ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್, ಉತ್ತರಾಖಂಡದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ: ಸಚಿನ್ ಪೈಲಟ್

|
Google Oneindia Kannada News

ಜೈಪುರ, ಜನವರಿ 21: ಪಂಚ ರಾಜ್ಯಗಳಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ "ಉತ್ತರಾಖಂಡ ಮತ್ತು ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ," ಎಂದು ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಗುರುವಾರ ಹೇಳಿದ್ದಾರೆ.

"ಉತ್ತರ ಪ್ರದೇಶದ ಮತದಾರರಿಗೆ ಕಾಂಗ್ರೆಸ್ ಉತ್ತಮ ಆಯ್ಕೆಯಾಗಿ ಹೊರಹೊಮ್ಮುತ್ತಿದೆ," ಎಂದು ಕೂಡಾ ಕಾಂಗ್ರೆಸ್‌ ಮುಖಂಡ ಸಚಿನ್ ಪೈಲಟ್ ಈ ಸಂದರ್ಭದಲ್ಲೇ ಉಲ್ಲೇಖ ಮಾಡಿದ್ದಾರೆ. ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ವಾಪಸಾದ ಸಚಿನ್ ಪೈಲಟ್, ಗುರುವಾರ ಟೋಂಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು ಈ ಸಂದರ್ಭದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

 ಪಂಜಾಬ್‌ ಚುನಾವಣೆ: ರಾಹುಲ್ ಸಹಾಯಕರ ಟ್ವಿಟ್ಟರ್‌ ಸಮೀಕ್ಷೆಯಲ್ಲಿ ಚನ್ನಿಗೆ ಗೆಲುವು ಪಂಜಾಬ್‌ ಚುನಾವಣೆ: ರಾಹುಲ್ ಸಹಾಯಕರ ಟ್ವಿಟ್ಟರ್‌ ಸಮೀಕ್ಷೆಯಲ್ಲಿ ಚನ್ನಿಗೆ ಗೆಲುವು

"ಉತ್ತರಾಖಂಡ ಮತ್ತು ಪಂಜಾಬ್‌ನಲ್ಲಿ ನಾವು ಸರ್ಕಾರ ರಚಿಸುತ್ತೇವೆ ಮತ್ತು ಉತ್ತರ ಪ್ರದೇಶದ ಜನರು ಬದಲಾವಣೆ ಬಯಸುತ್ತಾರೆ. ಹಾಗಾಗಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಉತ್ತಮ ಆಯ್ಕೆಯಾಗಿ ಹೊರಹೊಮ್ಮುತ್ತಿದೆ," ಎಂದು ಅಭಿಪ್ರಾಯಿಸಿದ ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, "ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಕಿರುಕುಳ, ಮಹಿಳೆಯರ ಶೋಷಣೆ," ನಡೆಯುತ್ತಿದೆ ಎಂದು ಆರೋಪ ಮಾಡಿದರು.

ZEE News Opinion Poll: ಪಂಜಾಬ್‌ನಲ್ಲಿ ಯಾರಿಗೆ ಸಿಎಂ ಕುರ್ಚಿ? ZEE News Opinion Poll: ಪಂಜಾಬ್‌ನಲ್ಲಿ ಯಾರಿಗೆ ಸಿಎಂ ಕುರ್ಚಿ?

 ಉತ್ತರ ಪ್ರದೇಶದಲ್ಲಿ ರೈತರ, ಮಹಿಳೆಯರ ಶೋಷಣೆ

ಉತ್ತರ ಪ್ರದೇಶದಲ್ಲಿ ರೈತರ, ಮಹಿಳೆಯರ ಶೋಷಣೆ

"ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ಮಹಿಳೆಯರ ವಿರುದ್ಧ ಶೋಷಣೆಯನ್ನು ಮಾಡಲಾಗುತ್ತಿದೆ. ನೀವು ರೈತರೊಂದಿಗೆ ತುಂಬಾ ಬರ್ಬರತೆಯ ನಡವಳಿಕೆಯನ್ನು ತೋರುತ್ತಿದ್ದೀರಿ. ಮಹಿಳೆಯರನ್ನು ಶೋಷಿಸುತ್ತಿದ್ದೀರಿ. ಆಡಳಿತವು ಕಾನೂನಿನ ವ್ಯಾಪ್ತಿಯಿಂದ ಹೊರಗುಳಿದಿದೆ. ಜನರಲ್ಲಿ ಭಯವನ್ನು ಹುಟ್ಟುಹಾಕಿದೆ. ಉತ್ತರ ಪ್ರದೇಶದ ಬಿಜೆಪಿ ಆಡಳಿತದಡಿಯಲ್ಲಿ ರಾಜ್ಯದಲ್ಲಿ ಕೇವಲ ಬುಲ್ಡೋಜರ್ ನಿಯಮವಿದೆ ಮತ್ತು ಎನ್‌ಕೌಂಟರ್‌ ನಿಯಮವಿದೆ," ಎಂದು ಸಚಿನ್‌ ಪೈಲಟ್‌ ಬಿಜೆಪಿ ವಿರುದ್ಧ ಕಿಡಿಕಾರಿದರು.

 ಕಡಿಮೆ ಬಲ, ಆದರೂ ನಾವು ಪ್ರಬಲ ಪ್ರತಿಪಕ್ಷ

ಕಡಿಮೆ ಬಲ, ಆದರೂ ನಾವು ಪ್ರಬಲ ಪ್ರತಿಪಕ್ಷ

"ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮೂರು ದಶಕಗಳಿಂದ ಅಧಿಕಾರದಿಂದ ಹೊರಗುಳಿದಿದೆ. ಆದರೆ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷದ ಸರ್ಕಾರವನ್ನು ರಚನೆ ಮಾಡಿದೆ. ಜನರು ಆ ಸರ್ಕಾರಗಳನ್ನು ತಿರಸ್ಕರಿಸಿದ್ದಾರೆ. ಜನರು ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ. ಈ ನಡುವೆ ನಾವು ಉತ್ತಮ ಪರ್ಯಾಯವನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ. ನಾವು ಕಡಿಮೆ ಸಂಖ್ಯೆಯಲ್ಲಿದ್ದೇವೆ, ಆದರೂ ನಿಜವಾದ ಪಾತ್ರವನ್ನು ಪ್ರತಿಪಕ್ಷ ಕಾಂಗ್ರೆಸ್ ವಹಿಸಿದೆ," ಎಂದು ಪೈಲಟ್ ಹೇಳಿದರು.

 ಪಂಚ ರಾಜ್ಯ ವಿಧಾನಸಭೆ ಚುನಾವಣೆ

ಪಂಚ ರಾಜ್ಯ ವಿಧಾನಸಭೆ ಚುನಾವಣೆ

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

 ಉತ್ತರಾಖಂಡ, ಪಂಜಾಬ್‌ 2017ರ ವಿಧಾನಸಭೆ ಚುನಾವಣೆ

ಉತ್ತರಾಖಂಡ, ಪಂಜಾಬ್‌ 2017ರ ವಿಧಾನಸಭೆ ಚುನಾವಣೆ

ಕಳೆದ 2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಗದ್ದುಗೆ ನೀಡಿದ್ದರು. 117 ಕ್ಷೇತ್ರಗಳಲ್ಲಿ ಕಾಂಗ್ರೆಸ್ 78 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಆಮ್ ಆದ್ಮಿ ಪಕ್ಷವು 20 ಕಡೆಗಳಲ್ಲಿ ವಿಜಯ ಪತಾಕೆ ಹಾರಿಸಿತ್ತು. ಶಿರೋಮಣಿ ಅಕಾಲಿ ದಳ 18 ಹಾಗೂ ಇತರರು ಎರಡು ಕಡೆಗಳಲ್ಲಿ ಗೆಲುವು ಸಾಧಿಸಿದ್ದರು. ಇನ್ನು ಕಳೆದ 2017ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಉತ್ತರಾಖಂಡದ 70 ಸ್ಥಾನಗಳಲ್ಲಿ 57 ಸ್ಥಾನಗಳನ್ನು ಗೆದ್ದು ಸರ್ಕಾರವನ್ನು ರಚಿಸಿತ್ತು. ಕಾಂಗ್ರೆಸ್ ಪಕ್ಷ ಕೇವಲ 11 ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. (ಒನ್‌ಇಂಡಿಯಾ ಸುದ್ದಿ)

Recommended Video

ಪಂಜಾಬ್ ಕಾಂಗ್ರೆಸ್ ನಲ್ಲಿ CM ಅಭ್ಯರ್ಥಿ ಗೊಂದಲ:ಸಿಧು ಚನ್ನಿ ನಡುವೆ ರೇಸ್ | Oneindia Kannada

English summary
Assembly Poll: Congress will form govt in Punjab, Uttarakhand Says Sachin Pilot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X