ಕಲಬುರಗಿಯಲ್ಲಿ ಮನೆಯ ಮೇಲ್ಛಾವಣಿ ಕುಸಿದು ಮೂವರ ಸಾವು
ಕಲಬುರಗಿ, ಜೂನ್ 01: ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಮೂವರು ಸಾವಿಗೀಡಾಗಿ, ನಾಲ್ವರು ಗಂಭೀರವಾಗಿ ಗಾಯಗೊಡ ಘಟನೆ ಕಲಬುರಗಿಯ ಮಂಗಲ್ಗಿ ಗ್ರಾಮದಲ್ಲಿ ನಡೆದಿದೆ.
ಶನಿವಾರ ಬೆಳಗ್ಗಿನ ಜಾವದ ಸಮಯದಲ್ಲಿ ಇದ್ದಕ್ಕಿದ್ದಂತೆ ಮೇಲ್ಛಾವಣಿ ಕುಸಿದ ಪರಿಣಾಮ ಈ ಘಟನೆ ಸಂಭವಿಸಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಮೇ 14 ರಂದು ಧಾರವಾಡದ ಕುಂದಗೋಳ ತಾಲೂಕಿನ ಹರಗುಪ್ಪಿ ಎಂಬಲ್ಲಿ ಕಟ್ಟಡವೊಂದು ಕುಸಿದ ಪರಿಣಾಮ ಮೂವರು ಧಾರುಣವಾಗಿ ಸಾವನ್ನಪ್ಪಿದ್ದರು.

ಕಳೆದ ಮಾರ್ಚ್ 19 ರಂದು ಧಾರವಾಡದಲ್ಲೇ ನಿರ್ಮಾಣ ಹಂತದಲ್ಲಿದ್ದ ಐದು ಅಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮ 19 ಜನ ಮೃತರಾಗಿದ್ದರು.
ಸುಮಾರು ಒಂದು ವಾರಗಳ ಕಾಲ ಸತತವಾಗಿ ರಕ್ಷಣಾ ಕಾರ್ಯಾಚರಣೆ ಮಾಡಲಾಗಿತ್ತು. ನೂರಾರು ಜನರನ್ನು ರಕ್ಷಿಸಲಾಗಿತ್ತಾದರೂ ಕಟ್ಟಡದ ಅವಶೇಷದಡಿ ಸಿಲುಕಿದ ಹತ್ತೊಂಬತ್ತು ಜನ ಸಾವನ್ನಪ್ಪಿದ್ದರು.












Click it and Unblock the Notifications