• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನ.16 ಮಧ್ಯರಾತ್ರಿಯಿಂದ ಈ ರಾಜ್ಯದಲ್ಲಿ ಇಂಧನ ದರ ಇಳಿಕೆ

|
Google Oneindia Kannada News

ಜೈಪುರ, ನವೆಂಬರ್ 16: ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ನವೆಂಬರ್ 16 ರಂದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಿಸಿಲ್ಲ. ಕಳೆದ 12 ದಿನಗಳ ಹಿಂದೆ ಪೆಟ್ರೋಲ್ ಹಾಗೂ ಡೀಸೆಲ್ ಸರಾಸರಿ 35 ಪೈಸೆ ಪ್ರತಿ ಲೀಟರ್‌ನಷ್ಟು ಏರಿಕೆಯಾಗಿತ್ತು. ದೇಶದಲ್ಲಿ ಅತಿ ದುಬಾರಿ ದರದಲ್ಲಿ ಇಂಧನ ಮಾರಾಟ ಮಾಡುವ ರಾಜಸ್ಥಾನದಲ್ಲಿ ಇಂದು(ನ.16) ಮಧ್ಯರಾತ್ರಿಯಿಂದ ಪೆಟ್ರೋಲ್, ಡೀಸೆಲ್ ದರ ತಗ್ಗಲಿದೆ.

ಅಶೋಕ್ ಗೆಹ್ಲೋಟ್ ಸರ್ಕಾರವು ಕೊನೆಗೂ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ತಗ್ಗಿಸಲು ಮುಂದಾಗಿದ್ದು, ನ.16ರ ಮಧ್ಯರಾತ್ರಿ ಬಳಿಕ ಪರಿಷ್ಕೃತ ದರ ಜಾರಿಗೆ ಬರಲಿದೆ. ಪೆಟ್ರೋಲ್ ಪ್ರತಿ ಲೀಟರ್ ಮೇಲೆ 4 ರು ಹಾಗೂ ಡೀಸೆಲ್ ಪ್ರತಿ ಲೀಟರ್ ಮೇಲೆ 5 ರು ತಗ್ಗಲಿದೆ.

ನ.16 ಪೆಟ್ರೋಲ್, ಡೀಸೆಲ್ ಬೆಲೆ: ಬಳ್ಳಾರಿಯಲ್ಲೇ ಅತ್ಯಧಿಕನ.16 ಪೆಟ್ರೋಲ್, ಡೀಸೆಲ್ ಬೆಲೆ: ಬಳ್ಳಾರಿಯಲ್ಲೇ ಅತ್ಯಧಿಕ

ಮೇ 4ರಿಂದ ಇಂದಿನ ತನಕ ಪೆಟ್ರೋಲ್ ಒಟ್ಟು 60 ಬಾರಿ ಹಾಗೂ ಡೀಸೆಲ್ 55 ಬಾರಿ ಏರಿಕೆಯಾಗಿತ್ತು. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98 ರೂ ಹಾಗೂ ಡೀಸೆಲ್ ಮೇಲೆ 31.80 ರೂ ನಷ್ಟಿದೆ.

ಎಲ್ಲಾ ರಾಜ್ಯಗಳಲ್ಲಿನ ಸೆಸ್, ವ್ಯಾಟ್ ಅಧಿಕವಾಗಿರುವುದರಿಂದ ಯಾವ ರಾಜ್ಯದಲ್ಲೂ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 101 ರು ಗಿಂತ ತಗ್ಗಿರಲಿಲ್ಲ. ಈಗ 25 ರಾಜ್ಯಗಳಲ್ಲಿ ಈಗ ಬೆಲೆ ಇಳಿಕೆಯಾಗಿದೆ. ಚಂಡೀಗಢ, ನೋಯ್ಡಾದಲ್ಲಿ ಬೆಲೆ 100 ರು ಗಿಂತ ಕೆಳಗಿದೆ. ಅಂಡಮಾನ್ ಹಾಗೂ ನಿಕೋಬಾರ್‌ನಲ್ಲಿ ಪೆಟ್ರೋಲ್ 82.96 ರು ಪ್ರತಿ ಲೀಟರ್ ಇದ್ದು ದೇಶದಲ್ಲಿ ಕಡಿಮೆ ಬೆಲೆ ಇದೆ. ಡೀಸೆಲ್ ಬೆಲೆ 77.13 ರು ಇದೆ. ಇಟಾನಗರದಲ್ಲಿ ಪೆಟ್ರೋಲ್ 92.02 ರು ಇದೆ.

ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಲಡಾಕ್, ಬಿಹಾರ, ಕೇರಳ, ಪಂಜಾಬ್, ಸಿಕ್ಕಿಂ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 110 ರು ಪ್ಲಸ್ ದಾಟಿದೆ. ಈ ಪೈಕಿ ಅನೇಕ ರಾಜ್ಯಗಳಲ್ಲಿ ವ್ಯಾಟ್, ಸೆಸ್ ದರ ಅಧಿಕವಾಗಿವೆ.

ದೆಹಲಿಯಲ್ಲಿ ದರ ಮಂಗಳವಾರದಂದು ಪೆಟ್ರೋಲ್ ಪ್ರತಿ ಲೀಟರ್‌ಗೆ 103.97 ರು ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 86.67ರು ಆಗಿದೆ.

ನ.16: ಸತತ ಹನ್ನೆರಡನೇ ದಿನ ಯಥಾಸ್ಥಿತಿ ಕಾಯ್ದುಕೊಂಡ ಇಂಧನ ದರನ.16: ಸತತ ಹನ್ನೆರಡನೇ ದಿನ ಯಥಾಸ್ಥಿತಿ ಕಾಯ್ದುಕೊಂಡ ಇಂಧನ ದರ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನವೆಂಬರ್ 16ರಂದು ಈ ಸಮಯಕ್ಕೆ ಕಚ್ಚಾತೈಲ ಬೆಲೆ ಕೊಂಚ ಏರಿಕೆ ಕಂಡು 81.97ಯುಎಸ್ ಡಾಲರ್ (1 USD=74.47 ರೂ) ಪ್ರತಿ ಬ್ಯಾರೆಲ್‌ನಷ್ಟಿದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಪೆಟ್ರೋಲ್ ಬೆಲೆ ದೇಶದಲ್ಲೇ ಅತ್ಯಧಿಕ 116.30 ರು ನಷ್ಟಿದೆ, ಡೀಸೆಲ್ ಬೆಲೆ 100.49 ರು ಆಗಿದೆ. ಅಲ್ಲದೆ ರಾಜಸ್ಥಾನದ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್ ಬೆಲೆ 111 ರು ಗಡಿ ದಾಟಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary
Petrol and Diesel rates slashed in Rajasthan Petrol To Get Cheaper By Rs 4, Diesel By Rs 5. New Rates Effective Midnight (Nov 16).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X