ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾ.ಪಂ. ಸದಸ್ಯರ ಹರಾಜು; ಕಲಬುರಗಿಯಲ್ಲಿ 10 ಜನರ ವಿರುದ್ಧ FIR

By ಕಲಬುರಗಿ ಪ್ರತಿನಿಧಿ
|
Google Oneindia Kannada News

ಕಲಬುರಗಿ, ಡಿಸೆಂಬರ್ 08: ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿ ಚುನಾವಣೆ ಕುರಿತಂತೆ ಅಧಿಸೂಚನೆ ಹೊರಡಿಸಿದ್ದು, ಡಿಸೆಂಬರ್ 22 ಮತ್ತು 27ರಂದು ಮತದಾನ ನಡೆಯಲಿರುವುದಾಗಿ ತಿಳಿಸಿದೆ. ರಾಜ್ಯದ 5 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಪ್ರತಿ ಗ್ರಾಮಗಳಲ್ಲಿಯೂ ಚುನಾವಣೆಗೆ ಸಿದ್ಧತೆ ಜೋರಾಗಿದೆ. ಆದರೆ ಕಲಬುರಗಿ ಜಿಲ್ಲೆಯ ಬಿಳವಾರ ಗ್ರಾಮದಲ್ಲಿ ಪಂಚಾಯಿತಿ ಸದಸ್ಯರನ್ನೇ ಹರಾಜು ಹಾಕಲಾಗಿದೆ.

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ ಪಂಚಾಯಿತಿಯ ಸದಸ್ಯರನ್ನು ಹರಾಜು ಹಾಕಿ ಗೆಲ್ಲಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಬಳ್ಳಾರಿಯಲ್ಲಿ ಗ್ರಾ.ಪಂ ಸದಸ್ಯ ಸ್ಥಾನಗಳನ್ನು ಹರಾಜು ಹಾಕಿದ ಗ್ರಾಮಸ್ಥರುಬಳ್ಳಾರಿಯಲ್ಲಿ ಗ್ರಾ.ಪಂ ಸದಸ್ಯ ಸ್ಥಾನಗಳನ್ನು ಹರಾಜು ಹಾಕಿದ ಗ್ರಾಮಸ್ಥರು

ಡಿ.27ರಂದು ಗ್ರಾಮ ಪಂಚಾಯಿತಿ ಚುನಾವಣೆ ನಿಗದಿಯಾಗಿದ್ದು, ಬಿಳವಾರ ವಾರ್ಡ್ ಸಂಖ್ಯೆ 1ಕ್ಕೆ ಚುನಾವಣೆ ನಡೆಯದೇ ಸೋಮವಾರ ಹರಾಜು ಪ್ರಕ್ರಿಯೆ ನಡೆಸಲಾಗಿತ್ತು. ಗೊಲ್ಲಾಳಪ್ಪ ಮ್ಯಾಗೇರಿ, ಹಣಮಂತ ಭೋವಿ, ಹಣಮಂತರಾಯ್ ದೊರೆ, ಬಬ್ರುವಾಹನ ದೊರೆ ಈ ನಾಲ್ವರನ್ನು 26.55 ಲಕ್ಷ ರೂಪಾಯಿಗೆ ಹರಾಜು ಹಾಕಿ ಸದಸ್ಯರನ್ನಾಗಿ ಮಾಡಲಾಗಿತ್ತು.

Kalaburagi: FIR Against 10 People In Relation To Auction Of Gram Panchayat Members In Bilavara

ಹೀಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಲ್ಲಂಘಿಸಿ ಚುನಾವಣೆ ನಡೆಸದೇ ಹರಾಜು ಹಾಕಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಣದ ಬಲದಿಂದ ಹರಾಜು ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲು ಪ್ರಯತ್ನ ಮಾಡಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ ಉಲ್ಲಂಘನೆ ಮಾಡಿರುವ ಕಾರಣ ಈ ಕುರಿತು ಕ್ರಮ ತೆಗೆದುಕೊಳ್ಳಲು ಉಪ ತಹಶೀಲ್ದಾರ್ ನಾಗೇಂದ್ರಪ್ಪ ಪಾಟೀಲ್ ಹಾಗೂ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದೀಗ ಕಲಬುರಗಿ ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ ಅವರ ನಿರ್ದೇಶನದಂತೆ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಗ್ರಾಮದ 6 ಜನ ಮುಖಂಡರು ಮತ್ತು ಹರಾಜಿನಲ್ಲಿ ಆಯ್ಕೆಯಾದ ನಾಲ್ವರು ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

English summary
FIR has been filed against 10 people in relation to auction of gram panchayat member in bilavara village of kalaburagi district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X