• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಸ್ಥಾನ : ಸಚಿನ್ ಪೈಲಟ್ ಅತ್ಯಂತ ಕಿರಿಯ ವಯಸ್ಸಿನ ಡಿಸಿಎಂ

By ವಿಕಾಸ್ ನಂಜಪ್ಪ
|

ಜೈಪುರ, ಡಿಸೆಂಬರ್ 17: ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರಾಗಿ ಸಮರ್ಥವಾಗಿ ಚುನಾವಣೆ ಎದುರಿಸಿದ ಸಚಿನ್ ಪೈಲಟ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿಯನ್ನು ನೀಡಲಾಗಿದೆ. 41 ವರ್ಷ ವಯಸ್ಸಿನ ಸಚಿನ್ ಪೈಲಟ್ ಅವರು ರಾಜಸ್ಥಾನದ ಅತ್ಯಂತ ಕಿರಿಯ ವಯಸ್ಸಿನ ಡಿಸಿಎಂ ಎನಿಸಿಕೊಂಡಿದ್ದಾರೆ.

ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಗೆ ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ಅವರ ನಡುವೆ ಬಿರುಸಿನ ಪೈಪೋಟಿ ಇತ್ತು. ಆದರೆ ಹಿರಿತನ ಮತ್ತು ಅನುಭವದ ಆಧಾರದ ಮೇಲೆ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಲು ಕಾಂಗ್ರೆಸ್ ತೀರ್ಮಾನಿಸಿದ್ದು, ಪೈಲಟ್ ಉಪಮುಖ್ಯಮಂತ್ರಿ ಹುದ್ದೆಗೇ ತೃಪ್ತಿ ಪಟ್ಟುಕೊಳ್ಳಬೇಕಿದೆ.

ರಾಜಸ್ಥಾನ: ಬಿದ್ದ ಕಾಂಗ್ರೆಸ್ಸಿನ ಪತಾಕೆಯನ್ನು ಹಾರಿಸಿದ 'ಪೈಲಟ್'

ರಾಜಸ್ಥಾನದ 200 ಕ್ಷೇತ್ರಗಳ ವಿಧಾನಸಭೆ ಚುನಾವಣೆ ಡಿಸೆಂಬರ್ 7 ರಂದು ಮತದಾನ ನಡೆದಿತ್ತು. ಡಿಸೆಂಬರ್ 11 ರಂದು ಫಲಿತಾಂಶ ಹೊರಬಿದ್ದ ಫಲಿತಾಂಶದಲ್ಲಿ 99 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್, ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚನೆ ಹಕ್ಕು ಪಡೆದುಕೊಂಡಿದೆ.

ವಾಯುಸೇನೆಯಲ್ಲಿದ್ದ ರಾಜೇಶ್ವರ್ ಪ್ರಸಾದ್ ಸಿಂಗ್ ಅವರು ರಾಜೇಶ್ ಪೈಲಟ್ ಆಗಿ ಕಾಂಗ್ರೆಸ್ ಮುಖಂಡರಾಗಿ ಬೆಳೆದರು. ಇವರ ಪುತ್ರ ಸಚಿನ್ ಪೈಲಟ್ ಗೆ ಈಗ 41 ವರ್ಷ ವಯಸ್ಸು. ತಂದೆಯ ಅಕಾಲಿಕ ಮರಣದ ನಂತರ ರಾಜಕೀಯಕ್ಕೆ ಎಂಟ್ರಿ. ಬಿಎ, ಎಂಬಿಎ ಮಾಡಿರುವ ಸಚಿನ್ ಅವರು 26 ವರ್ಷ ವಯಸ್ಸಿಗೆ ಮೊದಲ ಜಯ ಕಂಡರು.

2004ರಲ್ಲೇ ಲೋಕಸಭೆಗೆ ಆಯ್ಕೆಯಾದರು

2004ರಲ್ಲೇ ಲೋಕಸಭೆಗೆ ಆಯ್ಕೆಯಾದರು

ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರ ಪುತ್ರಿ ಸಾರಾರನ್ನು ಪ್ರೀತಿಸಿ ಮದುವೆಯಾದರು. ಮೊದಲಿಗೆ ದೌಸಾದಿಂದ 2004ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದವರು ನಂತರ 2009ರಲ್ಲಿ ಅಜ್ಮೇರ್ ನಿಂದ ಲೋಕಸಭೆಗೆ ಆಯ್ಕೆಯಾಗಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಸಚಿವರಾದರು.

2014ರಲ್ಲಿ ರಾಜಸ್ಥಾನದ ಕಾಂಗ್ರೆಸ್ ಅಧ್ಯಕ್ಷರಾದರೂ ವಿಧಾನಸಭೆಯಲ್ಲಿ ಸೋಲು, ಅಜ್ಮೇರ್ ನಲ್ಲಿ ಲೋಕಸಭೆಯಲ್ಲಿ ವೈಯಕ್ತಿಕ ಸೋಲು ಅವರನ್ನು ಕಾಡಿಸಿತು. ಆದರೆ, ಈ ಬಾರಿ ವಸುಂಧರಾ ಅವರ ಗೌರವ ಯಾತ್ರೆಗೆ ವಿರುದ್ಧವಾಗಿ ಪೈಲಟ್ ಕಾರ್ಯವ್ಯೂಹ ರಚಿಸಿ ಗೆದ್ದರು

ಅತ್ಯಂತ ಕಿರಿಯ ವಯಸ್ಸಿನ ಡಿಸಿಎಂ

ಅತ್ಯಂತ ಕಿರಿಯ ವಯಸ್ಸಿನ ಡಿಸಿಎಂ

ಅಜ್ಮೇರ್ ನಲ್ಲಿ ಬಿಜೆಪಿಯ ಕಿರಣ್ ಮಹೇಶ್ವರಿ ಅವರನ್ನು 76000 ಮತಗಳಿಂದ ಸೋಲಿಸಿದ ಸಚಿನ್ ಪೈಲಟ್ ಅವರಿಗೆ ಅಂದಿನ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕಾರ್ಪೋರೇಟ್ ವ್ಯವಹಾರ ಖಾತೆ ಸಚಿವರರಾಗುವ ಅವಕಾಶ ಸಿಕ್ಕಿತು. ಅತ್ಯಂತ ಕಿರಿಯ ವಯಸ್ಸಿನ್ ಕ್ಯಾಬಿನೆಟ್ ದರ್ಜೆ ಸಚಿವರಾದರು. 21 ವರ್ಷ ವಯಸ್ಸಿಗೆ ಲೋಕಸಭೆಗೆ ಆಯ್ಕೆಯಾಗಿ ಅತ್ಯಂತ ಕಿರಿಯ ವಯಸ್ಸಿನ ಸಂಸದರೆನಿಸಿದ್ದರು. ಈಗ 41 ವರ್ಷ ವಯಸ್ಸಿಗೆ ಉಪ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.

ಯುವ ನಾಯಕರಿಗೆ ಮಣೆ ಹಾಕಿ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದಾರಾ ರಾಹುಲ್?

ರಾಜಸ್ಥಾನದಲ್ಲಿ ಡಿಸಿಎಂಗಳು

ರಾಜಸ್ಥಾನದಲ್ಲಿ ಡಿಸಿಎಂಗಳು

ರಾಜಸ್ಥಾನವು ಎರಡು ಬಾರಿ ಉಪಮುಖ್ಯಮಂತ್ರಿಗಳನ್ನು ಕಂಡಿದೆ. 1994ರಲ್ಲಿ ಹರಿಶಂಕರ್ ಬಭಾಡ ಅವರು ರಾಜಸ್ಥಾನದ ಮೊದಲ ಉಪ ಮುಖ್ಯಮಂತ್ರಿ ಎನಿಸಿಕೊಂಡರು. ಅವರಿಗೆ ಆಗ 66 ವರ್ಷ ವಯಸ್ಸಾಗಿತ್ತು. 2003ರಲ್ಲಿ ಇಬ್ಬರು ಡಿಸಿಎಂಗಳಿದ್ದರು. ಕಮಲಾ ಬೇನಿವಾಲ್ (76) ಹಾಗೂ ಬಾನ್ವಾರಿ ಲಾಲ್ (70) ಉಪಮುಖ್ಯಮಂತ್ರಿಗಳಾಗಿದ್ದರು.

ಇದೆ ಮೊದಲು ಒಟ್ಟಿಗೆ ಸಿಎಂ, ಡಿಸಿಎಂ ಪ್ರಮಾಣ ವಚನ

ಇದೆ ಮೊದಲು ಒಟ್ಟಿಗೆ ಸಿಎಂ, ಡಿಸಿಎಂ ಪ್ರಮಾಣ ವಚನ

ಈ ಹಿಂದೆ ಇದ್ದ ಡಿಸಿಎಂಗಳನ್ನು ಸರ್ಕಾರದ ಆಡಳಿತ ಅವಧಿಯ ಮಧ್ಯದಲ್ಲಿ ಅಥವಾ ಅಂತ್ಯದಲ್ಲಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಸರ್ಕಾರ ರಚನೆಯ ಸಂದರ್ಭದಲ್ಲೇ, ಮುಖ್ಯಮಂತ್ರಿಗಳ ಪ್ರಮಾಣ ವಚನದ ಜತೆಗೆ ಡಿಸಿಎಂ ಕೂಡಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಜಸ್ಥಾನದ ಉಪಮುಖ್ಯಮಂತ್ರಿಯಾಗಿ ಸಚಿನ್ ಪೈಲಟ್ ಆಯ್ಕೆ

English summary
At the age of 26, he became a Member of Parliament. Now at the age of 41, he will be the deputy chief minister of Rajasthan. Incidentally, Pilot will be the youngest deputy CM of Rajasthan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X