• search
 • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಚಿನ್ ಪೈಲೆಟ್ ಅನರ್ಹತೆ; ಸೋಮವಾರ ಸುಪ್ರೀಂ ಕೋರ್ಟ್ ತೀರ್ಪು

|

ಜೈಪುರ, ಜುಲೈ 23 : ರಾಜಸ್ಥಾನ ಕಾಂಗ್ರೆಸ್ ಶಾಸಕರ ಅನರ್ಹತೆ ವಿಚಾರದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಪೂರ್ಣಗೊಳಿಸಿದೆ. ಜುಲೈ 27ರ ಸೋಮವಾರ ತೀರ್ಪನ್ನು ಪ್ರಕಟಿಸಲಿದೆ.

   Sonu Sood : ವಲಸೆ ಕಾರ್ಮಿಕರಿಗಾಗಿ ಹೊಸ ಯೋಜನೆ ರೂಪಿಸಿದ ಬಾಲಿವುಡ್ ಸ್ಟಾರ್ | Oneindia Kannada

   ವಿಧಾನಸಭೆ ಸ್ಪೀಕರ್ ಸಿ. ಪಿ. ಜೋಶಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಗುರುವಾರ ನಡೆಯಿತು. ಸ್ಪೀಕರ್ ಪರವಾಗಿ ಹಿರಿಯ ಕಾಂಗ್ರೆಸ್ ನಾಯಕ, ವಕೀಲರೂ ಆಗಿರುವ ಕಪಿಲ್ ಸಿಬಲ್ ವಾದ ಮಂಡಿಸಿದರು.

   ರಾಜಸ್ಥಾನ ಬಿಕ್ಕಟ್ಟು; ಹರ್ಯಾಣಕ್ಕೆ ಹೋಗಿ ಬರಿಗೈಯಲ್ಲಿ ಪೊಲೀಸ್ ವಾಪಸ್!

   ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ. ಆರ್. ಗವಿ ಮತ್ತು ಕೃಷ್ಣ ಮುರಾರಿ ಅವರ ತ್ರಿ ಸದಸ್ಯ ಪೀಠ ಸ್ಪೀಕರ್ ಸಿ. ಪಿ. ಜೋಶಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಸುಧೀರ್ಘ ವಾದ ಮಂಡನೆ ಬಳಿಕ ತೀರ್ಪನ್ನು ಕಾಯ್ದಿರಿಸಿತು.

   35 ಕೋಟಿ ಆಫರ್: ಕಾಂಗ್ರೆಸ್ ಶಾಸಕನಿಗೆ ನೋಟಿಸ್ ನೀಡಿದ ಸಚಿನ್ ಪೈಲೆಟ್

   ಸಚಿನ್ ಪೈಲೆಟ್ ಮತ್ತು ಇತರ 19 ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ರಾಜಸ್ಥಾನ ಹೈಕೋರ್ಟ್‌ನಲ್ಲಿ ಪೂರ್ಣಗೊಂಡಿದೆ. ಶುಕ್ರವಾರಕ್ಕೆ ಹೈಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಆದರೆ, ಆದೇಶ ಸುಪ್ರೀಂಕೋರ್ಟ್‌ನ ಆದೇಶಕ್ಕೆ ಒಳಪಟ್ಟಿರುತ್ತದೆ.

   ಸಚಿನ್ ಪೈಲೆಟ್ ಮುಂದಿನ ನಡೆ; ಶುಕ್ರವಾರ ನಿರ್ಣಾಯಕ ದಿನ!

   ಹೈಕೋರ್ಟ್ ಪ್ರಕ್ರಿಯೆಗೆ ತಡೆ ಇಲ್ಲ

   ಹೈಕೋರ್ಟ್ ಪ್ರಕ್ರಿಯೆಗೆ ತಡೆ ಇಲ್ಲ

   ರಾಜಸ್ಥಾನ ಕಾಂಗ್ರೆಸ್ ಬಂಡಾಯ ನಾಯಕ ಸಚಿನ್ ಪೈಲೆಟ್ ಮತ್ತು ಇತರ 19 ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ರಾಜಸ್ಥಾನ ಹೈಕೋರ್ಟ್‌ನಲ್ಲಿ ಪೂರ್ಣಗೊಂಡಿದೆ. ಹೈಕೋರ್ಟ್‌ ಪ್ರಕ್ರಿಯೆಗಳಿಗೆ ತಡೆ ನೀಡಬೇಕು ಎಂದು ಸ್ಪೀಕರ್ ಸಿ. ಪಿ. ಜೋಶಿ ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

   ಸುಪ್ರೀಂ ಆದೇಶದ ತನಕ ಕಾಯಬೇಕು

   ಸುಪ್ರೀಂ ಆದೇಶದ ತನಕ ಕಾಯಬೇಕು

   ಶಾಸಕರ ಅನರ್ಹತೆ ಅರ್ಜಿ ಬಗ್ಗೆ ಶುಕ್ರವಾರ ರಾಜಸ್ಥಾನ ಹೈಕೋರ್ಟ್ ತೀರ್ಪು ಬಂದರೂ ಸಹ ಸ್ಪೀಕರ್ ಅನರ್ಹತೆ ಬಗ್ಗೆ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಸೋಮವಾರ ಸುಪ್ರೀಂಕೋರ್ಟ್ ನೀಡುವ ಆದೇಶದ ಬಳಿಕ ಮುಂದಿನ ಕ್ರಮ ಕೈಗೊಳ್ಳಬಹುದು.

   ಯಾವ ಆಧಾರದ ಮೇಲೆ ಅನರ್ಹತೆ

   ಯಾವ ಆಧಾರದ ಮೇಲೆ ಅನರ್ಹತೆ

   ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಯಾವ ಆಧಾರದ ಮೇಲೆ ಅನರ್ಹತೆ ನೋಟಿಸ್ ನೀಡಲಾಗಿದೆ? ಎಂದು ರಾಜಸ್ಥಾನ ಸ್ಪೀಕರ್ ಪರ ವಕೀಲ ಕಪಿಲ್ ಸಿಬಲ್‌ಗೆ ನ್ಯಾಯಪೀಠ ಪ್ರಶ್ನೆ ಮಾಡಿತು.

   "ಶಾಸಕರು ಪಕ್ಷದ ಸಭೆಗಳಿಗೆ ಹಾಜರಾಗಿಲ್ಲ. ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಹರ್ಯಾಣದ ಹೋಟೆಲ್‌ನಲ್ಲಿ ಇದ್ದಾರೆ. ತಮ್ಮ ಪಕ್ಷವೇ ವಿಶ್ವಾಸ ಮತ ಸಾಬೀತು ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ" ಎಂದು ಕಪಿಲ್ ಸಿಬಲ್ ನ್ಯಾಯಪೀಠಕ್ಕೆ ವಿವರಣೆ ನೀಡಿದರು.

   ನ್ಯಾಯಾಲಯ ಪ್ರವೇಶಿಸುವಂತಿಲ್ಲ

   ನ್ಯಾಯಾಲಯ ಪ್ರವೇಶಿಸುವಂತಿಲ್ಲ

   ಸ್ಪೀಕರ್ ಶಾಸಕರನ್ನು ಅನರ್ಹಗೊಳಿಸುವುದು/ಅಮಾನತು ಮಾಡಿದರೆ ಮಾತ್ರ ನ್ಯಾಯಾಲಯ ಮಧ್ಯ ಪ್ರವೇಶ ಮಾಡಬಹುದು. ಈಗ ಕೇವಲ ನೋಟಿಸ್ ನೀಡಲಾಗಿದೆ. ನೋಟಿಸ್ ನೀಡುವ ಹಕ್ಕು ಸ್ಪೀಕರ್‌ಗೆ ಸಂವಿಧಾನಿಕವಾಗಿ ಇದೆ. ಇದರಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಕಪಿಲ್ ಸಿಬಲ್ ವಾದ ಮಂಡಿಸಿದರು.

   English summary
   Supreme Court of India reserved it's order on the petition field by the Rajasthan speaker C. P. Joshi. Court allows Rajasthan high court to deliver its ruling on the rebel MLAs plea on July 24.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X