ರಾಜಸ್ಥಾನ ಪರೀಕ್ಷಾ ಕೇಂದ್ರದ ಹೊರಗೆ ಸ್ಲೀವ್‌ಗೆ ಕತ್ತರಿ!, ಮಹಿಳಾ ಆಯೋಗ ಖಂಡನೆ
ಜೈಪುರ, ಅಕ್ಟೋಬರ್ 28: ರಾಜಸ್ಥಾನದ ಬಿಕಾನೇರ್‌ನ ಪರೀಕ್ಷಾ ಕೇಂದ್ರದಲ್ಲಿ ಉದ್ದ ತೋಳಿನ ಬಟ್ಟೆಯನ್ನು ಧರಿಸಿದ್ದ ಮಹಿಳಾ ಪರೀಕ್ಷಾರ್ಥಿಗಳ ಸ್ಲೀವ್ ಅನ್ನು ಪುರುಷ ಸಿಬ್ಬಂದಿಗಳು ಕತ್ತರಿಸಿರುವ ಬಗ್ಗೆ ವರದಿ ಆಗಿದೆ. ಈ ಘಟನೆಗೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಖಂಡನೆ ವ್ಯಕ್ತಪಡಿಸಿದೆ.
"ಇದು ಸಂಪೂರ್ಣವಾಗಿ ಅವಮಾನಕರ" ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ. "ಮಹಿಳೆಯರು ಇಂತಹ ದೌರ್ಜನ್ಯಕ್ಕೆ ಒಳಗಾಗಿರುವುದು ಸಂಪೂರ್ಣವಾಗಿ ಅವಮಾನಕರವಾಗಿದೆ," ಎಂದಿದ್ದು, ರಾಜ್ಯ ಸರ್ಕಾರ ಇದರ ವಿರುದ್ಧವಾಗಿ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಆಯೋಗ ಆಗ್ರಹ ಮಾಡಿದೆ.
ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ; ಯುವಕನಿಂದ ಅಖಂಡ ಕರ್ನಾಟಕ ಸೈಕಲ್ ಯಾತ್ರೆ
ವರದಿಗಳ ಪ್ರಕಾರ ರಾಜಸ್ಥಾನ ಆಡಳಿತ ಸೇವೆಗಳ ಪರೀಕ್ಷೆಯ ಸಂದರ್ಭದಲ್ಲಿ ರಾಜಸ್ಥಾನದ ಪರೀಕ್ಷಾ ಕೇಂದ್ರದಲ್ಲಿ ಮಹಿಳೆಯರ ತಪಾಸಣೆ ನಡೆಸಲು ಮಹಿಳಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಿಲ್ಲ. ಈ ಹಿನ್ನೆಲೆ ಮಹಿಳೆಯರ ತಪಾಸಣೆ ನಡೆಸಲು ಮಹಿಳಾ ಸಿಬ್ಬಂದಿಗಳನ್ನು ಯಾಕೆ ನಿಯೋಜನೆ ಮಾಡಿಲ್ಲ ಎಂದು ವಿವರಣೆ ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.
ರಾಜಸ್ಥಾನದ ಪರೀಕ್ಷಾ ಕೇಂದ್ರದಲ್ಲಿ ಮಹಿಳಾ ಅಭ್ಯರ್ಥಿಗಳು ಉದ್ದ ತೋಲಿನ ಬಟ್ಟೆಯನ್ನು ಧರಿಸಿದ್ದರೆ, ಅವರ ಸ್ಲೀವ್ ಅನ್ನು ಪುರುಷ ಭದ್ರತಾ ಸಿಬ್ಬಂದಿಗಳು ಕತ್ತರಿಸಿರುವುದು ಮಾಧ್ಯಮದ ಮೂಲಕ ಕಂಡು ಬಂದಿದೆ ಎಂದು ಮಹಿಳಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ. "ವರದಿಯಾದ ಘಟನೆಯಿಂದಾಗಿ ರಾಷ್ಟ್ರೀಯ ಮಹಿಳಾ ಆಯೋಗವು ಆತಂಕಗೊಂಡಿದೆ. ಮಹಿಳೆಯರು ಈ ರೀತಿಯ ದೌರ್ಜನ್ಯಕ್ಕೆ ಒಳಗಾಗುವಂತೆ ಮಾಡಿರುವುದು ಸಂಪೂರ್ಣವಾಗಿ ಅವಮಾನಕರ. ಈ ನಾಚಿಕೆಗೇಡಿನ ಘಟನೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಖಂಡಿಸುತ್ತದೆ," ಎಂದು ಹೇಳಿಕೆಯಲ್ಲಿ ಆಯೋಗವು ಹೇಳಿದೆ.
ದೇವದಾಸಿ ಪದ್ಧತಿ ಸಮಗ್ರ ಕಾಯ್ದೆ ರಚಿಸಲು ಜನಜಾಗೃತಿ ಕಲಾ ಜಾಥಾ
"ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಈ ಘಟನೆಗೆ ಸಂಬಂಧಿಸಿ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಘಟನೆಯ ವಿರುದ್ಧವಾಗಿ, ಈ ಘಟನೆಗೆ ಕಾರಣವಾದವರ ವಿರುದ್ಧವಾಗಿ, ಘನತೆಯಿಂದ ಜೀವಿಸುವ ಮಹಿಳಾ ಹಕ್ಕುಗಳ ಉಲ್ಲಂಘನೆ ಮಾಡಿದ ಆರೋಪದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಪತ್ರದ ಮೂಲಕ ರಾಜ್ಯದ ಮುಖ್ಯ ಕಾರ್ಯದರ್ಶಿಯ ಬಳಿ ಒತ್ತಾಯಿಸಿದ್ದಾರೆ," ಎಂದು ರಾಷ್ಟ್ರೀಯ ಮಹಿಳಾ ಆಯೋಗವು ಈ ಹೇಳಿಕೆಯಲ್ಲಿ ಉಲ್ಲೇಖ ಮಾಡಿದೆ.
"ಪರೀಕ್ಷಾ ಕೇಂದ್ರದಲ್ಲಿ ಮಹಿಳಾ ಅಭ್ಯರ್ಥಿಗಳ ತಪಾಸಣೆ ನಡೆಸಲು ಮಹಿಳಾ ಸಿಬ್ಬಂದಿಗಳನ್ನು ನಿಯೋಜನೆ ಏಕೆ ಮಾಡಿಲ್ಲ ಎಂಬ ಬಗ್ಗೆ ಆಯೋಗವು ವಿವರಣೆಯನ್ನು ಕೇಳಿದೆ. ಈ ಘಟನೆಯ ವಿರುದ್ಧವಾಗಿ ಕೈಗೊಂಡ ಕ್ರಮದ ಬಗ್ಗೆಯೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ತಿಳಿಸುವಂತೆ ಹೇಳಲಾಗಿದೆ," ಎಂದು ಎನ್‌ಸಿಡಬ್ಲ್ಯೂ ಹೇಳಿದೆ.
Strongly condemn #Rajasthan govt’s shameful act of cutting up sleeves of young girls appearing in State Admn Services exam. This anti-woman action of @INCIndia govt makes us cringe. @BJPMahilaMorcha seeks strict action on those responsible for such misogynistic action . pic.twitter.com/4DOj5bYhKd
— Vanathi Srinivasan (@VanathiBJP) October 28, 2021
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಇನ್ನು ಈ ಘಟನೆಯ ವಿರುದ್ದ ಸಾಮಾಜಿಕ ಜಾಲತಾಣದಲ್ಲಿಯೂ ಭಾರೀ ಆಕ್ರೋಶ ವ್ಯಕ್ತವಾಗಿದೆ. "ಪರೀಕ್ಷೆಯಲ್ಲಿ ನಕಲಿ ಮಾಡುವುದನ್ನು ತಪ್ಪಿಸಲು ರಾಜಸ್ಥಾನ ಸರ್ಕಾರ ಮಹಿಳೆಯರ ಬಟ್ಟೆಯನ್ನು ಕತ್ತರಿಸುತ್ತಿದೆಯೇ?. ಅದರಲ್ಲೂ ಮುಖ್ಯವಾಗಿ ಶಾಕಿಂಗ್ ವಿಚಾರ ಪುರುಷರೋರ್ವರು ಮಹಿಳೆಯರ ಬಟ್ಟೆಯನ್ನು ಕತ್ತರಿಸುತ್ತಿರುವುದು," ನೆಟ್ಟಿಗರೊಬ್ಬರು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ಈ ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. "ರಾಜ್ಯದ ಪರೀಕ್ಷಾ ಕೇಂದ್ರದಲ್ಲಿ ಯುವ ಹುಡುಗಿಯರ ಬಟ್ಟೆಯ ಸ್ಲೀವ್ ಅನ್ನು ಕತ್ತರಿಸುವ ರಾಜಸ್ಥಾನ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಕಾಂಗ್ರೆಸ್ ಸರ್ಕಾರದ ಮಹಿಳಾ ವಿರೋಧಿ ಧೋರಣೆಯು ನಾವು ತಲೆ ತಗ್ಗಿಸುವಂತೆ ಮಾಡುತ್ತಿದೆ. ಈ ರೀತಿಯ ಮಹಿಳಾ ವಿರೋಧಿ ಘಟನೆಗೆ ಯಾರು ಕಾರಣರೋ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕೆಂದು ಬಿಜೆಪಿ ಮಹಿಳಾ ಮೋರ್ಚಾ ಆಗ್ರಹ ಮಾಡುತ್ತದೆ," ಎಂದು ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)