ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪ ಚುನಾವಣೆ ಬಳಿಕ ಉತ್ತರ ಕೊಡುವೆ; ದೇವೇಗೌಡ

|
Google Oneindia Kannada News

ಕಲಬುರಗಿ, ಅಕ್ಟೋಬರ್ 08 : "ಶಿರಾ ಮತ್ತು ಆರ್. ಆರ್. ನಗರ ಉಪ ಚುನಾವಣೆಯಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ. ನಮ್ಮ ಬಗ್ಗೆ ಲಘುವಾಗಿ ಯಾರು ಮಾತನಾಡಿದ್ದಾರೋ ಅವರಿಗೆ ಚುನಾವಣೆ ಬಳಿಕ ಉತ್ತರ ನೀಡಲಿದ್ದೇವೆ" ಎಂದು ಎಚ್. ಡಿ. ದೇವೇಗೌಡ ಹೇಳಿದರು.

ಗುರುವಾರ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ನಾಮತ್ರ ಸಲ್ಲಿಸಿದರು. ಇದಕ್ಕಾಗಿ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಕಲಬುರಗಿಗೆ ಆಗಮಿಸಿದ್ದರು.

ಉಪ ಚುನಾವಣೆ; ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಎಚ್‌ಡಿಕೆ ಟ್ವೀಟ್ಉಪ ಚುನಾವಣೆ; ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಎಚ್‌ಡಿಕೆ ಟ್ವೀಟ್

ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ನಮ್ಮ ಪಕ್ಷಕ್ಕೆ ಉತ್ತಮ ಜನ ಬೆಂಬಲವಿದೆ. ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ" ಎಂದರು.

ಜೆಡಿಎಸ್ ಮುಖಂಡ ಜಿಟಿ ದೇವೇಗೌಡರಿಗೆ ಡಿಸಿಎಂ ಸ್ಥಾನದ ಆಫರ್! ಜೆಡಿಎಸ್ ಮುಖಂಡ ಜಿಟಿ ದೇವೇಗೌಡರಿಗೆ ಡಿಸಿಎಂ ಸ್ಥಾನದ ಆಫರ್!

"ಶಿರಾ ಮತ್ತು ಆರ್. ಆರ್. ನಗರ ಕ್ಷೇತ್ರದಲ್ಲಿ ನಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಶಿರಾ ಕ್ಷೇತ್ರಕ್ಕೆ ಈಗಾಗಲೇ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೇವೆ" ಎಂದು ಎಚ್. ಡಿ. ದೇವೇಗೌಡರು ಹೇಳಿದರು.

ಶಿರಾ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಕಾಂಗ್ರೆಸ್ ಸೇರ್ಪಡೆ ಶಿರಾ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಕಾಂಗ್ರೆಸ್ ಸೇರ್ಪಡೆ

ಲಘುವಾಗಿ ಮಾತನಾಡೋಲ್ಲ

ಲಘುವಾಗಿ ಮಾತನಾಡೋಲ್ಲ

"ಸಿದ್ದರಾಮಯ್ಯ ಕುರಿತು ನಾನು ಲಘುವಾಗಿ ಮಾತನಾಡೋಲ್ಲ. ಪಕ್ಷ ಯಾರನ್ನು ಬೆಳೆಸಿದೆ, ಯಾವ ಪಕ್ಷ ಯಾರನ್ನು ಬೆಳೆಸಿದೆ ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ" ಎಂದು ಎಚ್. ಡಿ. ದೇವೇಗೌಡರು ಹೇಳಿದರು.

ಎಲ್ಲಾ ಮಾತನ್ನು ಕೇಳಿಸಿಕೊಂಡಿದ್ದೇನೆ

ಎಲ್ಲಾ ಮಾತನ್ನು ಕೇಳಿಸಿಕೊಂಡಿದ್ದೇನೆ

"ಸಿದ್ದರಾಮಯ್ಯ ಅವರ ಮಾತನ್ನು ನಾನು ಕೇಳಿದ್ದೇನೆ. ಚುನಾವಣೆ ಬಳಿಕ ನಾನು ಎಲ್ಲಾ ವಿಚಾರಗಳನ್ನು ಎಳೆ ಎಳೆಯಾಗಿ ಬಿಚ್ಚಿಡಲಿದ್ದೇನೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕುರಿತು ದೇವೇಗೌಡರು ಮಾತನಾಡಿದರು.

ಪಕ್ಷ ಉಳಿಸಿಕೊಳ್ಳುವುದು ಮುಖ್ಯ

ಪಕ್ಷ ಉಳಿಸಿಕೊಳ್ಳುವುದು ಮುಖ್ಯ

"ನಮ್ಮ ಬಗ್ಗೆ ಯಾರು ಲಘುವಾಗಿ ಮಾತನಾಡಿದರೂ ನಾವು ಉಪ ಚುನಾವಣೆ ಬಳಿಕ ಉತ್ತರ ನೀಡಲಿದ್ದೇವೆ. ಈಗ ನಮಗೆ ಪಕ್ಷ ಉಳಿಸಿಕೊಳ್ಳುವುದು ಮುಖ್ಯ" ಎಂದು ಎಚ್. ಡಿ. ದೇವೇಗೌಡರು ತಿಳಿಸಿದರು.

ಸಿದ್ದರಾಮಯ್ಯ ಹೇಳಿಕೆ

ಸಿದ್ದರಾಮಯ್ಯ ಹೇಳಿಕೆ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ನಡುವೆ ವಾಕ್ಸಮರ ನಡೆಯುತ್ತಿದೆ. "ಜೆಡಿಎಸ್ ಎಂದೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲ್ಲ. ಬೇರೆಯವರ ಹೆಗಲ ಮೇಲೆ ಕುಳಿತು ಅಧಿಕಾರಕ್ಕೆ ಬರುವ ಜೆಡಿಎಸ್. ರಾಜಕೀಯ ಪಕ್ಷವೇ ಅಲ್ಲ" ಎಂದು ಸಿದ್ದರಾಮಯ್ಯ ಹೇಳಿದ್ದರು.

English summary
JD(S) supremo H. D. Deve Gowda said that party will contest for Rajarajeshwari Nagar and Sira by elections alone. We will answer for all allegations after by elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X