ಕಲಬುರಗಿ ಎಸ್‌ಪಿಗೆ ಬಿತ್ತು 10 ಸಾವಿರ ದಂಡ
ಕಲಬುರಗಿ, ಅಕ್ಟೋಬರ್ 10: ಆರ್‌ಟಿಐ ಅರ್ಜಿದಾರರಿಗೆ ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಕಲಬುರಗಿ ಎಸ್‌ಪಿಗೆ ರಾಜ್ಯ ಮಾಹಿತಿ ಆಯೋಗ 10 ಸಾವಿರ ರೂ. ದಂಡ ವಿಧಿಸಿದೆ.
ಎಸ್‌ಪಿ ಶಶಿಕುಮಾರ್ ಆರ್‌ಟಿಐ ಅರ್ಜಿದಾರರಿಗೆ ಸೂಕ್ತ ಮಾಹಿತಿ ನೀಡಿರಲಿಲ್ಲ, ಸಾರ್ವಜನಿಕರ ಆಸ್ತಿ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೆ ಸಹಾಯ ಮಾಡಲು ಮೊಹಲ್ಲಾ ಕಮಿಟಿ, ಶಾಂತಿ ಸಮಿತಿ, ರಚಿಸದಿರುವುದು ಮತ್ತು ಆಯೋಗದ ನೋಟಿಸ್ ಗೆ ಉತ್ತರರಿಸದೇ ಇರುವುದರಿಂದ ಈ ದಂಡ ವಿಧಿಸಲಾಗಿದೆ.

ಆರ್‌ಟಿಐ ಪ್ರಕರಣಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ದಂಡ ವಿಧಿಸಲಾಗುತ್ತದೆ, ಆದರೆ ಈ ಪ್ರಕರಣದಲ್ಲಿ ಮೇಲ್ಮನವಿ ಪ್ರಾಧಿಕಾರಿಗೆ ದಂಡ ವಿಧಿಸಿರುವುದು ಗಮನಾರ್ಹವಾಗಿದೆ. ಆರ್‌ಟಿಐ ಅಡಿ ಸಾರ್ವಜನಿಕರು ಯಾವುದೇ ಮಾಹಿತಿಯನ್ನು ಕೇಳಿದರೂ ಒದಗಿಸಬೇಕಾಗುತ್ತದೆ. ಯಾವುದೇ ಮುಚ್ಚಮರೆಯನ್ನು ಮಾಡುವಂತಿಲ್ಲ. ಆದರೆ ಒಬ್ಬ ಪೊಲೀಸ್ ಅಧಿಕಾರಿಯಾಗಿ ಈ ರೀತಿ ನಡೆದುಕೊಂಡಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ.












Click it and Unblock the Notifications