ಚಿಂಚೋಳಿ ಉಪಚುನಾವಣೆ: ಉಮೇಶ್ ಜಾಧವ್ ಮಗನಿಗೆ ಬಿಜೆಪಿ ಟಿಕೆಟ್?

Recommended Video

      ಬಿಜೆಪಿ ಶಾಸಕ ಉಮೇಶ್ ಜಾಧವ್ ಮಗ ಅವಿನಾಶ್ ಜಾಧವ್ ಗೆ ಬಿಜೆಪಿ ಟಿಕೆಟ್ | Oneindia Kannada

      ಕಲಬುರಗಿ, ಏಪ್ರಿಲ್ 27: ಡಾ. ಉಮೇಶ್ ಜಾಧವ್ ಅವರ ರಾಜೀನಾಮೆಯಿಂದ ತೆರವಾಗಿರುವ ಚಿಂಚೋಳಿ ಕ್ಷೇತ್ರಕ್ಕೆ ಮೇ 19ರಂದು ಚುನಾವಣೆಯ ಮುಹೂರ್ತ ಫಿಕ್ಸ್ ಆಗಿದೆ. ಈ ಕ್ಷೇತ್ರಕ್ಕೆ ಉಮೇಶ್ ಜಾಧವ್ ಅವರ ಮಗ ಡಾ. ಅವಿನಾಶ್ ಜಾಧವ್ ಅವರ ಹೆಸರನ್ನು ಬಿಜೆಪಿ ಅಂತಿಮಗೊಳಿಸಿದೆ ಎನ್ನಲಾಗಿದೆ.

      ತಮ್ಮ ಮಗನಿಗೆ ಬಿಜೆಪಿ ಟಿಕೆಟ್ ಕೊಡುವುದು ಖಾತರಿ. ರಾಜ್ಯ ನಾಯಕರು ತಮ್ಮ ಮಗನಿಗೆ ಟಿಕೆಟ್ ನೀಡಲು ಸಮ್ಮತಿ ಸೂಚಿಸಿದ್ದು, ಹೈಕಮಾಂಡ್‌ಗೂ ಆತನ ಹೆಸರನ್ನೇ ಶಿಫಾರಸು ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

      ಲೋಕಸಭಾ ಚುನಾವಣೆ ವಿಶೇಷ ಪುಟ

      ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿರುವ ಉಮೇಶ್ ಜಾಧವ್, ತಮ್ಮ ಮಗ ಅಥವಾ ಸಹೋದರನಿಗೆ ಚಿಂಚೋಳಿ ಉಪ ಚುನಾವಣೆಯ ಟಿಕೆಟ್ ಕೊಡಿಸಲು ತೀವ್ರ ಕಸರತ್ತು ನಡೆಸಿದ್ದರು. ಕೊನೆಗೆ ಸಹೋದರ ರಾಮಚಂದ್ರ ಜಾಧವ್ ಅವರಿಗೆ ಆರೋಗ್ಯ ಸರಿಯಿಲ್ಲ ಎಂಬ ನೆಪ ನೀಡಿ ಅವರು ಮಗ ಅವಿನಾಶ್ ಜಾಧವ್ ಪರ ಬ್ಯಾಟ್ ಬೀಸಿದ್ದರು.

      ಶುಕ್ರವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಉಪ ಚುನಾವಣೆಗಳ ಟಿಕೆಟ್ ಆಕಾಂಕ್ಷಿಗಳ ಕುರಿತು ಸಮಾಲೋಚನೆ ನಡೆಸಲಾಯಿತು. ಇದರಲ್ಲಿ ಮಾಜಿ ಸಚಿವ ಸುನೀಲ್ ವಲ್ಯಾಪುರ್ ಮತ್ತು ಅವಿನಾಶ್ ಜಾಧವ್ ಅವರ ಹೆಸರು ಪ್ರಸ್ತಾಪವಾಗಿತ್ತು ಎನ್ನಲಾಗಿದೆ.

      ಗೆಲ್ಲುವ ವ್ಯಕ್ತಿಯ ಆಯ್ಕೆ

      ಗೆಲ್ಲುವ ವ್ಯಕ್ತಿಯ ಆಯ್ಕೆ

      ಬಿಜೆಪಿ ಹೈಕಮಾಂಡ್ ನನ್ನ ಮಗನಿಗೆ ಟಿಕೆಟ್ ನೀಡಲು ನಿರ್ಧರಿಸಿದೆ. ನನ್ನ ಸಹೋದರನಿಗೆ ಟಿಕೆಟ್ ನೀಡುವ ವಿಚಾರ ಪ್ರಸ್ತಾಪ ಆಗಿತ್ತು. ಆರೋಗ್ಯ ಸರಿಯಿಲ್ಲದ ಕಾರಣ ರಾಮಚಂದ್ರ ಜಾಧವ್‌ಗೆ ಟಿಕೆಟ್ ಸಿಕ್ಕಿಲ್ಲ. ಈ ವಿಚಾರವಾಗಿ ನಮ್ಮ ಕುಟುಂಬದಲ್ಲಿ ಯಾವುದೇ ಗೊಂದಲವಿಲ್ಲ. ಗೆಲ್ಲುವ ವ್ಯಕ್ತಿ ಎಂಬ ಕಾರಣಕ್ಕೆ ಅವಿನಾಶ್ ಅವರನ್ನು ಪಕ್ಷ ಆಯ್ಕೆ ಮಾಡಿದೆ ಎಂದು ಉಮೇಶ್ ಜಾಧವ್ ಹೇಳಿದ್ದಾರೆ.

      ಸೋಮವಾರ ಅವಿನಾಶ್ ನಾಮಪತ್ರ

      ಸೋಮವಾರ ಅವಿನಾಶ್ ನಾಮಪತ್ರ

      ಬೇರೆಯವರಿಗೆ ಟಿಕೆಟ್ ಕೊಡಿಸಲು ಮುಮದಾಗಿದ್ದೆವು. ನಮ್ಮ ಕುಟುಂಬಸ್ಥರೇ ಸ್ಪರ್ಧಿಸಬೇಕೆಂಬ ಒತ್ತಾಯ ಬಂದಿದ್ದರಿಂದ ಅವಿನಾಶ್ ಜಾಧವ್ ಹೆಸರನ್ನು ಅಂತಿಮಗೊಳಿಸಲಾಗಿದೆ. ಸೋಮವಾರ ಅವಿನಾಶ್ ಜಾಧವ್ ನಾಮಪತ್ರ ಸಲ್ಲಿಸಲಿದ್ದಾರೆ. ಚಿಂಚೋಳಿ ಉಪ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಅವಿನಾಶ್ ಗೆಲುವು ಸಾಧಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

      ಪಕ್ಷದ ನಿರ್ಣಯಕ್ಕೆ ಬದ್ಧ

      ಪಕ್ಷದ ನಿರ್ಣಯಕ್ಕೆ ಬದ್ಧ

      ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ವಹಿಸಿಲ್ಲ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹಿಂದೆಯೇ ಹೇಳಿದ್ದೆ. ಅವಿನಾಶ ಜಾಧವ್ ಇನ್ನೂ ಯುವಕರು. ಹೀಗಾಗಿ ಅವರಿಗೆ ಟಿಕೆಟ್ ನಿಡಲು ಪಕ್ಷ ಒಲವು ತೋರಿದೆ. ಅವನಿನಾಶ್ ಬೆಂಬಲಕ್ಕೆ ನಿಂತು ಅವರನ್ನು ಗೆಲ್ಲಿಸುತ್ತೇವೆ ಎಂದು ರಾಮಚಂದ್ರ ಜಾಧವ್ ಹೇಳಿದ್ದಾರೆ.

      'ಕುಟುಂಬ ರಾಜಕಾರಣ ವಿರೋಧಿಸಿಲ್ಲ'

      'ಕುಟುಂಬ ರಾಜಕಾರಣ ವಿರೋಧಿಸಿಲ್ಲ'

      ನಾನು ಕುಟುಂಬ ರಾಜಕಾರಣ ವಿರೋಧಿಸಿಲ್ಲ. ಎಲ್ಲ ಅಧಿಕಾರವನ್ನೂ ತಮ್ಮ ಬಳಿ ಇಟ್ಟುಕೊಳ್ಳುವುದನ್ನು ವಿರೋಧಿಸಿದ್ದೆ. ರಾಜಕಾರಣದಲ್ಲಿ ಮಾಜಿ ಸಿದ್ದರಾಮಯ್ಯ ಮಗ ಯತೀಂದ್ರ ಇದ್ದಾರೆ. ಹಾಗೆಯೇ ಗಣೇಶ್ ಹುಕ್ಕೇರಿ ಆಜಯ್ ಸಿಂಗ್ ಎಲ್ಲರೂ ಇದ್ದಾರೆ. ಅವರಾರ ಬಗೆಯೂ ವಿರೋಧ ವ್ಯಕ್ತಪಡಿಸಿಲ್ಲ. ಸಾಮಾಜಿಕ ನ್ಯಾಯ ಕಾಪಾಡಿಲ್ಲ ಎಂದು ಹೇಳಿದ್ದೆ. ನಮ್ಮದು ರಾಜಕೀಯ ಕುಟುಂಬ. ಜನರ ಒತ್ತಾಯದ ಮೇರೆಗೆ ಪುತ್ರನನ್ನು ಕಣಕ್ಕಿಳಿಸುತ್ತಿದ್ದೇನೆ. ಯುದ್ಧಕ್ಕೆ ಕಳಿಸಿದಂತೆ ಮಗನನ್ನು ರಾಜಕೀಯಕ್ಕೆ ಕಳಿಸುತ್ತಿದ್ದೇನೆ ಎಂದು ಕುಟುಂಬ ರಾಜಕಾರಣ ವಿರೋಧಿಸಿ ನೀಡಿದ್ದ ಹೇಳಿಕೆಗೆ ಉಮೇಶ್ ಜಾಧವ್ ಸ್ಪಷ್ಟೀಕರಣ ನೀಡಿದರು.

      ಸುನೀಲ್ ವಲ್ಯಾಪುರ್ ಪೈಪೋಟಿ

      ಸುನೀಲ್ ವಲ್ಯಾಪುರ್ ಪೈಪೋಟಿ

      ಉಮೇಶ್ ಜಾಧವ್ ಅವರ ರಾಜೀನಾಮೆಯಿಂದ ತೆರವಾಗಿರುವ ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಮಾಜಿ ಸಚಿವ ಸುನೀಲ್ ವಲ್ಯಾಪುರ್ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಟಿಕೆಟ್‌ಗಾಗಿ ನಾಯಕರ ಮನವೊಲಿಸುವ ಕಸರತ್ತು ನಡೆಸಿದ್ದಾರೆ. ಸುನೀಲ್ ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಶನಿವಾರ ಚಿಂಚೋಳಿಯಲ್ಲಿ ಸಭೆ ನಡೆಸಲಿದ್ದಾರೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ಸುನೀಲ್ ಹೇಳಿದ್ದಾರೆ. ಒಂದು ವೇಳೆ ಉಮೇಶ್ ಜಾಧವ್ ಅವರ ಕುಟುಂಬಕ್ಕೆ ಪಕ್ಷ ಮಣೆ ಹಾಕಿದರೆ ಸುನೀಲ್ ಅವರು ಬಂಡಾಯ ಏಳುವ ಸಾಧ್ಯತೆ ಇದೆ ಎನ್ನಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+