ಈ ಮಣ್ಣಿನ ಆಣೆ, ಭಾರತ ತಲೆ ಬಾಗಲು ಬಿಡೆನು: ಮೋದಿ

Recommended Video

      Surgical Strike 2: ಈ ಮಣ್ಣಿನ ಆಣೆ, ಭಾರತ ತಲೆ ಬಾಗಲು ಬಿಡೆನು: ಮೋದಿ | Oneindia Kannada

      ಚುರು (ರಾಜಸ್ಥಾನ), ಫೆಬ್ರವರಿ 26: ಈ ಮಣ್ಣಿನ ಆಣೆ ನಾನು ದೇಶವನ್ನು ಅಳಿಯಲು ಬಿಡುವುದಿಲ್ಲ, ಭಾರತ ಅಳಿಯಲು ಬಿಡುವುದಿಲ್ಲ, ಭಾರತ ಅಲುಗಾಡಲು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಕವಿ ಭಾವದಲ್ಲಿ ಹೇಳಿದರು.

      ರಾಜಸ್ಥಾನದ ಚುರುವಿನಲ್ಲಿ ಸಮಾವೇಶದಲ್ಲಿ ಮಾತನಾಡಿದ ಅವರು, ಸುದೀರ್ಘ ಕವಿತೆಯ ಮೂಲಕ ತಾವು ದೇಶವನ್ನು ಬಾಗಲು, ದೇಶವನ್ನು ಅಳಿಯಲು ಬಿಡುವುದಿಲ್ಲ ಎಂದರು.

      ಪಾಕಿಸ್ತಾನದ ಮೇಲೆ ಏರಿ ಹೋಗಿ ಇಂದು ನಡೆಸಿದ ಉಗ್ರರ ಕಾರ್ಯಾಚರಣೆಯ ಬಗ್ಗೆ ನೇರವಾಗಿ ಭಾಷಣದಲ್ಲಿ ಪ್ರಸ್ತಾಪಿಸದಿದ್ದರೂ, ನಮ್ಮ ಪರಾಕ್ರಮಿ ಸೈನಿಕರು ಮೆರೆದಿರುವ ಸಾಹಸಕ್ಕೆ ನಾವೆಲ್ಲಾ ತಲೆ ಬಾಗಿ ನಮಿಸೋಣ ಎಂದು ಉಗ್ರರ ವಿರುದ್ಧ ಕಾರ್ಯಾಚರಣೆ ಮಾಡಿದ ಸೈನಿಕರ ನೆನೆಸಿದರು. ದೇಶ ಸುಭದ್ರ ಕೈಗಳಲ್ಲಿದೆ ಆತಂಕ ಬೇಡ ಎಂದು ಭರವಸೆ ಹೇಳಿದರು.

      I did not let India down : Narendra Modi

      ದೇಶಪ್ರೇಮ ತುಂಬಿದ ಕವಿತೆಯ ಸಾಲುಗಳನ್ನು ಹೇಳಿದ ಮೋದಿ ಅವರು, ಕವನದ ಮೂಲಕ ತಾವು ದೇಶವನ್ನು ತಲೆಬಾಗಲು ಬಿಡುವುದಿಲ್ಲ, ದೇಶವನ್ನು ಅಳಿದು ಹೋಗಲು ಬಿಡುವುದಿಲ್ಲ, ನಾವು ದೇಶದ ಎಲ್ಲರನ್ನೂ ಗೆಲ್ಲಿಸುತ್ತೇವೆ ಎಂದು ಹೇಳಿದರು.

      ಪುಲ್ವಾಮಾ ದಾಳಿಯನ್ನು ನೆನೆದ ಮೋದಿ, ಭಾರತದ ವೀರ ಸೈನಿಕರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ, ಅದಕ್ಕಾಗಿ ಈಗಾಗಲೇ ಕಠಿಣವಾದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

      ನಮಗೆ ದೇಶ ಮೊದಲು, ಈ ಮೊದಲು ಇದ್ದ ಸರ್ಕಾರಗಳು ಮಾಡಲಾಗದ್ದನ್ನು ನಾವು ಮಾಡಿ ತೋರಿಸಿದ್ದೇವೆ. ಓಆರ್‌ಓಪಿ ಜಾರಿಗೊಳಿಸಿದ್ದೇವೆ, ಆವಾಸ ಯೋಜನೆಯ ಲಾಭವನ್ನು ಕೋಟ್ಯಂತರ ಜನ ಈಗಾಗಲೇ ಪಡೆದುಕೊಂಡಿದ್ದಾರೆ ಎಂದು ಮೋದಿ ಹೇಳಿದರು.

      ದೇಶವು ಗಟ್ಟಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದಕ್ಕೆ ಕಾರಣ, ನೀವು ಗಟ್ಟಿಯಾದ ಸರ್ಕಾರವನ್ನು ಆರಿಸಿದ್ದೀರಿ, ನಿಮ್ಮ ಮತ ಎಲ್ಲ ಶಕ್ತಿಗಿಂತಲೂ ಮಿಗಿಲಾದುದು, ಅಶಕ್ತ ಸರ್ಕಾರ ರಚಿಸುವ ಹಪಹಪಿಯಲ್ಲಿರುವವರಿಗೆ ನಿಮ್ಮ ಮತದಿಂದ ಉತ್ತರ ನೀಡಿ ಎಂದು ಮೋದಿ ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+