ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ; ಅಲ್ಪಸಂಖ್ಯಾತ ಆಯೋಗ

|
Google Oneindia Kannada News

ಕಲಬುರಗಿ, ಮಾರ್ಚ್ 24: "ಉಡುಪಿ ಜಿಲ್ಲೆಯ ಹಿಂದೂ ದೇವಸ್ಥಾನಗಳ ವಾರ್ಷಿಕ ಜಾತ್ರೆಯಲ್ಲಿ ಹಿಂದೂಯೇತರರು ಅಂಗಡಿ ತೆರೆಯಲು ಅವಕಾಶ ನೀಡದಿರುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲಾಗುತ್ತಿದೆ," ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಹೇಳಿದ್ದಾರೆ.

ಬುಧವಾರದಂದು ಕಲಬುರಗಿಯಲ್ಲಿ ಮಾತನಾಡಿದ ಅಬ್ದುಲ್ ಅಜೀಂ, "ದೇವಸ್ಥಾನಗಳ ವಾರ್ಷಿಕ ಜಾತ್ರೆಯಲ್ಲಿ ಹಿಂದೂಯೇತರರು ಅಂಗಡಿಗಳನ್ನು ತೆರೆಯಲು ಅವಕಾಶ ನೀಡುತ್ತಿಲ್ಲ. ಇದು ಭಾವನಾತ್ಮಕ ವಿಷಯವಾಗಿದೆ ಶೀಘ್ರದಲ್ಲೇ ಸಮಸ್ಯೆಯನ್ನು ಪರಿಹರಿಸುವ," ಭರವಸೆ ನೀಡಿದರು.

ಅಲ್ಲಿ ವ್ಯಾಪಾರ ಮಾಡದಂತೆ ವಿಭಿನ್ನ ನಂಬಿಕೆಯ ಜನರು ಇದನ್ನು ಮಾಡುತ್ತಿದ್ದಾರೆಂದು ನನಗೆ ಗೊತ್ತಿದೆ. ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದರು.

Issue of Muslim Traders Banned From Hindu Temple Jatre to Resolved As Soon; Minority Commission

ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ ಕಾಪು ಪಟ್ಟಣದಲ್ಲಿರುವ ಮಾರಿ ಗುಡಿ ದೇವಸ್ಥಾನದ ಆಡಳಿತ ಮಂಡಳಿಯು ಕೆಲವು ಸಂಘಟನೆಗಳ ಕೋರಿಕೆಯ ಮೇರೆಗೆ ವಾರ್ಷಿಕ ದೇವಸ್ಥಾನದ ಉತ್ಸವದ ಸಮಯದಲ್ಲಿ 'ಬೇರೆ ಧರ್ಮದ ಜನರು' ವ್ಯಾಪಾರ ಮಾಡಲು ಅವಕಾಶ ನೀಡದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ.

Recommended Video

ಬೆಂಗಳೂರಿನಲ್ಲೂ ಮುಸ್ಲಿಂ ವ್ಯಾಪಾರಕ್ಕೆ ಬ್ರೇಕ್ ಬೀಳೋ ಆತಂಕ | Oneindia Kannada

ಇದೇ ವೇಳೆ, ಭಗವದ್ಗೀತೆಯನ್ನು ಶಾಲೆಗಳ ಶೈಕ್ಷಣಿಕ ಪಠ್ಯಕ್ರಮಕ್ಕೆ ಸೇರಿಸುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ, ಭಾವನೆಗಳ ಆಧಾರದ ಮೇಲೆ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಿದರು.

"ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಶಾಲಾ ಪಠ್ಯದಲ್ಲಿ ಇಖ್ಲಾಕಿ ತಲೀಮ್ (ನೈತಿಕ ಶಿಕ್ಷಣ) ಅಗತ್ಯವಿದೆ ಎಂದು ಹೇಳಿದ್ದರು. ನಾವು ಗೀತೆ, ಕುರಾನ್ ಮತ್ತು ಬೈಬಲ್‌ನ ಸಲಹೆಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ನೈತಿಕ ಶಿಕ್ಷಣದಲ್ಲಿ ಅವುಗಳನ್ನು ಸೇರಿಸುತ್ತೇವೆ ಎಂದು ಘೋಷಣೆಯನ್ನು ಮಾಡಲಾಗಿದೆ. ಆದರೆ ನಿರ್ಧಾರವನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ. ಭಾವನೆಗಳ ಆಧಾರದ ಮೇಲೆ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ನಾನು ನಂಬುತ್ತೇನೆ," ಎಂದು ಅಜೀಂ ತಿಳಿಸಿದರು.

ಇನ್ನು ಕರ್ನಾಟಕದ ವಿವಿಧ ದೇವಾಲಯಗಳ ಜಾತ್ರೆಗಳಲ್ಲಿ ಮುಸ್ಲಿಮರು ಅಥವಾ ಹಿಂದುಯೇತರರನ್ನು ಹೊರತುಪಡಿಸಿದ ಪೋಸ್ಟರ್‌ಗಳು ರಾರಾಜಿಸುತ್ತಿವೆ ಎಂದರು.

English summary
Talks are being held regarding the decision not to allow non-Hindus to open shops at the annual Hindu Fairs, Karnataka State Minorities Commission Chairman Abdul Azeem said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X