• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಪ್ಪಳ ಖ್ಯಾತಿಯ ಸಚಿವ ಮೇಘವಾಲ್ ಗೆ ಕೊವಿಡ್ 19 ಸೋಂಕು

|
Google Oneindia Kannada News

ಜೈಪುರ, ಆ. 9: ಹಪ್ಪಳ ತಿಂದು ಕೊರೊನಾವೈರಸ್ ಸೋಂಕಿನಿಂದ ದೂರಾಗಿ ಎಂದು ಪ್ರಚಾರ ನೀಡಿದ್ದ ಕೇಂದ್ರ ಸಚಿವ ಅರ್ಜುನ್​ ರಾಂ ಮೇಘವಾಲ್ ಅವರಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿದೆ.

ಕೇಂದ್ರ ಭಾರಿ ಕೈಗಾರಿಕೆ ಹಾಗೂ ಸಂಸದೀಯ ವ್ಯವಹಾರ ಖಾತೆ ರಾಜ್ಯ ಸಚಿವ ಅರ್ಜುನ್ ಮೇಘವಾಲ್ ಅವರಿಗೆ ಕೊವಿಡ್ 19 ಸೋಂಕು ತಗುಲಿರುವ ಬಗ್ಗೆ ಎರಡು ಬಾರಿ ಪರೀಕ್ಷೆ ಮಾಡಲಾಗಿದ್ದು, ಎರಡು ಬಾರಿಯೂ ಪಾಸಿಟಿವ್ ಎಂದು ವರದಿ ಬಂದಿದೆ.

ಹಪ್ಪಳದಿಂದ ಕೊರೊನಾ ನಿಯಂತ್ರಣ: ಕೇಂದ್ರ ಸಚಿವ ಅರ್ಜುನ್ಹಪ್ಪಳದಿಂದ ಕೊರೊನಾ ನಿಯಂತ್ರಣ: ಕೇಂದ್ರ ಸಚಿವ ಅರ್ಜುನ್

ವೈದ್ಯರ ಸಲಹೆ ಮೇರೆಗೆ ಏಮ್ಸ್ ಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮೇಘವಾಲ್ ಅವರ ಸಂಪರ್ಕಕ್ಕೆ ಬಂದ ಎಲ್ಲರೂ ಕೂಡಲೇ ವರದಿ ಮಾಡಿಕೊಂಡು, ಪರೀಕ್ಷೆ ಮಾಡಿಕೊಡಿಸಿಕೊಳ್ಳಬೇಕು ಎಂದು ಬಿಜೆಪಿ ಸೂಚಿಸಿದೆ.

ಕೇಂದ್ರ ಸಚಿವ ಅರ್ಜುನ್​ ಮೇಘವಾಲ್​ ಇತ್ತೀಚೆಗೆ ಬಿಕಾನೇರ್ ನಲ್ಲಿ Bhabhi Ji papad ಬಿಡುಗಡೆ ಮಾಡಿ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಈ ಉತ್ಪನ್ನ ಇದು ಆತ್ಮನಿರ್ಭರ ಭಾರತ ಯೋಜನೆಯಡಿ ತಯಾರಿಸಲಾಗಿದೆ, ಇದು ವೈರಾಣು ಸೋಂಕಿನ ವಿರುದ್ಧ ಹೋರಾಡುವ antibodyಗಳನ್ನು ಹೆಚ್ಚಳಗೊಳಿಸುತ್ತದೆ, ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಇಂಥ ಉಪಯುಕ್ತ ಉತ್ಪನ್ನವನ್ನು ಹೊರ ತಂದ ಸಂಸ್ಥೆಗೆ ಅಭಿನಂದನೆ ಎಂದಿದ್ದರು.

English summary
Union Minister Arjun Ram Meghwal of 'Papad' fame said he has tested positive for COVID-19 and admitted to AIIMS here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X