• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

''ಆಲ್ಕೋಹಾಲ್ ಕೊರೊನಾವನ್ನು ಕೊಲ್ಲುತ್ತದೆ'' ಎಂದ ರಾಜಸ್ಥಾನ ಶಾಸಕ

|

ಕೋಟ, ಮೇ 1: ''ಆಲ್ಕೋಹಾಲ್ ಕೈನಲ್ಲಿರುವ ಹಾಗೂ ಗಂಟಲಿನಲ್ಲಿರುವ ಕೊರೊನಾ ವೈರಸ್‌ಗಳನ್ನು ಕೊಲ್ಲುತ್ತದೆ'' ಎಂದು ರಾಜಸ್ಥಾನ ಶಾಸಕ, ಕಾಂಗ್ರೆಸ್ ಮಾಜಿ ಸಚಿವ ಭಾರತ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಭಾರತ್ ಸಿಂಗ್ ಮದ್ಯವನ್ನು ಕೈನಲ್ಲಿ ಉಜ್ಜುವಾಗ ಕೈಯಿಂದ ಕೊರೊನಾ ವೈರಸ್ ಅನ್ನು ತೆಗೆದು ಹಾಕಬಹುದು. ಅದನ್ನು ಸೇವಿಸುವುದರಿಂದ ಗಂಟಲಿನಿಂದ ಕೊರೊನಾ ವೈರಸ್ ಅನ್ನು ಅಳಿಸಬಹುದು ಎಂದಿದ್ದಾರೆ.

ಕೊರೊನಾ ಅಂತ್ಯವಾಗುವವರೆಗು ಮದ್ಯ ನಿಷೇಧ ಮಾಡೋದು ಒಳ್ಳೆಯದು ಕೊರೊನಾ ಅಂತ್ಯವಾಗುವವರೆಗು ಮದ್ಯ ನಿಷೇಧ ಮಾಡೋದು ಒಳ್ಳೆಯದು

ಮದ್ಯದಂಗಡಿಗಳನ್ನು ಮುಚ್ಚುವುದರಿಂದ ಅಕ್ರಮ ಮದ್ಯ ತಯಾರಿಕೆ ಹೆಚ್ಚಳವಾಗುತ್ತಿದೆ. ಇದು ರಾಜ್ಯ ಸರ್ಕಾರಕ್ಕೆ ಭಾರಿ ಆದಾಯ ನಷ್ಟಕ್ಕೆ ಕಾರಣವಾಗಿದೆ ಎಂದು ಭಾರತ್ ಸಿಂಗ್ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ವೈನ್ ಅಂಗಡಿಗಳನ್ನು ತೆರೆಯುವಂತೆ ಒತ್ತಾಯಿಸಿ ಭಾರತ್ ಸಿಂಗ್ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎರಡೂ ಲಾಕ್ ಡೌನ್ ಸಮಯದಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡಿಲ್ಲ. ಆದರೆ, ವೈನ್ ಅಂಗಡಿಗಳ ಮುಚ್ಚುವಿಕೆಯು ರಾಜ್ಯದ ಆದಾಯದ ಬೆನ್ನೆಲುಬನ್ನು ಮುರಿಯುತ್ತಿದೆ ಎಂದು ತಿಳಿಸಿದ್ದಾರೆ. ವೈನ್ ಅಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದರೆ ಅದು ಉತ್ತಮ ಎಂದು ಭಾರತ್ ಸಿಂಗ್ ಹೇಳಿದರು.

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹ ಲಾಕ್‌ಡೌನ್ ಸಮಯದಲ್ಲಿ ಮದ್ಯ ಮಾರಾಟ ಮಾಡುವ ಹೇಳಿಕೆ ನೀಡಿ ಟೀಕೆಗೆ ಗುರಿ ಆಗಿದ್ದರು.

English summary
Drinking alcohol kills coronavirus in throat says Rajasthan Congress MLA Bharat Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X