ಯುವತಿಗೆ ಅಸಭ್ಯ ಪ್ರಶ್ನೆ, ಗುಲ್ಬರ್ಗಾ ವಿವಿಯ ಇಬ್ಬರು ಪ್ರಾಧ್ಯಾಪಕರ ಬಂಧನ

Posted By:
Subscribe to Oneindia Kannada

ಕಲಬುರಗಿ, ಜೂನ್ 16 : ಪಿಎಚ್ ಡಿ ಸಂದರ್ಶನ ವೇಳೆ ಯುವತಿಗೆ ಅಸಭ್ಯವಾಗಿ ಪ್ರಶ್ನೆಗಳನ್ನು ಕೇಳಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಗುಲಬರ್ಗಾ ವಿಶ್ವವಿದ್ಯಾಲಯದ ಇಬ್ಬರು ಪ್ರಾಧ್ಯಾಪಕರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಬಡಿಗೇರ್ ಹಾಗೂ ಅದೇ ವಿಭಾಗದ ಪ್ರಾಧ್ಯಾಪಕ ರಮೇಶ್ ರಾಥೋಡ್ ಅವರನ್ನು ಗುಲಬರ್ಗಾ ವಿವಿ ಪೊಲೀಸರು ಬಂಧಿಸಿದ್ದಾರೆ.

ಲೈಂಗಿಕ ಕಿರುಕುಳ : ಗುಲ್ಬರ್ಗ ವಿವಿ ಪ್ರಾಧ್ಯಾಪಕ ಬಂಧನ

ಇತ್ತೀಚೆಗೆ ಪಿಎಚ್ ಡಿ ಸಂದರ್ಶನ ವೇಳೆ ಯುವತಿಗೆ ವಿಷಯಕ್ಕೆ ಸಂಬಂಧವಿಲ್ಲದ ಅಸಭ್ಯ ಪ್ರಶ್ನೆಗಳನ್ನು ಕೇಳಿದ್ದರು ಎಂದು ಪ್ರಾಧ್ಯಾಪಕ ರಮೇಶ್ ರಾಥೋಡ್ ಮೇಲೆ ಗುಲಬರ್ಗಾ ವಿವಿ ಕ್ಯಾಂಪಸ್ ನಲ್ಲಿರುವ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ B.ED ಪ್ರಶ್ನೆ ಪತ್ರಿಕೆ ಸೋರಿಕೆ!

Gulbarga university's two professor arrested

ಯುವತಿ ಆರೋಪವನ್ನು ತಳ್ಳಿ ಹಾಕಿದ ರಮೇಶ್ ರಾಥೋಡ್, ಇದು ನನ್ನ ಮೇಲಿನ ಪಿತೂರಿ. ಬಡಿಗೇರ್ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳು ಈ ರೀತಿ ಪಿತೂರಿ ಮಾಡಿದ್ದಾರೆ.

ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಹಲ್ಲೆ ಮಾಡಿಸಿದ್ದಾರೆಂದು ಬಡಿಗೇರ್ ವಿರುದ್ಧ ಗುಲಬರ್ಗಾ ವಿವಿ ಪೊಲೀಸ್ ಠಾಣೆಯಲ್ಲಿ ರಮೇಶ್ ರಾಥೋಡ್ ದೂರು ದಾಖಲಿಸಿದ್ದರು.

ಆದ್ದರಿಂದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಜಿಲ್ಲಾನ್ಯಾಯಾಲವು ಇವರಿಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿದೆ.

ಒಂದೇ ವಿಭಾಗದ ಪ್ರಾಧ್ಯಾಪಕರಾಗಿ ಒಬ್ಬರಿಗೊಬ್ಬರು ಕೆಸರೆರಚಾಟದಲ್ಲಿ ವಿದ್ಯಾರ್ಥಿಗಳಿಗೆ ಅದ್ಯಾವ ಪಾಠ ಹೇಳುತ್ತಾರೋ ಏನೋ ದೇವರೇ ಬಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Gulbarga university's two professors arrested on Friday,for alleged indecent questions asking to woman in PhD interview.
Please Wait while comments are loading...