ಕಲಬುರಗಿ-ಬೀದರ್ ರೈಲು ಮಾರ್ಗದ ವಿಶೇಷತೆಗಳು

Posted By: Gururaj
Subscribe to Oneindia Kannada

ಕಲಬುರಗಿ, ಅಕ್ಟೋಬರ್ 24 : ಹೈದರಾಬಾದ್ ಕರ್ನಾಟಕ ಭಾಗದ ಜನರ ಮೂರು ದಶಕಗಳ ಕನಸು ನನಸಾಗುತ್ತಿದೆ. ಕಲಬುರಗಿ-ಬೀದರ್ ನಡುವಿನ ರೈಲು ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದೆ. ಈ ಮಾರ್ಗದಲ್ಲಿ 2 ಕಿ.ಮೀ. ಸುರಂಗ ಮಾರ್ಗವೂ ಸೇರಿದೆ.

ಕಲಬುರಗಿ-ಬೀದರ್ ನಡುವಿನ 104 ಕಿ.ಮೀ.ಉದ್ದದ ರೈಲು ಮಾರ್ಗ ಪೂರ್ಣಗೊಂಡಿದೆ. ಅಕ್ಟೋಬರ್‌ 29ರಂದು ಪ್ರಧಾನಿ ನರೇಂದ್ರ ಮೋದಿ ಬೀದರ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರೈಲು ಮಾರ್ಗವನ್ನು ಉದ್ಘಾಟಿಸಲಿದ್ದಾರೆ.

ಅ.29ರಂದು ಬೀದರ್-ಕಲಬುರಗಿ ರೈಲ್ವೆ ಮಾರ್ಗ ಲೋಕಾರ್ಪಣೆ

All set for railway service on Kalaburagi-Bidar route

ರೈಲು ಮಾರ್ಗದ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿದ್ದು, ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ಕಲಬುರಗಿ-ಬೀದರ್ ನಡುವೆ 13 ನಿಲ್ದಾಣಗಳಿವೆ. ಮೊದಲು 383 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ನಂತರ 1,542 ಕೋಟಿ ಪರಿಷ್ಕೃತ ವೆಚ್ಚದಲ್ಲಿ ಯೋಜನೆ ಪೂರ್ಣಗೊಂಡಿದೆ.

ಇನ್ಮುಂದೆ ವೇಗವಾಗಿ ಓಡಲಿವೆ ಭಾರತೀಯ ರೈಲುಗಳು

ಈ ರೈಲು ಮಾರ್ಗ ಯೋಜನೆಗೆ 1999ರಲ್ಲಿ ಚಾಲನೆ ಸಿಕ್ಕಿತ್ತು. ಆದರೆ, ಅನುದಾನದ ಕೊರತೆಯಿಂದಾಗಿ ಯೋಜನೆ ನೆನೆಗುದಿಗೆ ಬಿದ್ದಿತ್ತು. ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದಾಗ ಅನುದಾನ ಬಿಡುಗಡೆಯಾಯಿತು. ನಂತರ ಕಾಮಗಾರಿಗೆ ವೇಗ ಸಿಕ್ಕಿತು.

All set for railway service on Kalaburagi-Bidar route

ಈ ರೈಲು ಮಾರ್ಗದಲ್ಲಿ 2 ಕಿ.ಮೀ.ಉದ್ದದ ಸುರಂಗ ಮಾರ್ಗವಿದೆ. ಮರಗುತ್ತಿ ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಈ ರೈಲು ಮಾರ್ಗದಿಂದ ಕಲಬುರಗಿ ಹಾಗೂ ಬೀದರ್ ಜನರಿಗೆ ಅನುಕೂಲವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kalaburagi-Bidar railway line all set for service. Prime Minister Narendra Modi will inaugurate the railway line on October 29, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ