ವಿದ್ಯಾರ್ಥಿ ನಾಯಕತ್ವಕ್ಕೆ ಅನರ್ಹನಾದ, ಪ್ರತಿಸ್ಪರ್ಧಿ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಭೂಪ!
ಜೈಪುರ, ಆಗಸ್ಟ್ 24: ರಾಜಸ್ಥಾನ ವಿಶ್ವವಿದ್ಯಾಲಯದ ಪಿಜಿ ಕಾಜೇಜುನಲ್ಲಿ ಕಳೆದ 3 ವರ್ಷದಿಂದ ವಿದ್ಯಾರ್ಥಿ ಸಂಘದ ನಾಯಕನಾಗಿದ್ದ. ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿದ್ದ ಆದರೆ, ಕಾಲೇಜಿನ ಆಡಳಿತದ ಸೂಚನೆಯಂತೆ ಅನರ್ಹತೆಗೊಂಡಿದ್ದಾನೆ. ಈ ಘಟನೆಯ ನಂತರ ಇದೇ ಕಾಲೇಜಿನಲ್ಲಿ ಓದುತ್ತಿದ್ದ ತನ್ನ ಸಹಪಾಠಿಯಾಗಿದ್ದ ಗೆಳತಿಗೆ ಅಧ್ಯಕ್ಷ ಸ್ಥಾನ ನಾಮಕರಣ ಮಾಡಿದ. ಅಲ್ಲದೆ, ಚುನಾವಣಾ ರಣರಂಗದಲ್ಲಿ ತನ್ನ ಪ್ರತಿಸ್ಪರ್ಧಿಯಾಗಿದ್ದ ಗೆಳತಿ, ಅದೇ ಕಾಲೇಜು ವಿದ್ಯಾರ್ಥಿನಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಅಚ್ಚರಿ ಮೂಡಿಸಿದ. ರೋಡ್ ಶೋ ಮಾಡುವ ಮೂಲಕ ಅವಳನ್ನು ವಿದ್ಯಾರ್ಥಿ ಸಂಘದ ನಾಯಕತ್ವದ ಅಧ್ಯಕ್ಕೆ ಸ್ಥಾನಕ್ಕೆ ಕಣಕ್ಕಿಳಿಸಿ, ಕಾಲೇಜು ಮಂಡಳಿಯ ಲೆಕ್ಕಾಚಾರವನ್ನೇ ತಲೆಕೆಳಗು ಮಾಡಿದ್ದಾನೆ.
ಹೌದು, ಈ ವಿಶೇಷ ಪ್ರಕರಣವು ರಾಜಸ್ಥಾನ ವಿಶ್ವವಿದ್ಯಾಲದ ದೌಸಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ನಡದಿದೆ. ವಿದ್ಯಾರ್ಥಿ ನಾಯಕಿ ಸಪ್ನಾ ಮೀನಾ ಎರಡು-ಮೂರು ವರ್ಷಗಳಿಂದ ವಿದ್ಯಾರ್ಥಿ ಸಂಘದ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದರು, ಆದರೆ ಕೊರೊನಾದಿಂದಾಗಿ ಚುನಾವಣೆಗಳು ನಡೆಯಲಿಲ್ಲ. ಆದರೆ ಕಳೆದ ಮೂರು ವರ್ಷದಿಂದ ವಿದ್ಯಾರ್ಥಿ ನಾಯಕನಾಗಿದ್ದ ರಟ್ಟಿರಾಮ್ ಈ ಬಾರಿ ಅವರು ಅಧ್ಯಯನದಲ್ಲಿ ಅಂತರದಿಂದ ಅನರ್ಹಗೊಂಡಿದ್ದಾರೆ.

ರಾಜಸ್ಥಾನದ ದೌಸಾದ ಪಿಜಿ ಕಾಲೇಜನಲ್ಲಿ ಈ ಘಟನೆ
ದೌಸಾದ ಪಿಜಿ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕನಿಗೆ ಅಧ್ಯಕ್ಷರ ಟಿಕೆಟ್ ನೀಡುವ ಮೊದಲು ವಿದ್ಯಾರ್ಥಿನಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ದೀರ್ಘಕಾಲದವರೆಗೆ ಪಿಜಿ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕರಾಗಿ ಕೆಲಸ ಮಾಡುತ್ತಿದ್ದ ರಟ್ಟಿರಾಮ್ ರಾಹುವಾಸ್ ಅವರು ಚುನಾವಣೆಗೆ ಸ್ಪರ್ಧಿಸಲು ಅನರ್ಹರಾದರು. ಈ ವಿಷಯವನ್ನು ಅರಿತಿದ್ದ ಹಾಗೂ ಇದಾದ ಕೆಲವೇ ದಿನಗಳಲ್ಲಿ ಪಿಜಿ ಕಾಲೇಜಿನಲ್ಲಿ ಓದುತ್ತಿರುವ ಅದೇ ಹುಡುಗಿಯೊಂದಿಗೆ ರಟ್ಟಿರಾಮ್ ರಾಹುವಾಸ್ ತರಾತುರಿಯಲ್ಲಿ ಕಾಲೇಜಿನಲ್ಲಿ ಪಠ್ಯಕ್ರಮ ಹಾಗೂ ಚಟುವಟಿಕೆಗಳಲ್ಲಿ ಭಾರೀ ಸ್ಪರ್ಧೆ ನಡದಿದ್ದವು. ದೌಸಾದ ಪಿಜಿ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕಿ ವಿದ್ಯಾರ್ಥಿನಿಯರಿಗೆ ಅಧ್ಯಕ್ಷರ ಟಿಕೆಟ್ ನೀಡುವ ಮೊದಲು ನಿಶ್ಚಿತಾರ್ಥ ಮಾಡಿಕೊಂಡಳು.

ಸಪ್ನಾಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸುದ್ದಿ ನಂಬಲಾಗಲಿಲ್ಲ
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸುದ್ದಿ ತಿಳಿದಾಗ ದಿಢೀರನೆ ನಂಬಲಾಗಲಿಲ್ಲ ಎಂದು ಸಪ್ನಾ ಮೀನಾ ಹೇಳಿದ್ದಾರೆ. ರಟ್ಟಿರಾಮ್ ಜೊತೆ ಸಪ್ನಾ ನಿಶ್ಚಿತಾರ್ಥದ ಮಾತು ಕಳೆದ ಐದಾರು ತಿಂಗಳಿಂದ ನಡೆಯುತ್ತಿತ್ತು ಆದರೆ ರಟ್ಟೀರಾಮ್ ಅವರನ್ನು ಚುನಾವಣೆಗೆ ಅನರ್ಹಗೊಳಿಸಿದ ಕೂಡಲೇ ರಟ್ಟೀರಾಮ್ ಈ ಸಂಬಂಧ ಅದು ಹೇಗೊ ಸಾಧಿಸಿಕೊಂಡು ಸಪ್ನಾ ಮೀನಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಕಣಕ್ಕೆ ಮುಂದಿಟ್ಟಿದ್ದಾರೆ. ಈಗ ಕಾಲೇಜಿನಲ್ಲಿ ಈ ಚುನಾವಣೆ ಬಹಳ ರೋಚಕವಾಗಿ ಪರಿಣಮಿಸಿದೆ.

ಸಚಿವ ಮುರಾರಿ ಲಾಲ್ ಮೀನಾ ಪುತ್ರಿ ಕಣಕ್ಕೆ
ಇನ್ನು ದೌಸಾ ಶಾಸಕ ಮತ್ತು ಕೃಷಿ ಮಾರುಕಟ್ಟೆ ಸಚಿವ ಮುರಾರಿ ಲಾಲ್ ಮೀನಾ ಅವರ ಪುತ್ರಿಯಾದ ನಿಹಾರಿಕಾ ಜೋರ್ವಾಲ್ ಅವರು ರಾಜಸ್ಥಾನ ವಿಶ್ವವಿದ್ಯಾಲಯದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ, ಇದು ರಾಜಸ್ಥಾನದಾದ್ಯಂತ ಚರ್ಚೆಯ ವಿಷಯವಾಗಿ ಉಳಿದಿದೆ. ದೌಸಾದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಸಂಘದ ಚುನಾವಣೆಯ ಸಕತ್ ಪ್ರಚಾರದಲ್ಲಿದ್ದು ಈ ಚುನಾವಣೆ ಸಾಕಷ್ಟು ಕುತುಹಲ ಮೂಡಿಸಿದೆ. ಇನ್ನು ದೌಸಾದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿ ಕುತೂಹಲಕಾರಿ ಚಿತ್ರಣವೂ ಹೊರಹೊಮ್ಮಿದೆ.

ವಿದ್ಯಾರ್ಥಿ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಕೆ
ಕಳೆದ ಆಗಸ್ಟ್ 22ರಂದು ಎಲ್ಲಾ ಅಭ್ಯರ್ಥಿಗಳು ವಿದ್ಯಾರ್ಥಿ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. 2013ರಲ್ಲಿ ನಡೆದ ವಿದ್ಯಾರ್ಥಿ ಸಂಘದ ಚುನಾವಣೆ ವೇಳೆ ಗುಂಡಿನ ದಾಳಿಯು ಕೂಡ ನಡೆದಿದ್ದು, ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿತ್ತು. ಈ ವೇಳೆ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದವೂ ನಡೆಯಿತು. ಅದರಿಂದ ಪಾಠ ಪಡೆದು ಇಂದು ನಾಮನಿರ್ದೇಶನದ ವೇಳೆ ಮತ್ತಷ್ಟು ರ್‍ಯಾಲಿಯನ್ನು ಆಡಳಿತ ಮಂಡಳಿ ನಿಷೇಧಿಸಿತ್ತು. ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವುದು ಆಡಳಿತಕ್ಕೆ ದೊಡ್ಡ ಸವಾಲಾಗಿದ್ದು, ಇದಕ್ಕೆ ಆಡಳಿತವೂ ಬೆನ್ನು ಬಿಗಿಗೊಳಿಸಿದ್ದು ಭದ್ರತೆಯಡಿ ಆಗಷ್ಟ್ 26ರಂದು ಚುನಾವಣೆ ನಡೆಯಲಿದೆ.












Click it and Unblock the Notifications