ಚಿಂಚೋಳಿ : ಬಸ್ ನಲ್ಲೇ ನೇಣಿಗೆ ಶರಣಾದ ಕಂಡಕ್ಟರ್

Written By: Ramesh
Subscribe to Oneindia Kannada

ಕಲಬುರಗಿ, ಅಕ್ಟೋಬರ್ ಅ.05 : ಕೆಎಸ್ ಆರ್ ಟಿಸಿ ಬಸ್ ಕಂಡಕ್ಟರ್ ಬಸ್ ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಕಲಬುರಗಿ ಜಿಲ್ಲೆ ಚಿಂಚೋಳಿ ಪಟ್ಟಣದಲ್ಲಿ ನಡೆದಿದೆ.

ವೀರಪ್ಪ(35) ಆತ್ಮಹತ್ಯೆ ಮಾಡಿಕೊಂಡಿರುವ ಬಸ್ ನಿರ್ವಾಹಕ. ಕೆಲಸದ ವೇಳೆ ಸಂಚಾರಿ ನಿರೀಕ್ಷಕರು ಬಸ್ ನಲ್ಲಿ ಪ್ರಯಾಣಿಸುವವರ ಟಿಕೆಟ್ ಪರೀಶಿಲಿಸಿದ್ದಾರೆ. ಕೆಲ ಪ್ರಯಾಣಿಕರ ಬಳಿ ಟಿಕೆಟ್ ಇಲ್ಲವಾಗಿದ್ದರಿಂದ ಕಂಡಕ್ಟರ್ ವೀರಪ್ಪ ಅವರ ಮೇಲೆ ದಂಡ ವಿಧಿಸಿದ್ದಾರೆ.

Suicide

ಇದರಿಂದ ಮನನೊಂದು ವೀರಪ್ಪ ಚಿಂಚೋಳ್ಳಿ ಬಸ್‌ ನಿಲ್ದಾಣದಲ್ಲಿ ರಾತ್ರಿ ತಂಗಿದ್ದಾಗ ಬಸ್‌ನಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.​ ಸದ್ಯ ಚಿಂಚೋಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಈ ದಾಖಲಾಗಿದೆ.

ಇತ್ತೀಚೆಗಷ್ಟೇ ಬಸ್ ನಿರ್ವಾಹಕರೊಬ್ಬರು ಪ್ರಯಾಣಿಕರೊಬ್ಬರ ಜೊತೆ ಚಿಲ್ಲರೆ ಹಣಕ್ಕಾಗಿ ಕಿತ್ತಾಡಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Eranna 33-year-old bus conductor allegedly committed suicide by hanging himself inside a bus at chincholi town in Kalaburagi district oct 04.
Please Wait while comments are loading...