ರಾಜಕೀಯದಲ್ಲಷ್ಟೇ ಹಗೆ... ಮಿಕ್ಕಂತೆ ನಾವಿರೋದೇ ಹೀಗೆ!

ವೇದಿಕೆಯ ಮೇಲೆ ನಿಂತು ರಾಜಕೀಯ ವಿರೋಧಿಗಳನ್ನು ಅದೆಷ್ಟೇ ತೇಜೋವಧೆ ಮಾಡಿರಲಿ, ವೇದಿಕೆ ಇಳಿದರೆ ವಿರೋಧಿಗಳನ್ನೇ ತಬ್ಬಿಕೊಂಡು ಅಭಿನಂದಿಸುವುದು ರಾಜಕೀಯದಲ್ಲಿ ಸರ್ವೇ ಸಾಮಾನ್ಯ.

ಇತ್ತೀಚೆಗಷ್ಟೇ ಅಧಿಕಾರ ಕಳೆದುಕೊಂಡ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡೆ ವಸುಂಧರಾ ರಾಜೆ ಅವರು ತಮ್ಮ ಸೋದರಳಿಯ, ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂದಿಯಾ ಅವರನ್ನು ತಬ್ಬಿಕೊಂಡು ಅಭಿನಂದಿಸಿದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ.

ನಮ್ಮ ಹಗೆಯೇನಿದ್ದರೂ ರಾಜಕೀಯಕ್ಕಷ್ಟೇ ಸೀಮಿತ. ಮಿಕ್ಕ ಸಮಯದಲ್ಲೆಲ್ಲ ನಾವಿರೋದು ಹೀಗೇ... ಎನ್ನುತ್ತಿರುವಂತಿದೆ ಈ ಚಿತ್ರ. ಇದರೊಟ್ಟಿಗೆ ಕಾಂಗ್ರೆಸ್ ಮುಖ್ಯಮಂತ್ರಿಗಳ ಪ್ರಮಾಣವಚನ, ಭುವನ ಸುಂದರಿಯ ಸ್ನಿಗ್ಧ ನಗೆ, ಸೈನಾ ನೆಹ್ವಾಲ್ ಪಾಣಿಗ್ರಹಣ... ಸೇರಿದಂತೆ ಮತ್ತಿತರ ಸುಂದರ ಚಿತ್ರಗಳು ನಿಮಗಾಗಿ ಇಲ್ಲಿವೆ.

ಹಗೆ ರಾಜಕೀಯದಲ್ಲಷ್ಟೆ!

ಹಗೆ ರಾಜಕೀಯದಲ್ಲಷ್ಟೆ!

ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ಸಿನ ಅಶೋಕ್ ಗೆಹ್ಲೋಟ್ ಜೈಪುರದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಭೆಗೆ ಆಗಮಿಸಿದ್ದ ಜ್ಯೋತಿರಾದಿತ್ಯ ಸಿಂದಿಯಾ ಅವರನ್ನು ಸೋದರ ಸಂಬಂಧಿ ವಸುಂಧರಾ ರಾಜೆ ಸಿಂದಿಯಾ ಸಂತಸದಿಂದ ಬರಮಾಡಿಕೊಂಡರು. ಅವರನ್ನು ರಾಜೆ ತಬ್ಬಿಕೊಂಡು ಅಭಿನಂದಿಸಿದ್ದು ಹೀಗೆ.

ಗೆಲುವು ನಮ್ಮದೆ!

ಗೆಲುವು ನಮ್ಮದೆ!

ಜೈಪುರದಲ್ಲಿ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಅಶೋಕ್ ಗೆಹ್ಲೋಟ್ ಮತ್ತು ಉಪಮುಖ್ಯಮಂತ್ರಿಯಾಗಿ ಸಚಿನ್ ಪೈಲಟ್ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಗೆಲುವು ನಮ್ಮದೇ ಎಂದು ಥಂಬ್ಸ್ ಅಪ್ ಮಾಡಿದರು.

ನ್ಯಾಯ ಗೆದ್ದಿದೆ

ನ್ಯಾಯ ಗೆದ್ದಿದೆ

1984 ರ ಸಿಖ್ ದಂಗೆಗೆ ಸಂಬಂಧಿಸಿದಂತೆ ಆರೋಪಿ, ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಅವರನ್ನು ಇಂದು ದೋಷಿ ಎಂದು ಪರಿಗಣಿಸಿ, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ದಂಗೆಯ ಸಮಯದಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡ ನಿರ್ಪ್ರೀತ್ ಕೌರ್ ಎಂಬುವವರು ಕೊನೆಗೂ ನ್ಯಾಯ ಸಿಕ್ಕಿತು ಎಂದು ಕೈಮುಗಿದು, ತನ್ನ ಸಮಾಧಾನ ವ್ಯಕ್ತಪಡಿಸಿದ್ದು ಹೀಗೆ.

ಉಪಮುಖ್ಯಮಂತ್ರಿ ಪೈಲಟ್

ಉಪಮುಖ್ಯಮಂತ್ರಿ ಪೈಲಟ್

ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್ ಅವರ ಹಠಕ್ಕೆ ಮಣಿದು, ಉಪಮುಖ್ಯಮಂತ್ರಿ ಸ್ಥಾನದಲ್ಲೇ ತೃಪ್ತಿ ಪಟ್ಟುಕೊಳ್ಳಬೇಕಾಯ್ತು. ಖಾದಿ ಜುಬ್ಬ ತೊಟ್ಟು, ರಾಜಸ್ಥಾನದ ಪ್ರಸಿದ್ಧ ಪೇಟಾ ಸುತ್ತಿಕೊಂಡು ಅಭಿಮಾನಿಗಳಿತ್ತ ಸಚಿನ್ ಪೈಲಟ್ ಕೈಬೀಸುತ್ತಾ ಕಂಡಿದ್ದು ಹೀಗೆ.

ಹೊಸ ಪಂದ್ಯ ಶುರುವಾಗಿದೆ!

ಹೊಸ ಪಂದ್ಯ ಶುರುವಾಗಿದೆ!

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ತಮ್ಮ ಸ್ನೇಹಿತ ಮತ್ತು ಬ್ಯಾಡ್ಮಿಂಟನ್ ಪಟು ಪಾರುಪಳ್ಳಿ ಕಶ್ಯಪ್ ಅವರನ್ನು ಡಿ.15 ರಂದು ವರಿಸಿದರು. ಹೈದರಾಬಾದಿನಲ್ಲಿ ಡಿ.16 ರಂದು ನಡೆದ ಅವರ ಆರತಕ್ಷತೆಯ ಚಿತ್ರ ಇದು, ಇಬ್ಬರು ಕ್ರೀಡಾ ಪಟುಗಳ ಬದುಕಲ್ಲೂ ಆರಂಭವಾಗಿರುವ 'ಹೊಸದೊಂದು ಸುಂದರ ಪಂದ್ಯ'ಕ್ಕೆ ಕುಟುಂಬಸ್ಥರು, ಬಂಧುಗಳು ಶುಭ ಹಾರೈಸಿದ್ದಾರೆ.

ಚೆಲುವೆಯೆ ನಿನ್ನ ನೋಡಲು...

ಚೆಲುವೆಯೆ ನಿನ್ನ ನೋಡಲು...

67 ನೇ ಭುವನ ಸುಂದರಿ ಸ್ಪರ್ಧೆಯಲ್ಲಿ ಗೆದ್ದ ಫಿಲಿಪೈನ್ಸ್ ನ ಕ್ಯಾಟ್ರಿಯೋನಾ ಗ್ರೇ ತಮ್ಮ ತಲೆಯ ಮೇಲೆ ಭುವ ಸುಂದರಿ ಕಿರೀಟ ಸ್ಥಾಪಿತವಾಗುತ್ತಿದ್ದಂತೆಯೇ ಜಗತ್ತನ್ನೇ ಗೆದ್ದಷ್ಟು ಸಂಭ್ರಮಿಸಿದ್ದು ಹೀಗೆ! ಬ್ಯಾಂಕಾಕ್ ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಭಾರತದ ನೆಹಾಲ್ ಚುಡಾಸಮಾ ಸೋತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+