• search
 • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಸ್ಥಾನ ಬಿಜೆಪಿಗೆ ಸಂಕಷ್ಟ ತಂದ ಬಿಎಸ್‌ಪಿ ವಿಲೀನ!

|

ಜೈಪುರ, ಜುಲೈ 28 : ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿನ ನಡುವೆ ಪ್ರತಿಪಕ್ಷ ಬಿಜೆಪಿಗೆ ಬಿಎಸ್‌ಪಿ ವಿಲೀನ ಸಂಕಷ್ಟ ತಂದಿದೆ. ಒಂದು ವೇಳೆ ಬಿಎಸ್‌ಪಿಯ 6 ಶಾಸಕರು ಅಶೋಕ್ ಗೆಹ್ಲೋಟ್ ಸರ್ಕಾರದ ಪರವಾಗಿ ನಿಂತರೆ ಬಹುಮತದ ಲೆಕ್ಕಾಚಾರಗಳು ಉಲ್ಟಾ ಆಗಲಿವೆ.

   Andre Russell wasn't unhappy with me : Dinesh Karthik | Oneindia Kannada

   ಕಾಂಗ್ರೆಸ್‌ನೊಂದಿಗೆ ಬಿಎಸ್‌ಪಿ ಶಾಸಕರು ವಿಲೀನಗೊಳ್ಳುವುದನ್ನು ವಿರೋಧಿಸಿ ಮದನ್ ದಿಲ್ವಾರ್ ಎಂಬ ಬಿಜೆಪಿ ಶಾಸಕರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಇನ್ನೊಬ್ಬ ಬಿಜೆಪಿ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಸೋಮವಾರ ವಜಾಗೊಳಿಸಿತ್ತು.

   ರಾಜಸ್ಥಾನ ಬಿಕ್ಕಟ್ಟು; ಸಂವಿಧಾನ ಮತ್ತು ಪಕ್ಷಾಂತರ ನಿಷೇಧ ಕಾಯ್ದೆ

   ಕಾಂಗ್ರೆಸ್‌ ಜೊತೆ ವಿಲೀನವಾಗಿದ್ದೇವೆ ಎಂದು ಹೇಳಿಕೊಳ್ಳುವ ಬಿಎಸ್‌ಪಿ ಶಾಸಕರನ್ನು ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕು ಎಂದು ಅರ್ಜಿಯಲ್ಲಿ ಬಿಜೆಪಿ ಮನವಿ ಮಾಡಿದೆ. ಬುಧವಾರ ಈ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಲಿದೆ.

   ಬಿಎಸ್‌ಪಿ, ಕಾಂಗ್ರೆಸ್ ವಿಲೀನ; ಮಾಯಾವತಿ ಹೇಳುವುದೇನು?

   ಮತ್ತೊಂದು ಕಡೆ ಬಿಎಸ್‌ಪಿ ಆರು ಶಾಸಕರು ಕಾಂಗ್ರೆಸ್ ಜೊತೆ ವಿಲೀನಗೊಳ್ಳುವುದನ್ನು ವಿರೋಧಿಸಿ ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರಲಿದೆ. ಶಾಸಕರಿಗೆ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಮತ ಚಲಾವಣೆ ಮಾಡುವಂತೆ ಬಿಎಸ್‌ಪಿ ಈಗಾಗಲೇ ಸೂಚನೆ ನೀಡಿದೆ.

   ಅಧಿವೇಶನ ನಡೆಸಿ; ರಾಜ್ಯಪಾಲರಿಗೆ ಅಶೋಕ್ ಗೆಹ್ಲೋಟ್ ಮನವಿ!

   ಬಿಎಸ್‌ಪಿ ವಿವಾದವೇನು?

   ಬಿಎಸ್‌ಪಿ ವಿವಾದವೇನು?

   2019ರ ಸೆಪ್ಟೆಂಬರ್‌ನಲ್ಲಿ ರಾಜಸ್ಥಾನ ವಿಧಾನಸಭೆ ಚುನಾವಣೆ ಮುಗಿದ ಬಳಿಕ 6 ಬಿಎಸ್‌ಪಿ ಶಾಸಕರು ನಾವು ಕಾಂಗ್ರೆಸ್ ಪಕ್ಷದ ಜೊತೆ ವಿಲೀನವಾಗಿದ್ದೇವೆ ಎಂದು ಘೋಷಣೆ ಮಾಡಿದರು. ಸ್ಪೀಕರ್ ಸಹ ಇದಕ್ಕೆ ಒಪ್ಪಿಗೆ ನೀಡಿದರು. ಆದರೆ, ಬಿಎಸ್‌ಪಿ ಇದನ್ನು ಚುನಾವಣಾ ಆಯೋಗದಲ್ಲಿ ಪ್ರಶ್ನೆ ಮಾಡಿದೆ ಅದರ ತೀರ್ಪು ಇನ್ನೂ ಬರಬೇಕಿದೆ. ಈಗ ಗೆಹ್ಲೋಟ್ ವಿರುದ್ಧ ಮತ ಚಲಾವಣೆ ಮಾಡಲು 6 ಶಾಸಕರು ಒಪ್ಪುತ್ತಿಲ್ಲ.

   ಮಾಯಾವತಿ ಹೇಳುವುದೇನು?

   ಮಾಯಾವತಿ ಹೇಳುವುದೇನು?

   ಮಂಗಳವಾರ ಬಿಎಸ್‌ಪಿ ವರಿಷ್ಠೆ ಮಾಯಾವತಿ ರಾಜಸ್ಥಾನ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ಕಾಂಗ್ರೆಸ್ ವಿರುದ್ಧ ಮತದಾನ ಮಾಡುವಂತೆ 6 ಶಾಸಕರಿಗೆ ನಾವು ಸೂಚನೆ ನೀಡಿದ್ದೇವೆ. ಅವರು ಹಾಗೆ ಮಾಡದಿದ್ದಲ್ಲಿ ಅವರ ಪಕ್ಷದ ಸದಸ್ಯತ್ವ ರದ್ದಾಗಲಿದೆ. ಬಿಎಸ್‌ಪಿ ಹಿಂದೆ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋಗಿರಲಿಲ್ಲ. ಈಗ ನ್ಯಾಯಾಲಯದ ಮೊರೆ ಹೋಗುತ್ತೇವೆ" ಎಂದು ಹೇಳಿದ್ದಾರೆ.

   ಬಿಜೆಪಿ ವಾದವೇನು?

   ಬಿಜೆಪಿ ವಾದವೇನು?

   ರಾಜಸ್ಥಾನದ ಪ್ರತಿಪಕ್ಷ ಬಿಜೆಪಿ ಬಿಎಸ್‌ಪಿ ಮತ್ತು ಕಾಂಗ್ರೆಸ್ ವಿಲೀನ ರಾಜ್ಯ ಮಟ್ಟದಲ್ಲಿ ಆಗಲು ಸಾಧ್ಯವಿಲ್ಲ. ಎರಡೂ ರಾಷ್ಟ್ರೀಯ ಪಕ್ಷವಾದ ಕಾರಣ ರಾಷ್ಟ್ರೀಯ ಮಟ್ಟದಲ್ಲೂ ವಿಲೀನವಾಗಬೇಕು. ರಾಜಸ್ಥಾನದ ಬಿಜೆಪಿ ಶಾಸಕರು ಅಶೋಕ್ ಗೆಹ್ಲೋಟ್‌ಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ವಾದ ಮಾಡುತ್ತಿದೆ. ಈ ವಿವಾದವನ್ನು ಹೈಕೋರ್ಟ್‌ಗೆ ತೆಗೆದುಕೊಂಡು ಹೋಗಿದೆ.

   ಕಾಂಗ್ರೆಸ್ ವಕೀಲರ ವಾದ

   ಕಾಂಗ್ರೆಸ್ ವಕೀಲರ ವಾದ

   ಕಾಂಗ್ರೆಸ್‌ನ ವಕೀಲರ ಪ್ರಕಾರ ಯಾವುದೇ ಒಂದು ಪಕ್ಷದಲ್ಲಿ 3/1 ಭಾಗದಷ್ಟು ಶಾಸಕರು ಸಮ್ಮತಿ ನೀಡಿದರೆ ಅವರು ಬೇರೆ ಪಕ್ಷದ ಜೊತೆ ವಿಲೀನಗೊಳ್ಳಬಹುದು. ಆಗ ಅವರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ಸಂವಿಧಾನದಲ್ಲಿಯೂ ಇದಕ್ಕೆ ಅವಕಾಶವಿದೆ.

   English summary
   BSP to file a plea in Rajasthan high court on July 29, 2020 against the merger of 6 BSP MLAs in the state with Congress party. BJP leader Madan Dilwar files another petition before HC against the merger of BSP MLAs.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more