• search
 • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುಮಾರಸ್ವಾಮಿ ಮುಂದೆಯೇ 'ನಿಖಿಲ್ ಎಲ್ಲಿದ್ದೀಯಪ್ಪಾ' ಎಂದ ಅರ್ಚಕ!

|
   ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ಮುಜುಗರಕ್ಕೀಡಾದ ಎಚ್ ಡಿ ಕುಮಾರಸ್ವಾಮಿ | Oneindia Kannada

   ಕಲಬುರಗಿ, ಮೇ 14: ನಿಖಿಲ್ ಕುಮಾರಸ್ವಾಮಿ ಮತ್ತು ಕುಮಾರಸ್ವಾಮಿ ಅವರನ್ನು ವ್ಯಂಗ್ಯ ಮಾಡುವ 'ನಿಖಿಲ್ ಎಲ್ಲಿದ್ದೀಯಪ್ಪಾ' ಭಾರಿ ಟ್ರೋಲ್ ಆಗಿತ್ತು, ಎಷ್ಟರ ಮಟ್ಟಿಗೆ ಎಂದರೆ ಸ್ವತಃ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರುಗಲೇ ಟ್ರೋಲ್ ಮಾಡುವವರ ವಿರುದ್ಧ ವಾಗ್ದಾಳಿ ನಡೆಸಿದ್ದರು.

   ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

   ಆದರೆ ಇಂದು ಅರ್ಚಕರೊಬ್ಬರು ಸ್ವತಃ ಕುಮಾರಸ್ವಾಮಿ ಮುಂದೆಯೇ 'ನಿಖಿಲ್ ಎಲ್ಲಿದ್ದೀಯಪ್ಪಾ' ಎಂದು ಬಿಟ್ಟಿದ್ದಾರೆ.

   ಕುಮಾರಸ್ವಾಮಿ ಅವರು ಇಂದು ಕಲಬುರಗಿಯ ಗಾಣಿಗಪುರದ ದತ್ತಾತ್ರೆಯ ದೇವಸ್ಥಾನಕ್ಕೆ ತೆರಳಿದ್ದರು, ಅವರೊಂದಿಗೆ ಜೆಡಿಎಸ್ ಕಾರ್ಯಕರ್ತರು, ಬೆಂಬಲಿಗರು ದೇವಸ್ಥಾನಕ್ಕೆ ಹೋಗಿದ್ದರು, ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ಅರ್ಚಕರು ಅಚಚಾನಕ್ಕಾಗಿ 'ನಿಖಿಲ್ ಎಲ್ಲಿದ್ದೀಯ' ಎಂದು ಕರೆದಿದ್ದಾರೆ, ಇದರಿಂದ ಕೆಲ ಕಾಲ ಅಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

   ಮಂಡ್ಯ ಚುನಾವಣೆ: ಐತಿಹಾಸಿಕ ದೇವಾಲಯದಲ್ಲಿ ಹೊರಬಿದ್ದ ಹೂವಿನ ಭವಿಷ್ಯ

   ಆದದ್ದಿಷ್ಟು, ಅರ್ಚಕ ದತ್ತಾತ್ರೆಯ ಅವರ ಮಗನ ಹೆಸರೂ ನಿಖಿಲ್ ಎಂದೇ ಆಗಿದೆ. ಆತ ಪೂಜೆಗೆ ಬೇಕಾದ ಸಾಮಗ್ರಿಯೊಂದನ್ನು ತರಲು ಹೋದವ, ಜನಜಂಗುಳಿಯ ಹಿಂದೆ ಸಿಲುಕಿಕೊಂಡಿದ್ದಾನೆ, ಅದಕ್ಕೆ ಅರ್ಚಕ ದತ್ತಾತ್ರೆಯ ಅವರು ನಿಖಿಲ್ ಎಲ್ಲಿದ್ದೀಯಾ? ಎಂದು ಜೋರಾಗಿ ಪ್ರಶ್ನಿಸಿದ್ದಾರೆ.

   ಅರ್ಚಕರ ಮೇಲೆ ರೇಗಿದ ಬೆಂಬಲಿಗರು

   ಅರ್ಚಕರ ಮೇಲೆ ರೇಗಿದ ಬೆಂಬಲಿಗರು

   ಆದರೆ ಇದನ್ನು ತಪ್ಪು ತಿಳಿದುಕೊಂಡ ಕುಮಾರಸ್ವಾಮಿ ಬೆಂಬಲಿಗರು, ಅರ್ಚಕರ ಮೇಲೆ ರೇಗಿದ್ದಾರೆ, ಕೂಡಲೇ ಎಚ್ಚೆತ್ತುಕೊಂಡ ಅರ್ಚಕರು ಕುಮಾರಸ್ವಾಮಿ ಅವರಿಗೆ ಇರುವ ವಿಷಯವನ್ನು ವಿವರಿಸಿದ್ದಾರೆ. ಅಲ್ಲದೆ ತಮ್ಮ ಮಗನನ್ನು ಕರೆದು ಪರಿಚಯ ಮಾಡಿಸಿ, ಚಿತ್ರವೊಂದನ್ನೂ ತೆಗೆದುಕೊಂಡಿದ್ದಾರೆ.

   ಮಂಡ್ಯ ಫಲಿತಾಂಶ: ಮೂರು ಗುಪ್ತಚರ ಮಾಹಿತಿ ನಡುವಿನ ವ್ಯತ್ಯಾಸ ಏನು?

   ವಿದೇಶಗಳಲ್ಲೂ ಟ್ರೋಲ್ ಆಗಿದ್ದ ನಿಖಿಲ್

   ವಿದೇಶಗಳಲ್ಲೂ ಟ್ರೋಲ್ ಆಗಿದ್ದ ನಿಖಿಲ್

   ಚುನಾವಣೆ ಸಮಯದಲ್ಲಿ 'ನಿಖಿಲ್ ಎಲ್ಲಿದ್ದೀಯಪ್ಪಾ' ಎಂಬುದು ಭಾರಿ ಟ್ರೋಲ್ ಆಗಿತ್ತು, ಅಮೆರಿಕ, ಚೀನಾ, ಉಗಾಂಡಾ ಸೇರಿ ವಿದೇಶಗಳಲ್ಲೂ 'ನಿಖಿಲ್ ಎಲ್ಲಿದ್ದೀಯಪ್ಪಾ' ಭಾರಿ ಖ್ಯಾತಿ ಗಳಿಸಿತ್ತು.

   ಕುಮಾರಸ್ವಾಮಿ ಕೈ ಸೇರಿದ ಮಂಡ್ಯ ಫಲಿತಾಂಶದ ಗುಪ್ತಚರ ವರದಿಯಲ್ಲೇನಿದೆ?

   ಜಾಗ್ವಾರ್ ಸಿನಿಮಾ ವೇಳೆ ನಡೆದ ಘಟನೆ

   ಜಾಗ್ವಾರ್ ಸಿನಿಮಾ ವೇಳೆ ನಡೆದ ಘಟನೆ

   ಜಾಗ್ವಾರ್ ಸಿನಿಮಾ ಆಡಿಯೋ ಬಿಡುಗಡೆ ವೇಳೆ ಕಾರ್ಯಕ್ರಮ ನಿರೂಪಕಿಯ ಒತ್ತಾಯದಂತೆ ಕುಮಾರಸ್ವಾಮಿ ಅವರು ತಮ್ಮ ಮಗನನ್ನು ಕುರಿತು 'ನಿಖಿಲ್ ಎಲ್ಲಿದ್ದೀಯಪ್ಪಾ' ಎಂದು ಕರೆದಿದ್ದರು, ಆ ನಂತರ ಅವರಿಬ್ಬರ ನಡುವೆ ನಡೆದ ನಾಟಕೀಯ ಮಾತುಕತೆ ಭಾರಿ ಟ್ರೋಲ್ ಆಗಿತ್ತು.

   ಮಂಡ್ಯದಲ್ಲಿ 'ನಿಖಿಲ್ ಎಲ್ಲಿದ್ದೀಯಪ್ಪಾ' ಎಂದ ನಿಖಿಲ್ ಕುಮಾರಸ್ವಾಮಿ!

   ಟ್ರೋಲ್‌ಗಳ ಬಗ್ಗೆ ಉರಿದು ಬಿದ್ದಿದ್ದ ಆಗಿದ್ದ ಅಪ್ಪ-ಮಗ

   ಟ್ರೋಲ್‌ಗಳ ಬಗ್ಗೆ ಉರಿದು ಬಿದ್ದಿದ್ದ ಆಗಿದ್ದ ಅಪ್ಪ-ಮಗ

   ಟ್ರೋಲ್‌ಗಳ ಬಗ್ಗೆ ಸಿಟ್ಟಿನಿಂದ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ ಕೆಲಸವಿಲ್ಲದವರು ಈ ರೀತಿಯ ಕೆಲಸಗಳನ್ನು ಮಾಡಿದ್ದಾರೆ ಎಂದಿದ್ದರು. ನಿಖಿಲ್ ಕುಮಾರಸ್ವಾಮಿ ಅವರು ಸಹ ಟ್ರೋಲ್ ಮಾಡುವವರು ಮನುಷ್ಯರೇ ಅಲ್ಲ ಎಂದು ಹೇಳಿದ್ದರು.

   'ನಿಖಿಲ್ ಎಲ್ಲಿದ್ದೀಯಪ್ಪಾ'ಗೆ ನಾನೇ ಹೀರೋ'

   'ನಿಖಿಲ್ ಎಲ್ಲಿದ್ದೀಯಪ್ಪಾ'ಗೆ ನಾನೇ ಹೀರೋ'

   ಆದರೆ ಮೊನ್ನೆಯಷ್ಟೆ ಮಂಡ್ಯದಲ್ಲಿ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ, 'ನಿಖಿಲ್ ಎಲ್ಲಿದ್ದೀಯಪ್ಪಾ' ಸಿನಿಮಾ ಮಾಡಿದರೆ ನಾನೇ ಹೀರೋ ಆಗಿ ಅಭಿನಯಿಸ್ತೀನಿ, ಸಚಿವ ಪುಟ್ಟರಾಜು ಅವರು ಸಿನಿಮಾ ನಿರ್ಮಿಸುತ್ತಾರೆ ಎಂದಿದ್ದಾರೆ.

   English summary
   A priest in Kalburgi's Dattatreya temple said 'Nikhil Ellidiyappa' in front of HD Kumaraswamy. Priest son name also Nikhil so he called his son but every one miss understood.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X