ಸಿದ್ದರಾಮಯ್ಯ ಕುರಿತ ವಿಶ್ವನಾಥ್ ಹೇಳಿಕೆಗೆ ಬಿಎಸ್ ವೈ ಕೊಟ್ಟ ಪ್ರತಿಕ್ರಿಯೆ ಇದು
Recommended Video
ಕಲಬುರ್ಗಿ, ಮೇ.13:ಕುಂದಗೋಳ ಮತ್ತು ಚಿಂಚೋಳಿಯಲ್ಲಿ ದೊಡ್ಡ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಹತಾಶೆಯಿಂದ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ವಿರುದ್ಧ ಮಾತನಾಡುತ್ತಿದ್ದಾರೆ.ಲೋಕಸಭೆಯಲ್ಲಿ ಕಾಂಗ್ರೆಸ್ ಎರಡಂಕಿ ದಾಟಲ್ಲ. ಮಲ್ಲಿಕಾರ್ಜುನ ಖರ್ಗೆ ಸೇರಿ ಇತರೆ ಕಾಂಗ್ರೆಸ್ ನಾಯಕರು ಮೋದಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಮೋದಿ ವಿರುದ್ಧ ಮಾತಾಡಿದರೆ ದೊಡ್ಡವರಾಗುತ್ತೇವೆ ಅಂದುಕೊಂಡಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಕುರಿತ ವಿಶ್ವನಾಥ್ ಹೇಳಿಕೆ ಕುಮಾರಸ್ವಾಮಿ ಹೇಳಿಕೆಯಾಗಿದೆ.ಲೋಕಸಭೆ ಚುನಾವಣೆ ನಂತರ ಸರ್ಕಾರ ಪತನ ಖಚಿತ. ಇಬ್ಬರ ಕಚ್ಚಾಟದಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ.
ತಾಕತ್ತಿದ್ದರೆ ಶಾಸಕರನ್ನು ಇಟ್ಟುಕೊಳ್ಳಲಿ.ಅದನ್ನು ಬಿಟ್ಟು ನಮ್ಮ ಬಗ್ಗೆ ಮಾತಾಡೋದು ಬಿಡಲಿ ಎಂದು ಬಿಎಸ್ ವೈ ತಾಕೀತು ಮಾಡಿದರು.

ಮೇ 23ರಂದು ಫಲಿತಾಂಶ ಬಂದ ಮೇಲೆ ಏನು ಬೇಕಾದರೂ ಆಗಬಹುದು. ವಿಶ್ವನಾಥ್ ಹೇಳಿಕೆಯಿಂದ ಗೊತ್ತಾಗುತ್ತದೆ ಒಳಗಡೆ ಎಷ್ಟು ಕಚ್ಚಾಟವಿದೆ ಎಂದು.ಅದಾಗಿಯೇ ಸರ್ಕಾರ ಪತನವಾಗುತ್ತೆ.
ಅಲ್ಲಿವರೆಗೂ ನಾವು ಕಾದು ನೋಡುವ ತಂತ್ರ ಅನುಸರಿಸುತ್ತೇವೆ ಎಂದು ಬಿಎಸ್ ವೈ ಸ್ಪಷ್ಟಪಡಿಸಿದರು.












Click it and Unblock the Notifications