ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇರಳಕ್ಕೆ ನೆರವು ನೀಡುವಲ್ಲಿ ಮೋದಿ ತಾರತಮ್ಯ ಮಾಡಿದ್ದಾರೆ: ಖರ್ಗೆ

By Manjunatha
|
Google Oneindia Kannada News

ಕಲಬುರಗಿ, ಆಗಸ್ಟ್ 24: ಪ್ರವಾಹ ಪೀಡಿತ ಕೇರಳಕ್ಕೆ ನೆರವು ನೀಡುವಲ್ಲಿ ಪ್ರಧಾನಿ ಮೋದಿ ಅವರು ತಾರತಮ್ಯ ನೀತಿ ಅನುಸರಿಸಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಕೇರಳ ಪ್ರವಾಹ: ಯುಎಇ ನೆರವು ಕೇಂದ್ರ ತಿರಸ್ಕರಿಸಿದ್ದೇಕೆ ಗೊತ್ತೇ?ಕೇರಳ ಪ್ರವಾಹ: ಯುಎಇ ನೆರವು ಕೇಂದ್ರ ತಿರಸ್ಕರಿಸಿದ್ದೇಕೆ ಗೊತ್ತೇ?

ಕಲಬುರಗಿಯಲ್ಲಿ ಮಾತನಾಡಿದ ಅವರು, ಕೇರಳ ಸರ್ಕಾರ 2 ಸಾವಿರ ಕೋಟಿ ನೆರವು ಕೋರಿತ್ತು. ಖುದ್ದು ನೆರೆಯ ವೈಮಾನಿಕ ವೀಕ್ಷಣೆ ಮಾಡಿದ ಮೋದಿ ಕೊಟ್ಟಿದ್ದು 600 ಕೋಟಿ ಮಾತ್ರ. ಇದು ಕೇರಳಕ್ಕೆ ಏನೇನೂ ಸಾಕಾಗದು ಎಂದಿದ್ದಾರೆ.

ಹಾನಿ ಪರಿಶೀಲನೆ ಬಳಿಕ ಕೇರಳಕ್ಕೆ ಹೆಚ್ಚುವರಿ ಪರಿಹಾರ: ಕೇಂದ್ರದ ಸ್ಪಷ್ಟನೆ ಹಾನಿ ಪರಿಶೀಲನೆ ಬಳಿಕ ಕೇರಳಕ್ಕೆ ಹೆಚ್ಚುವರಿ ಪರಿಹಾರ: ಕೇಂದ್ರದ ಸ್ಪಷ್ಟನೆ

ವಿದೇಶದ ನೆರವಿಗೂ ಮೋದಿ ಅಡ್ಡಗಾಲು ಹಾಕಿದ್ದಾರೆ ಎಂದ ಅವರು, ಮೊದಲಿಗೆ ವಿದೇಶಿ ನೆರವು ಪಡೆದುಕೊಳ್ಳಲಾಗುತ್ತಿತ್ತು. ಆದರೆ ನಮ್ಮ ಸರ್ಕಾರ ಇದರ ಮೇಲೆ ನಿರ್ಭಂಧ ಹೇರಿತ್ತು. ಆದರೆ ಈಗ ಕೂಡಲೇ ಮೋದಿ ಅವರು ಸರ್ವಪಕ್ಷ ಸಭೆ ಕರೆದು ವಿದೇಶಿ ನೀತಿಗೆ ಧಕ್ಕೆ ಆಗದಂತೆ ನೆರವು ಪಡೆಯುವಂತೆ ನೀತಿ ಬದಲಾಯಿಸಬೇಕು ಎಂದಿದ್ದಾರೆ.

Central government should re think about its foreign policy : Kharge

ಯು.ಎ.ಇ ಸರ್ಕಾರವು ಕೇರಳಕ್ಕೆ 700 ಕೋಟಿ ನೆರವು ನೀಡುವುದಾಗಿ ಘೋಷಿಸಿತ್ತು. ಆದರೆ ಕೇಂದ್ರದ ವಿದೇಶಿ ನೀತಿಯಿಂದಾಗಿ ನೆರವು ಕೆರಳಕ್ಕೆ ಧಕ್ಕದಂತಾಗುತ್ತಿದೆ ಎಂದು ಅವರು ಹೇಳಿದರು.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ವಿದೇಶಿ ನೆರವು ತಿರಸ್ಕರಿಸಿದರೆ ಕೇಂದ್ರವೇ ಮುಂದೆಬಂದು ಸೂಕ್ತ ಸಹಾಯ ಮಾಡುವಂತಾಗಬೇಕು ಎಂದ ಅವರು, ಕೇಂದ್ರವು ಕೊಡಗಿನ ಪುನರ್‌ ನಿರ್ಮಾಣಕ್ಕೂ ಮೋದಿ ಸೂಕ್ತ ಆರ್ಥಿಕ ನೆರವು ನೀಡಬೇಕು ಎಂದು ಖರ್ಗೆ ಒತ್ತಾಯಿಸಿದರು.

English summary
Congress leader Mallikarjun Kharge said Modi and his government should re think about its foreign policy about taking foreign help. He said Modi not given enough economic help to Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X