ್ಬರ್ಗಾ ಉತ್ತರ ಶೇ .17.49 ಮತ್ತು ಗುಲ್ಬರ್ಗಾ ದಕ್ಷಿಣದಲ್ಲಿ ಶೇ.21.34 ರಷ್ಟು ಮತದಾನವಾಗಿದೆ.











Click it and Unblock the Notifications