ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೀಪಿಕಾ ಅಭಿನಯದ 'ಚಪಾಕ್' ಚಿತ್ರ ಬೆಂಬಲಿಸಲು ಖರ್ಗೆ ಪುತ್ರ ಮಾಡಿದ್ದೇನು!

|
Google Oneindia Kannada News

ಕಲಬುರಗಿ, ಜ 11: ದೀಪಿಕಾ ಪಡುಕೋಣೆ ಪ್ರಮುಖ ಭೂಮಿಕೆಯಲ್ಲಿರುವ 'ಚಪಾಕ್ ' ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಿದೆ. ದೀಪಿಕಾ, ಜೆಎನ್‌ಯುಗೆ ಭೇಟಿ ನೀಡಿದ್ದರಿಂದ, ಬಿಜೆಪಿ ಮತ್ತು ಕೆಲವೊಂದು ಬಲಪಂಥೀಯ ಸಂಘಟನೆಗಳು ಚಿತ್ರವನ್ನು ನಿಷೇಧಿಸುವಂತೆ/ಬಹಿಷ್ಕರಿಸುವಂತೆ ಆಗ್ರಹಿಸಿದ್ದವು.

ಚಿತ್ರದ ಬಗ್ಗೆ ಪರ, ವಿರೋಧ ಚರ್ಚೆಗಳು ತಾರಕಕ್ಕೇರಿರುವ ಬೆನ್ನಲ್ಲೇ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ, ಒಂದು ಹೆಜ್ಜೆ ಮುಂದಿಟ್ಟು, ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ.

ಈ ನಡುವೆ, ಚಿತ್ರದ ಮೊದಲ ದಿನದ ಕಲೆಕ್ಷನ್ ಭಾರೀ ಎನ್ನುವಂತಿಲ್ಲ. ಚಿತ್ರದಲ್ಲಿನ ನಿರ್ದೇಶನ ಮತ್ತು ದೀಪಿಕಾ ಪಡುಕೋಣೆ ನಟನೆ ವ್ಯಾಪಕ ಪ್ರಶಂಸೆಗೊಳಗಾಗಿತ್ತು. ಆದರೆ, ಮೊದಲ ದಿನ ಚಿತ್ರ ಸುಮಾರು ಐದು ಕೋಟಿ ಗಳಿಗೆ ಕಂಡಿದೆ ಎನ್ನುವುದು ಬಾಲಿವುಡ್ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಜೆಎನ್ ಯು ಹಿಂಸಾಚಾರ: ದೀಪಿಕಾ ಪಡುಕೋಣೆ ಬೆನ್ನಿಗೆ ನಿಂತ ರಘುರಾಮ್ ರಾಜನ್ಜೆಎನ್ ಯು ಹಿಂಸಾಚಾರ: ದೀಪಿಕಾ ಪಡುಕೋಣೆ ಬೆನ್ನಿಗೆ ನಿಂತ ರಘುರಾಮ್ ರಾಜನ್

ಜಿಲ್ಲೆಯ ಚಿತ್ತಾಪುರ ಕ್ಷೇತ್ರವನ್ನು ಪ್ರತಿನಿಧಿಸುವ ಪ್ರಿಯಾಂಕ್ ಖರ್ಗೆ, ಎಲ್ಲರೂ ಚಿತ್ರವನ್ನು ನೋಡಿ ಎಂದು ಕರೆ ನೀಡಿದ್ದಾರೆ. ಇವರ ಕರೆಗೆ ಯುವ ಕಾಂಗ್ರೆಸ್ಸಿಗರು ಭರ್ಜರಿಯಾಗಿ ಸ್ಪಂದಿಸಿದ್ದಾರೆ. ವಿಚಾರ ಅದಲ್ಲಾ..

ಎಲ್ಲಾ ಶೋಗಳ ಟಿಕೆಟ್ ಗಳನ್ನು ಖರೀದಿಸಿದ ಯುವ ಕಾಂಗ್ರೆಸ್

ಎಲ್ಲಾ ಶೋಗಳ ಟಿಕೆಟ್ ಗಳನ್ನು ಖರೀದಿಸಿದ ಯುವ ಕಾಂಗ್ರೆಸ್

ನಗರದ ಮೀರಜ್ ಚಿತ್ರಮಂದಿರದಲ್ಲಿ, ಕಲಬರುಗಿ ಕಾಂಗ್ರೆಸ್ ಕಾರ್ಯಕರ್ತರು ಚಪಾಕ್ ಚಿತ್ರದ ಇಂದಿನ (ಜ 11) ಎಲ್ಲಾ ಶೋಗಳ ಟಿಕೆಟ್ ಗಳನ್ನು ಖರೀದಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಂದ ತುಂಬಿ ತುಳುಕುತ್ತಿದ್ದ ಸಿನಿಮಾ ಮಂದಿರದಲ್ಲಿ 'ವಿ ಸಪೋರ್ಟ್ ದೀಪಿಕಾ, ವಿ ಸಪೋರ್ಟ್ ಚಪಾಕ್' ಎನ್ನುವ ಘೋಷಣೆ ಮೊಳಗಿದೆ. ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಧಿಕ್ಕಾರ ಹಾಕಲು ಮರೆಯಲಿಲ್ಲ.

ಪ್ರಿಯಾಂಕ್ ಖರ್ಗೆ ಮಾಡಿದ ಟ್ವೀಟ್

ಪ್ರಿಯಾಂಕ್ ಖರ್ಗೆ ಮಾಡಿದ ಟ್ವೀಟ್

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, "ಜಿಲ್ಲೆಯ ಯುವ ಕಾಂಗ್ರೆಸ್ ಕಾರ್ಯಕರ್ತರು ಚಪಾಕ್ ಸಿನಿಮಾದ ಎಲ್ಲಾ ಶೋಗಳ ಟಿಕೆಟ್ ಅನ್ನು ಖರೀದಿಸಿದ್ದಾರೆ. ಆಸಿಡ್ ದಾಳಿಯ ಸಂತ್ರಸ್ತರಿಗೆ ಬಲ ತುಂಬಲು ಸಣ್ಣದೊಂದು ಪ್ರಯತ್ನವಿದು. ಆ ಮೂಲಕ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನನ್ನಾದರೂ ಮಾಡಬಹುದು ಎನ್ನುವ ಫ್ಯಾಸಿಸ್ಟ್ ಗಳಿಗೆ ಕೊಟ್ಟ ಉತ್ತರವಿದು" ಎಂದು ಟ್ವೀಟ್ ಮಾಡಿದ್ದಾರೆ.

ತುಕ್ಡೆ ತುಕ್ಡೆ ಗ್ಯಾಂಗ್ ಜತೆ ನಿಂತ ದೀಪಿಕಾ ಪಡುಕೋಣೆ: ಸ್ಮೃತಿ ಇರಾನಿ ಕಿಡಿತುಕ್ಡೆ ತುಕ್ಡೆ ಗ್ಯಾಂಗ್ ಜತೆ ನಿಂತ ದೀಪಿಕಾ ಪಡುಕೋಣೆ: ಸ್ಮೃತಿ ಇರಾನಿ ಕಿಡಿ

ಸಿನಿಮಾವನ್ನು ಯಾರೂ ನೋಡದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ

ಸಿನಿಮಾವನ್ನು ಯಾರೂ ನೋಡದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ

ಎಲ್ಲರೂ ಈ ಚಿತ್ರವನ್ನು ವೀಕ್ಷಿಸಬೇಕೆಂದು ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದರು. ದೀಪಿಕಾ ಅಭಿನಯದ ಈ ಸಿನಿಮಾವನ್ನು ಯಾರೂ ನೋಡದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಪ್ರಾರಂಭವಾಗಿತ್ತು. ಇದಕ್ಕೆ ಕಲಬುರಗಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕೌಂಟರ್ ನೀಡಿ, ಟಿಕೆಟ್ ಅನ್ನು ಖರೀದಿಸಿದ್ದರು. ಪ್ರಿಯಾಂಕ್ ಖರ್ಗೆ ಸೂಚನೆ ಮೇರೆಗೆ ಟಿಕೆಟ್ ಬುಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರಿಯಾಂಕ್ ಮಾಡಿರುವ ಟ್ವೀಟಿಗೆ ತರಹೇವಾರಿ ಪ್ರತಿಕ್ರಿಯೆ ಬಂದಿದೆ. ಕೆಲವೊಂದು ಸ್ಯಾಂಪಲ್..

ಟಿಕೆಟ್ ಬ್ಲಾಕ್ ಮಾಡುವುದು, ಬುಕ್ ಮಾಡುವುದು ಎನ್ನುವುದರ ವ್ಯತ್ಯಾಸ ನಿಮಗೆ ತಿಳಿಯುದಿಲ್ಲವೇ

ಟಿಕೆಟ್ ಬ್ಲಾಕ್ ಮಾಡುವುದು, ಬುಕ್ ಮಾಡುವುದು ಎನ್ನುವುದರ ವ್ಯತ್ಯಾಸ ನಿಮಗೆ ತಿಳಿಯುದಿಲ್ಲವೇ

"ಇದೆಂತಾ ರಾಜಕೀಯ, ನೀವು ನಿಮ್ಮ ಶಾಸಕ ಸ್ಥಾನದ ಜವಾಬ್ದಾರಿಯಲ್ಲಿ ಇದ್ದೀರಾ ತಾನೆ", "ಟಿಕೆಟ್ ಬ್ಲಾಕ್ ಮಾಡುವುದು ಮತ್ತು ಬುಕ್ ಮಾಡುವುದರ ನಡುವಿನ ವ್ಯತ್ಯಾಸ ನಿಮಗೆ ತಿಳಿಯುದಿಲ್ಲವೇ" ಎನ್ನುವ ಪ್ರಶ್ನೆಯೂ ಪ್ರಿಯಾಂಕ್ ಖರ್ಗೆಗೆ ಎದುರಾಗಿದೆ. 'ಇದೊಂದು ಕೆಟ್ಟ ರಾಜಕೀಯ' - ಈ ರೀತಿಯ ಪ್ರತಿಕ್ರಿಯೆಗಳೂ ಬಂದಿವೆ.

ದೀಪಿಕಾ ದುಬಾರಿ ಫ್ರೆಂಚ್ ಮದ್ಯವನ್ನು ಸವಿಯುತ್ತಾ ಎಂಜಾಯ್ ಮಾಡುತ್ತಿರಬಹುದು

ದೀಪಿಕಾ ದುಬಾರಿ ಫ್ರೆಂಚ್ ಮದ್ಯವನ್ನು ಸವಿಯುತ್ತಾ ಎಂಜಾಯ್ ಮಾಡುತ್ತಿರಬಹುದು

"ಬಹುಷಃ ಕಾಂಗ್ರೆಸ್ ಕಾರ್ಯಕರ್ತರಿಗೆ ಇದೊಂದು ಆಸಿಡ್ ಸಂತ್ರಸ್ತೆಯ ಸಿನಿಮಾ ಎಂದು ತಿಳಿದಿರಲಿಕ್ಕಿಲ್ಲ", "ಇಡೀ ವಾರಾಂತ್ಯಕ್ಕೆ ಸಿನಿಮಾ ಟಿಕೆಟ್ ಬುಕ್ ಮಾಡುವುದು ತಾನೇ.. ಬೆಂಗಳೂರಿನಲ್ಲಿ ಏನಾದರೂ ಫ್ರೀ ಟಿಕೆಟ್ ಕೊಡಿಸುತ್ತೀರಾ, ಬೈ ದಿ ಬೈ.. ದೀಪಿಕಾ ದುಬಾರಿ ಫ್ರೆಂಚ್ ಮದ್ಯವನ್ನು ಸವಿಯುತ್ತಾ ರೆಸಾರ್ಟಿನಲ್ಲಿ ಎಂಜಾಯ್ ಮಾಡುತ್ತಿರಬಹುದು" ಎನ್ನುವ ಪ್ರತಿಕ್ರಿಯೆಗಳೂ ಬಂದಿವೆ.

English summary
Kalaburagi Youth Congress have blocked an entire show tomorrow for #Chhapaak, Priyank Kharge Tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X