ಕಲಬುರಗಿ 13 ಕ್ವಿಂಟಲ್ ಗಾಂಜಾ ವಶ: ಬಂಧಿತ ಆರೋಪಿ ರಾಷ್ಟ್ರೀಯ ಪಕ್ಷದ ಕಾರ್ಯಕರ್ತ

ಕಲಬುರಗಿ, ಸೆ 11: ಬೆಂಗಳೂರು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಲಬುರಗಿಯಲ್ಲಿ ವಶ ಪಡಿಸಿಕೊಳ್ಳಲಾಗಿದ್ದ 1,352 ಕೆಜಿ ಗಾಂಜಾ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರಲ್ಲಿ ಒಬ್ಬ, ಬಿಜೆಪಿ ಕಾರ್ಯಕರ್ತ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನ ಗಾಯತ್ರಿನಗರದ ಆಟೋ ಚಾಲಕ ಜ್ಞಾನಶೇಖರ್, ವಿಜಯಪುರದ ಸಿದ್ಧನಾಥ್, ಬೀದರ್‌ ನ ನಾಗನಾಥ್, ಕಲಬುರಗಿಯ ಚಂದ್ರಕಾತ್ ಬಂಧಿತ ಆರೋಪಿಗಳು. ಇದರಲ್ಲಿ ಚಂದ್ರಕಾಂತ್ ಚೌಹಾಣ್ ಬಿಜೆಪಿ ಕಾರ್ಯಕರ್ತ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು, ಕರ್ನಾಟಕ ಕಾಂಗ್ರೆಸ್ ಮತ್ತು ಚಿತ್ತಾಪುರ ಎಂಎಲ್ಎ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದು, "ಕೋತಿ ಮೊಸರು ತಿಂದು ಮೇಕೆಯ ಮೂತಿಗೆ ಮೆತ್ತಿದಂತೆ" ಎಂದು ಲೇವಡಿ ಮಾಡಲಾಗಿದೆ.

Ganja Case In Kalburgi: One Of The Arrested Is BJP Karyakarta Claims INC Karnataka

"ಕಲ್ಬುರ್ಗಿಯಲ್ಲಿ ವಶಪಡಿಸಿಕೊಂಡ 1,200ಕೆಜಿ ಗಾಂಜಾ ಪ್ರಕರಣದ ಪ್ರಮುಖ ಆರೋಪಿ @BJP4Karnataka ಕಾರ್ಯಕರ್ತ. ಡ್ರಗ್ಸ್, ಗಾಂಜಾ ಮುಂತಾದ ಅಕ್ರಮ ಚಟುವಟಿಕೆಗಳ ತಾಣವಾದ ಬಿಜೆಪಿ "ಕೋತಿ ಮೊಸರು ತಿಂದು ಮೇಕೆಯ ಮೂತಿಗೆ ಮೆತ್ತಿದಂತೆ" ಎಂಬ ಗಾದೆ ಮಾತಿನಂತೆ ಅನ್ಯರತ್ತ ಹುಸಿ ಆರೋಪ ಮಾಡಿ ತಮ್ಮ ಮಾನ ಮುಚ್ಚಿಕೊಳ್ಳಲು ಯತ್ನಿಸುತ್ತಿದೆ" ಇದು ಕಾಂಗ್ರೆಸ್ ಮಾಡಿರುವ ಟ್ವೀಟ್.

ಚಂದ್ರಕಾತ್ ಚೌಹಾಣ್, ಬಿಜೆಪಿಯ ಇತರ ಕಾರ್ಯಕರ್ತರ ಜೊತೆ ತೆಗೆದುಕೊಂಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿತ್ತು. ಇದನ್ನು ಇಟ್ಟುಕೊಂಡು, ಕಾಂಗ್ರೆಸ್, ಬಿಜೆಪಿಯ ಕಾಲೆಳೆದಿದೆ.

ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಬೆಂಗಳೂರಿನ ಶ್ರೇಷಾದ್ರಿಪುರಂ ಠಾಣೆ ಪೊಲೀಸರು 1,352 ಕೆ. ಜಿ. ಗಾಂಜಾವನ್ನು ಕಲಬುರಗಿಯಲ್ಲಿ ವಶಕ್ಕೆ ಪಡೆದಿದ್ದರು. ಇದು ರಾಜ್ಯದಲ್ಲಿ ಇದುವರೆಗೆ ನಡೆಸಲಾಗಿರುವ ಭಾರೀ ಕಾರ್ಯಾಚರಣೆ ಎಂದು ಹೇಳಲಾಗುತ್ತಿದೆ. ಕಲಬುರಗಿಯ ಲಕ್ಷ್ಮಣ್ ನಾಯಕ್ ತಾಂಡಾದಲ್ಲಿ ಕೋಳಿ ಶೆಡ್‌ನಲ್ಲಿ ಗಾಂಜಾವನ್ನು ಸಂಗ್ರಹ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+