ಬಿಎಸ್ವೈ ಸಿನಿಮಾಕ್ಕೆ ಆರಂಭದಲ್ಲೇ ವಿಘ್ನ, ಯಡಿಯೂರಪ್ಪ ಗರಂ

ನನ್ನ ಜೀವನ ಆಧಾರಿತ ಸಿನಿಮಾ ನಿರ್ಮಿಸಲು ಯಾರಿಗೂ ಅನುಮತಿ ನೀಡಿಲ್ಲ, ಸಿನಿಮಾ ಮಾಡುವ ಅವಶ್ಯಕತೆಯೂ ಇಲ್ಲ. ಮುಂದಿನ ಚುನಾವಣೆ ಬಗ್ಗೆ ನಾವು ನಮ್ಮ ಗುರಿ ಇರಿಸಬೇಕಿದೆ : ಯಡಿಯೂರಪ್ಪ

ಕಲಬುರಗಿ, ಜೂನ್ 02: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಬಗ್ಗೆ ಸಿನಿಮಾ ಬರುತ್ತಿದೆ. ಬಿಜೆಪಿ ಅಭಿಮಾನಿಗಳು ಬಿಎಸ್ ಯಡಿಯೂರಪ್ಪ ಅವರ ಬಗ್ಗೆ ಸಿನಿಮಾ ಮಾಡ್ತಾ ಇದ್ದಾರೆ ಎಂಬ ಸುದ್ದಿ ಓದಿರುತ್ತೀರಿ. ಈ ಬಗ್ಗೆ ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರೇ ಪ್ರತಿಕ್ರಿಯಿಸಿದ್ದಾರೆ.

ಕಲಬುರಗಿಯಲ್ಲಿ ಬರ ಅಧ್ಯಯನ ಪ್ರವಾಸದಲ್ಲಿರುವ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಅವರು, ತಮ್ಮ ಜೀವನ ಆಧಾರಿತ ಸಿನಿಮಾ ಸೆಟ್ಟೇರಲು ಸಿದ್ಧವಾಗುರತ್ತಿರುವ ಸುದ್ದಿಗೆ ಗುದ್ದು ನೀಡಿದ್ದಾರೆ.

BS Yeddyurappa : permission not granted to make biopic

ನನ್ನ ಜೀವನ ಆಧಾರಿತ ಸಿನಿಮಾ ನಿರ್ಮಿಸಲು ಯಾರಿಗೂ ಅನುಮತಿ ನೀಡಿಲ್ಲ, ಸಿನಿಮಾ ಮಾಡುವ ಅವಶ್ಯಕತೆಯೂ ಇಲ್ಲ. ಮುಂದಿನ ಚುನಾವಣೆ ಬಗ್ಗೆ ನಾವು ನಮ್ಮ ಗುರಿ ಇರಿಸಬೇಕಿದೆ ಎಂದು ಗರಂ ಆಗಿ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದಾರೆ.[ಯಡಿಯೂರಪ್ಪ ಪಾತ್ರದಲ್ಲಿ ಉಪೇಂದ್ರ?]

ಬಿಜೆಪಿಯ ಮುಖಂಡ ರುದ್ರೇಶ್ ಎನ್ನುವರು ಚಿತ್ರದ ನಿರ್ಮಾಪಕರಾಗಿದ್ದು ಬಿಎಸ್ ವೈ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಕಾಣಿಸಿಕೊಳ್ಳಲಿದ್ದಾರೆ. ಇನ್ನು ಶೋಭಾ ಕರಂದ್ಲಾಜೆ ಪಾತ್ರದಲ್ಲಿ ಶೃತಿ ನಟಿಸಲಿದ್ದು ಈ ಚಿತ್ರದಲ್ಲಿ ಕುಮಾರ್ ಬಂಗಾರಪ್ಪ, ಜಗ್ಗೇಶ್ ಇತರರು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ಸಿನಿಮಾ ನಿರ್ಮಾಣದ ಕನಸಿಗೆ ತಣ್ಣಿರೆರಚಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+