• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಲಬುರಗಿ ಜಿಲ್ಲೆಯಲ್ಲಿ ಭಾರಿ ಮಳೆ: ಪ್ರವಾಹದಲ್ಲಿ ಸಿಲುಕಿರುವ ಕಾರ್ಮಿಕರು

By ಕಲಬುರಗಿ ಪ್ರತಿನಿಧಿ
|

ಕಲಬುರಗಿ, ಅಕ್ಟೋಬರ್ 14: ಕಲಬುರಗಿ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದ್ದು, ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಐನೊಳ್ಳಿಯಲ್ಲಿ ಪ್ರವಾಹದಿಂದಾಗಿ ಎಂಟು ಜನ ಕಾರ್ಮಿಕರು ಸಿಲುಕಿಕೊಂಡಿದ್ದಾರೆ.

ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಐನೊಳ್ಳಿ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದ್ದರಿಂದ ಬೀದರ್-ಚಿಂಚೊಳ್ಳಿ ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಬಿಹಾರ ಮೂಲದ ಎಂಟು ಕಾರ್ಮಿಕರು ಸೇತುವೆ ನಿರ್ಮಾಣ ಸ್ಥಳದಲ್ಲಿಯೇ ಶೆಡ್ ಹಾಕಿಕೊಂಡು ವಾಸವಾಗಿದ್ದರು, ಆದರೆ ಪ್ರವಾಹ ಉಂಟಾಗಿದ್ದರಿಂದ ಕಾರ್ಮಿಕರು ಅತಂತ್ರರಾಗಿದ್ದಾರೆ. ಚಂದ್ರಂಪಳ್ಳಿ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಟ್ಟ ಕಾರಣ ಪ್ರವಾಹ ಉಂಟಾಗಿದ್ದು, ಕಾರ್ಮಿಕರ ರಕ್ಷಣಾ ತಂತ್ರಕ್ಕಾಗಿ ಚಿಂಚೋಳಿ ತಹಶೀಲ್ದಾರ ಅರುಣ ಕುಮಾರ ಕುಲಕರ್ಣಿ ಸ್ಥಳಕ್ಕೆ ಆಗಮಿಸಿದ್ದಾರೆ.

ಬೆಳಗಾವಿ ಜಿಲ್ಲೆಯಾದ್ಯಂತ ವರುಣನ ಅಬ್ಬರ: ಕಟಾವಿಗೆ ಬಂದಿದ್ದ ಕಬ್ಬು ನೆಲಸಮ

ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯ

ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯ

ಪೊಲೀಸ್, ಅಗ್ನಿಶಾಮಕದಳ, ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. ಅದೇ ರೀತಿ ಚಿಂಚೋಳಿ ಪಟ್ಟಣದ ಪಟೇಲ್ ಕಾಲೊನಿಯಲ್ಲಿ ಮಳೆಯ ಅತಿವೃಷ್ಠಿಯಿಂದಾಗಿ ನೀರಿನಲ್ಲಿ ಸಿಲುಕಿಕೊಂಡ ಕುಟುಂಬವನ್ನು ಚಿಂಚೋಳಿ ಠಾಣೆಯ ಪಿಎಸ್ಐ ವಿಶ್ವನಾಥ ಮುದರೆಡ್ಡಿ ಅವರ ತಂಡವು ನೀರಿನಲ್ಲಿ ಸಿಲುಕಿಕೊಂಡ ಕುಟಂಬದ ಸದಸ್ಯರನ್ನು ರಕ್ಷಿಸಿ, ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಯಿತು.

ಹಗ್ಗದ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ

ಹಗ್ಗದ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ

ಮಹಾಮಳೆಯಿಂದಾಗಿ ಅಪಾರ ಪ್ರಮಾಣದ ನೀರು ಮನೆಗೆ ನುಗ್ಗಿದ್ದು, ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ 22 ಜನರನ್ನು ರಕ್ಷಣೆ ಮಾಡಲಾಗಿದೆ. ಚಿಂಚೋಳಿ ತಾಲ್ಲೂಕಿನ ಚಂದಾಪುರ ಗ್ರಾಮದ ಹನುಮಾನ್ ನಗರದ ಬಡವಾಣೆಯ ಮನೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಮನೆಯ ಮೇಲ್ಛಾವಣಿಯಿಂದ ಮತ್ತೊಂದು ಮನೆಗೆ ಮೆಟ್ಟಿಲು ಮೂಲಕ ಜನರ ಹೊರತರಲಾಗಿದೆ. ಬಳಿಕ ಕೆಳಗಡೆ ಇಳಿದ ಮೇಲೆ ಎದೆಯತ್ತರದ ನೀರಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ ಹಗ್ಗದ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ ಪೊಲೀಸರು ರವಾನಿಸಿದ್ದಾರೆ.

ಆರ್ಭಟಿಸುತ್ತಿರುವ ವರುಣ; ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ

ನೀಲಕಂಠೇಶ್ವರ ದೇವಾಲಯ ನೀರಿನಲ್ಲಿ ಮುಳುಗಡೆ

ನೀಲಕಂಠೇಶ್ವರ ದೇವಾಲಯ ನೀರಿನಲ್ಲಿ ಮುಳುಗಡೆ

ಕಲಬುರಗಿ ಜಿಲ್ಲೆಯಲ್ಲಿ ಮಳೆಯ ಅವಾಂತರದಿಂದ ರೌದ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ರೌದ್ರಾವತಿ ನದಿಯ ನೀರು ಕಲಬುರಗಿಯ ಕಾಳಗಿ ಪಟ್ಟಣದಲ್ಲಿರುವ ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಶ್ರೀ ನೀಲಕಂಠೇಶ್ವರ ದೇವಾಲಯ ನೀರಿನಲ್ಲಿ ಮುಳುಗಡೆಯಾಗಿದೆ.

ಬೆಳಗಾವಿಯಲ್ಲಿ ಭಾರೀ ಮಳೆ

ಬೆಳಗಾವಿಯಲ್ಲಿ ಭಾರೀ ಮಳೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಕಾರಣ ರಾಜ್ಯದಲ್ಲಿ ಇನ್ನೂ 3 ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಳೆ, ನಾಡಿದ್ದು ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಬೆಳಗಾವಿಯಲ್ಲಿ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಿದೆ.

English summary
Heavy rain has been raging across the Kalaburagi district for the past one week, which has disrupted the lives of people. Eight workers caught In floods in Ainolli, Kalaburagi District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X