ರೈಲು ವಿಳಂಬದಿಂದ ಪಿಡಬ್ಲ್ಯುಡಿ ಪರೀಕ್ಷೆ ಬರೆಯದ ಅಭ್ಯರ್ಥಿಗಳಿಗೆ ಡಿ.29ರಂದು ಮರು ಪರೀಕ್ಷೆ

ಕಲಬುರಗಿ, ಡಿಸೆಂಬರ್ 16: ರೈಲು ವಿಳಂಬದಿಂದ ಲೋಕೋಪಯೋಗಿ ಇಲಾಖೆ ಪರೀಕ್ಷೆಗೆ ಕೆಲ ಪರೀಕ್ಷಾರ್ಥಿಗಳು ಗೈರಾದ ಹಿನ್ನೆಲೆಯಲ್ಲಿ ಗೈರಾದ ಪರೀಕ್ಷಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಲಾಗಿದೆ.

ಕೆಪಿಎಸ್‌ಸಿ ಡಿಸೆಂಬರ್ 29ಕ್ಕೆ ಮರು ಪರೀಕ್ಷೆ ನಿಗದಿಪಡಿಸಿದ್ದು, ಬೆಂಗಳೂರಿನಲ್ಲಿ ಡಿಸೆಂಬರ್ 29ರಂದು ಪರೀಕ್ಷೆ ನಡೆಯಲಿದೆ. ಡಿ.22ರೊಳಗೆ ರೈಲು ಟಿಕೆಟ್ ಸಮೇತ ದಾಖಲೆ ಸಲ್ಲಿಕೆಗೆ ಸೂಚಿಸಲಾಗಿದೆ.

ಡಿಸೆಂಬರ್ 14ರಂದು ಲೋಕೋಪಯೋಗಿ ಸಹಾಯಕ ಅಭಿಯಂತರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಕಲಬುರಗಿ ಕೇಂದ್ರದಲ್ಲಿ ನಡೆದಿತ್ತು. ರೈಲು ವಿಳಂಬದಿಂದ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆ ಬರೆಯುವುದರಿಂದ ವಂಚಿತರಾಗಿದ್ದರು. ಸಾಮಾನ್ಯ ಪತ್ರಿಕೆ ಪರೀಕ್ಷೆಗೆ ಹಾಜರಾಗದೇ ಅಭ್ಯರ್ಥಿಗಳು ಪರದಾಡಿದ್ದರು.

KPSC Aspirants Missed Their Morning Exam On 14 Dec Due to Train Delays Allowed To Write It On Dec 29 At Bengaluru

ಐದು ಗಂಟೆ ವಿಳಂಬವಾಗಿ ಕಲಬುರಗಿಗೆ ರೈಲುಗಳು ಬಂದತು. ರೈಲ್ವೆ ಹಳಿ ಮೇಲೆಯೇ ಕುಳಿತು ಪರೀಕ್ಷಾರ್ಥಿಗಳು ಪ್ರತಿಭಟನೆ ನಡೆಸಿ ಮರು ಪರೀಕ್ಷೆಗೆ ಆಗ್ರಹಿಸಿದ್ದರು. ಸದ್ಯ ಈಗ ಡಿಸೆಂಬರ್ 29ಕ್ಕೆ ಮರು ಪರೀಕ್ಷೆ ನಿಗದಿ ಪಡಿಸಲಾಗಿದೆ.

ರೈಲು ಹಳಿ ಕೆಲಸ ದುರಸ್ಥಿ, ರೈಲುಗಳು ವಿಳಂಬ
ಬೆಂಗಳೂರಿನ ಯಲಹಂಕ ಬಳಿ ರೈಲು ಹಳಿ ದುರಸ್ಥಿ ಕಾರ್ಯ ಇದ್ದಿದ್ದರಿಂದ ಯಲಹಂಕ ಬಳಿ ಎರಡು ಗಂಟೆ ರೈಲು ನಿಂತಲ್ಲಿಯೇ ನಿಂತಿತ್ತು. ಯಲಹಂಕ ದಾಟಿದ ಮೇಲೆ ಕೂಡ ಅನೇಕ ಕಡೆ ರೈಲು ನಿಂತಿದ್ದರಿಂದ, ನಿಗದಿತ ಸಮಯಕ್ಕಿಂತ ಐದು ಗಂಟೆ ವಿಳಂಬವಾಗಲು ಪ್ರಮುಖ ಕಾರಣವಾಗಿದೆ.

ರೈಲು ನಿಗದಿತ ಸಮಯಕ್ಕೆ ಬರುತ್ತದೆ ಎಂದು ವಿದ್ಯಾರ್ಥಿಗಳು, ಬೆಂಗಳೂರು, ಮೈಸೂರು, ಹಾಸನ ಸೇರಿದಂತೆ ಅನೇಕ ಕಡೆಗಳಿಂದ ಸಾವಿರಾರು ಅಭ್ಯರ್ಥಿಗಳು, ರೈಲಿನಲ್ಲಿ ಕಲಬುರಗಿಗೆ ಹೊರಟಿದ್ದರು. ಆದರೆ ರೈಲ್ವೆ ಹಳಿ ದುರಸ್ಥಿ ಕಾರ್ಯದಿಂದ ರೈಲು ವಿಳಂಬವಾಗಿದ್ದರಿಂದ ಪರೀಕ್ಷೆಗೆ ಹಾಜರಾಗದೇ ವಿದ್ಯಾರ್ಥಿಗಳು ಪರದಾಟ ನಡೆಸಿದರು.

KPSC Aspirants Missed Their Morning Exam On 14 Dec Due to Train Delays Allowed To Write It On Dec 29 At Bengaluru


ಹಾಸನ- ಸೊಲ್ಲಾಪುರ ಎಕ್ಸ್​ಪ್ರೆಸ್​ ರೈಲು ಮುಂಜಾನೆ ಆರು ಗಂಟೆಗೆ ಕಲಬುರಗಿಗೆ ಬರಬೇಕಿತ್ತು. ಐದು ಗಂಟೆ ವಿಳಂಬವಾಗಿ ಕಲಬುರಗಿಗೆ ರೈಲು ಬರುವ ಸಾಧ್ಯತೆ ಇದೆ. ಹೀಗಾಗಿ ಕಲಬುರಗಿಯಲ್ಲಿರುವ ಪರೀಕ್ಷೆ ಕೇಂದ್ರಕ್ಕೆ ಬರಲು ಸಾಧ್ಯವಾಗದೆ ಅಭ್ಯರ್ಥಿಗಳು ಆತಂಕಗೊಂಡಿದ್ದರು.

ಲೋಕೋಪಯೋಗಿ ಇಲಾಖೆ ಪರೀಕ್ಷೆಗೆ ಕೆಲ ಪರೀಕ್ಷಾರ್ಥಿಗಳು ಗೈರಾದ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಬೇಕು, ಇಲ್ಲವೇ ಪರೀಕ್ಷೆ ಸಮಯ ಮರು ನಿಗದಿ ಮಾಡಬೇಕು ಎಂದು ಪರೀಕ್ಷಾ ಅಭ್ಯರ್ಥಿಗಳು ಮನವಿ ಮಾಡಿದ್ದಾರೆ.

ಅಭ್ಯರ್ಥಿಗಳಿಗೆ ಸ್ಪಂದಿಸದ ಕೆಪಿಎಸ್​ಸಿ
ಇನ್ನು ರೈಲ್ವೆ ವಿಳಂಬದಿಂದ ಪರೀಕ್ಷಾ ಕೇಂದ್ರಕ್ಕೆ ತೆರಳಲಾಗದೆ ಪರದಾಡುತ್ತಿರುವ ವಿದ್ಯಾರ್ಥಿಗಳು, ಪರೀಕ್ಷಾ ಸಮಯವನ್ನು ಮರು ನಿಗದಿ ಮಾಡಬೇಕು, ಇಲ್ಲವೇ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಫೋನ್ ಮಾಡಿ ಮನವಿ ಮಾಡಿದ್ದಾರೆ. ಆದರೆ ಅಭ್ಯರ್ಥಿಗಳಿಗೆ ಕೆಪಿಎಸ್​ಸಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು.

Recommended Video

      ರೋಹಿತ್ ಆಡೋಕಾಗಲ್ಲ,ಕೊಹ್ಲಿಗೆ ಬೇಕಾಗಿಲ್ಲ ಅಂದ್ಮೇಲೆ ರಾಹುಲ್ ನಾಯಕನಾಗೋದು ಪಕ್ಕಾ!! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+