• search
 • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

15 ಸಚಿವರು ಪ್ರಮಾಣ ವಚನ ಸ್ವೀಕಾರ: 2023ರ ಚುನಾವಣೆಗೆ ಕಾಂಗ್ರೆಸ್ ಸಜ್ಜು

|
Google Oneindia Kannada News

ಜೈಪುರ/ನವದೆಹಲಿ ನವೆಂಬರ್ 21: ಭಾನುವಾರ ಜೈಪುರದ ರಾಜಭವನದಲ್ಲಿ ಒಟ್ಟು 15 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು 12 ಹೊಸ ಮತ್ತು ಮೂವರು ರಾಜ್ಯ ಸಚಿವರು ಕ್ಯಾಬಿನೆಟ್ ದರ್ಜೆಗೆ ಏರಿದ್ದಾರೆ.

ಸಮಾರಂಭದ ಮೊದಲು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಅಜಯ್ ಮಾಕನ್ ಅವರು ಜೈಪುರದ ಪಕ್ಷದ ಕಚೇರಿಯಲ್ಲಿ ಶಾಸಕರು ಮತ್ತು ಇತರ ಪಕ್ಷದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು. ಟ್ವಿಟರ್‌ನಲ್ಲಿ, ಗೆಹ್ಲೋಟ್ ಮುಂಬರುವ ಅಸೆಂಬ್ಲಿ ಚುನಾವಣೆಗಳ ಮೇಲೆ ಕಣ್ಣಿಟ್ಟಿದ್ದು, 2023 ರಲ್ಲಿ ಕಾಂಗ್ರೆಸ್ ಮತ್ತೆ ಸರ್ಕಾರವನ್ನು ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಂದಿನ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನೇತೃತ್ವದ ಬಂಡಾಯದಿಂದ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಉಳಿದುಕೊಂಡು ಸುಮಾರು 16 ತಿಂಗಳ ನಂತರ ಕ್ಯಾಬಿನೆಟ್ ಪುನಶ್ಚೇತನಗೊಂಡಿದೆ. ಈಗ ಪೈಲಟ್ ನಿಷ್ಠರಾದ ರಮೇಶ್ ಮೀನಾ ಮತ್ತು ವಿಶ್ವೇಂದ್ರ ಸಿಂಗ್ ಅವರು ಸಚಿವಾಲಯಕ್ಕೆ ಮರಳಿದ್ದರೆ, ಬ್ರಿಜೇಂದ್ರ ಸಿಂಗ್ ಓಲಾ, ಹೇಮರಾಮ್ ಚೌಧರಿ ಮತ್ತು ಮುರಾರಿಲಾಲ್ ಮೀನಾ ಎಂಟ್ರಿ ಕೊಟ್ಟಿದ್ದಾರೆ.

ಮಹೇಂದ್ರಜಿತ್ ಸಿಂಗ್ ಮಾಳವೀಯ, ರಾಮಲಾಲ್ ಜಾಟ್, ಮಹೇಶ್ ಜೋಶಿ, ಮಮತಾ ಭೂಪೇಶ್, ಟಿಕಾರಾಂ ಜೂಲಿ, ಭಜನ್ ಲಾಲ್ ಜಾತವ್, ಗೋವಿಂದ್ ರಾಮ್ ಮೇಘವಾಲ್ ಮತ್ತು ಶಕುಂತಲಾ ರಾವತ್ ಇತರ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಇನ್ನೂ ಜಾಹಿದಾ ಖಾನ್ ಮತ್ತು ರಾಜೇಂದ್ರ ಸಿಂಗ್ ಗುಧಾ ಅವರನ್ನು ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ.

2023ರಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಸಜ್ಜಾಗುತ್ತಿದೆ ಎಂದು ಸಚಿನ್ ಪೈಲಟ್ ಇಂದು ಘೋಷಿಸಿದರು. ಹೀಗಾಗಿ ಆದಿವಾಸಿಗಳು, ದಲಿತರು ಮತ್ತು ಮಹಿಳೆಯರು ಸೇರಿದಂತೆ ರಾಜ್ಯದ ಎಲ್ಲಾ ವರ್ಗಗಳಿಗೆ ಸಮಾನ ಪ್ರಾತಿನಿಧ್ಯವನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ವಿವರಿಸಿದರು. ನೂತನ ಸಚಿವ ಸಂಪುಟದಲ್ಲಿ ನಾಲ್ವರು ದಲಿತ ಸಚಿವರನ್ನು ಸೇರಿಸಿಕೊಳ್ಳಲಾಗಿದೆ ಎಂದರು.

ರಾಜಸ್ಥಾನದ ಬೃಹತ್ ಕ್ಯಾಬಿನೆಟ್ ಪುನರ್ರಚನೆಯ ಕೆಲ ಗಂಟೆಗಳ ಮುನ್ನ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು, "2023 ರ ಚುನಾವಣೆಯಲ್ಲಿ ಗೆಲ್ಲಲು ನಾವು ಒಟ್ಟಾಗಿ ಬಿಜೆಪಿ ವಿರುದ್ಧ ಹೋರಾಡಬೇಕು. ನನಗೆ ಸಂತೋಷವಾಗಿದೆ. ಈ ಕ್ಯಾಬಿನೆಟ್ ಪುನರುಜ್ಜೀವನದಲ್ಲಿ ವಿವಿಧ ವಿಷಯಗಳನ್ನು ಸೂಕ್ಷ್ಮವಾಗಿ ಹೈಕಮಾಂಡ್ ಗಮನಿಸಿದೆ. ಹೊಸ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಮಾನ ಪ್ರಾತಿನಿಧ್ಯದ ವಿಷಯವನ್ನು ನಾವು ಪದೇ ಪದೇ ಪ್ರಸ್ತಾಪಿಸಿದ್ದೇವೆ. ನನಗೆ ಸಂತೋಷವಾಗಿದೆ. ಹೈಕಮಾಂಡ್ ಮತ್ತು ರಾಜ್ಯ ಸರ್ಕಾರ ಇದನ್ನು ಗಮನಿಸಿದೆ" ಎಂದು ಸಚಿನ್ ಪೈಲಟ್ ಸುದ್ದಿಗಾರರಿಗೆ ತಿಳಿಸಿದರು.

ಹೊಸ ಕ್ಯಾಬಿನೆಟ್‌ನಲ್ಲಿ ತನ್ನ ಐವರು ನಿಷ್ಠಾವಂತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕೇಳಿದ ಪೈಲಟ್, "ಕಾಂಗ್ರೆಸ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ನಾಯಕತ್ವದಲ್ಲಿ ಕೆಲಸ ಮಾಡುತ್ತಿದೆ. ಈ ವಿಷಯ ನೀವು ಮಾತನಾಡುತ್ತಲೇ ಇರುತ್ತೀರಿ. ಈ ಗುಂಪು, ಆ ಗುಂಪು ಯಾವುದೇ ಗುಂಪು ಇಲ್ಲ. ಕೇವಲ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಪಕ್ಷ ಮಾತ್ರ ಇರುವುದು. ಅದೊಂದೊಂದೇ ಬಣ ಇದೆ. ಬೇರೆ ಯಾವುದೇ ಬಣಗಳಿಲ್ಲ" ಎಂದರು.

"ಬದಲಾವಣೆ ನಿರಂತರವಾಗಿದೆ ಮತ್ತು ಭವಿಷ್ಯದಲ್ಲಿ ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಚುನಾವಣೆಗೆ ಕೇವಲ 22 ತಿಂಗಳುಗಳು ಬಾಕಿಯಿದೆ. ನಾವು ಜನರನ್ನು ಹುರಿದುಂಬಿಸಬೇಕಾಗಿದೆ. ಹೊಸ ಜನರನ್ನು ಕರೆತರಬೇಕು. ಬಿಜೆಪಿಯ ನೀತಿಗಳನ್ನು ಜನರು ತಿರಸ್ಕರಿಸಿದ್ದಾರೆ. ಪ್ರಧಾನಿಯವರು ಕೃಷಿ ಕಾನೂನುಗಳನ್ನು ಹಿಂಪಡೆಯುವುದನ್ನು ನಾವು ನೋಡಿದ್ದೇವೆ. ಇದು ದೊಡ್ಡ ರಾಜಕೀಯ ಒತ್ತಡವನ್ನು ಸೂಚಿಸುತ್ತದೆ" ಎಂದು ಅವರು ಹೇಳಿದರು.

   ಮರುಳ ಫ್ರೂಟ್ ತಿಂದ ಪ್ರಾಣಿಗಳ ಪಜೀತಿ ನೋಡಿ | Oneindia Kannada

   ಸೆಪ್ಟೆಂಬರ್‌ನಲ್ಲಿ ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿಯಾಗಿ ಚರಂಜಿತ್ ಚನ್ನಿ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿತ್ತು. ನಮ್ಮ ಸರ್ಕಾರದಲ್ಲಿ ಇತ್ತೀಚಿಗೆ ದಲಿತ ಪ್ರಾತಿನಿದ್ಯ ಇರಲಿಲ್ಲ. ಹೀಗಾಗಿ ನೂತನ ಸಚಿವ ಸಂಪುಟದಲ್ಲಿ ನಾಲ್ವರು ದಲಿತ ಸಚಿವರನ್ನು ಸೇರಿಸಿಕೊಳ್ಳಲಾಗಿದೆ. ಜೊತೆಗೆ ರಾಜಸ್ಥಾನದ ಆಡಳಿತದಲ್ಲಿ ಮಹಿಳೆಯರ ಪಾತ್ರವೂ ನಿರ್ಣಾಯಕವಾಗಿದೆ. ಉತ್ತರ ಪ್ರದೇಶದಲ್ಲಿ ಸ್ಪರ್ಧಿಸುವ ಪಕ್ಷದ 40 ಪ್ರತಿಶತ ಅಭ್ಯರ್ಥಿಗಳು ಮಹಿಳೆಯರಾಗಿರುತ್ತಾರೆ ಎಂದು ಘೋಷಿಸಿದ್ದಕ್ಕಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಶ್ಲಾಘಿಸಿದರು.

   English summary
   A total of 15 ministers were sworn in at the Raj Bhawan in Jaipur on Sunday. 12 new and three Ministers of State who are being elevated to Cabinet rank.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion