ಹಾವಿನ ಜೊತೆ ಸರಸ ಆಡಲು ಹೋಗಿ ಕಣ್ಣನ್ನೇ ಕಳೆದುಕೊಳ್ಳುತ್ತಿದ್ದ ಭೂಪ!

ಹಾವು ಎಂದರೆ ಯಾರಿಗೆ ತಾನೆ ಭಯ ಇಲ್ಲ ಹೇಳಿ. ಹಾವು ಹಿಡಿಯುವವರು ಕೂಡ ಹಾವುಗಳಿಗೆ ಒಂದಲ್ಲ ಒಂದು ರೀತಿ ಹೆದರಿಕೊಂಡೇ ಇರುತ್ತಾರೆ. ಕೆಲವರಂತೂ ಹಾವು ಕಂಡ ತಕ್ಷಣ ಎದ್ದೂ ಬಿದ್ದು ಓಡಿಬಿಡ್ತಾರೆ. ಆದರೆ ಇಲ್ಲೊಬ್ಬ ಭೂಪ ಹಾವಿನ ಜೊತೆ ಸರಸ ಆಡಲು ಹೋಗಿ ದೊಡ್ಡ ಕಂಟಕಕ್ಕೆ ಸಿಲುಕಿಬಿಟ್ಟಿದ್ದ.

ಅಷ್ಟಕ್ಕೂ ಇಲ್ಲಿ ಆಗಿದ್ದೇನೆಂದರೆ, ವೈಲ್ಡ್‌ಲೈಫ್​ ಬಗ್ಗೆ ವಿಡಿಯೋ ಅಪ್ಲೋಡ್ ಮಾಡುವ ಅಮೆರಿಕದ ಯೂಟ್ಯೂಬರ್ ನಿಕ್ ಬಿಷಪ್ ಹಾವನ್ನು ಹಿಡಿದು ತಂದಿದ್ದ. ಫ್ಲೋರಿಡಾದ ಎವರ್ಗ್ಲೇಡ್ಸ್ ನ್ಯಾಷನಲ್ ಪಾರ್ಕ್‌ನಲ್ಲಿ ವಿಷರಹಿತ ಹಾವು ಹಿಡಿದು ತಂದು ಅದರ ಬಗ್ಗೆ ವಿವರಣೆ ನೀಡುತ್ತಿದ್ದ. ಹಾವು ಸುಮ್ಮನಿರುತ್ತಾ ಹೇಳಿ..? ಇಲ್ಲ ನಾಲ್ಕೈದು ಬಾರಿ ತನ್ನ ತಂಟೆಗೆ ಬರದಂತೆ ವಾರ್ನಿಂಗ್ ಕೊಟ್ಟಿದೆ. ಆದರೂ ನಿಕ್ ಹಾವಿನ ಜೊತೆ ಸರಸ ಮುಂದುವರಿಸಿದ್ದಾನೆ. ಆಗಲೇ ನೋಡಿ ಸಂಭವಿಸಿದ್ದು ದೊಡ್ಡ ದುರಂತ, ನೋಡುವಷ್ಟು ನೋಡಿ ಹೆಬ್ಬಾವು ನೇರ ನಿಕ್ ಬಿಷಪ್ ಕಣ್ಣಿಗೆ ಗುರಿ ಇಟ್ಟಿದೆ. ನಿಕ್ ಅದೃಷ್ಟ ಚೆನ್ನಾಗಿತ್ತು ಅಂತಾ ಕಾಣುತ್ತೆ ಹಾವು ಕಚ್ಚುವಾಗ ಗುರಿತಪ್ಪಿ ಕಣ್ಣಿನ ಮೇಲೆ ಪೆಟ್ಟು ಬಿದ್ದಿದೆ.

YouTube snake handler brutally attacked by a python

ನದಿಯಂತೆ ಹರಿಯಿತು ರಕ್ತ..!
ಸಾಮಾನ್ಯ ಹಾವುಗಳು ಕಚ್ಚಿದರೆ ವಿಷ ಏರುತ್ತದೆ. ಆದರೆ ಹೆಬ್ಬಾವು ಕಚ್ಚಿದರೆ ರಕ್ತ ಹೊಳೆಯಂತೆ ಹರಿಯೋದು ಪಕ್ಕಾ. ಮೊದಲೇ ಹೆಬ್ಬಾವಿನ ಮರಿ, ನೇರ ಕಣ್ಣಿನ ಮೇಲ್ಬಾಗಕ್ಕೆ ಕುಕ್ಕಿದೆ. ತಕ್ಷಣ ನಿಕ್ ಬಿಷಪ್ ಹಣೆಯಿಂದ ಒಂದೇ ಸಮನೆ ರಕ್ತ ಸುರಿದಿದೆ. ಏನಾಗುತ್ತಿದೆ ಎಂಬುದು ನಿಕ್ ಅರಿವಿಗೆ ಬರುವಷ್ಟರಲ್ಲೇ ಆತನ ಕೈಲ್ಲಿದ್ದ ಆ ಹೆಬ್ಬಾವಿನ ಮರಿ ಅಲ್ಲಿಂದ ಎಸ್ಕೇಪ್ ಆಗಿದೆ. ನಂತರ ವಿಡಿಯೋದಲ್ಲಿ ನಿಕ್ ಬಿಷಪ್ ತನಗಾದ ಗತಿ ವಿವರಿಸಿ ಅಳಲು ತೋಡಿಕೊಂಡಿದ್ದಾನೆ. ತಕ್ಷಣ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಮತ್ತೊಬ್ಬನಿಗೂ ಹೀಗೆ ಆಗಿತ್ತು..!
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಝೂ ಕೀಪರ್ ಆಗಿರುವ ಜಾಯ್ ಬ್ರೀವೆರ್ ಎಂಬಾತನ ಮೇಲೆಯೂ ಕೆಲದಿನಗಳ ಹಿಂದೆ ಹೆಬ್ಬಾವು ದಾಳಿ ನಡೆಸಿತ್ತು. ವೈಲ್ಡ್‌ಲೈಫ್ ಅದರಲ್ಲೂ ಸರಿಸೃಪ ವಿಡಿಯೋ ಮಾಡುವುದರಲ್ಲಿ ಜಾಯ್ ಬ್ರೀವೆರ್ ಸಖತ್ ಫೇಮಸ್. ಈತ ಹಾವಿಗೆ ಆಹಾರ ನೀಡಲು ಹೋದಾಗ ದೊಡ್ಡ ಹೆಬ್ಬಾವು ತಲೆಗೆ ಗುರಿ ಇಟ್ಟು ಅಟ್ಯಾಕ್ ಮಾಡಿತ್ತು. ಎಂದಿನಂತೆ ತನ್ನ ಲಾಕರ್‌ನಲ್ಲಿ ಭದ್ರವಾಗಿ ಮಲಗಿದ್ದ ಹೆಬ್ಬಾವಿಗೆ, ಊಟ ಹಾಕಲು ಹೋಗಿದ್ದ ಜಾಯ್ ಬ್ರೀವೆರ್. ಆದರೆ ಹೆಬ್ಬಾವಿಗೆ ಜಾಯ್ ಬ್ರೀವೆರ್ ತಂದಿದ್ದ ಊಟಕ್ಕಿಂತ ಅವನೇ ರುಚಿಕರ ಅನ್ನಿಸಿರಬೇಕು. ತಕ್ಷಣ ಆ ಬೃಹತ್ ಗಾತ್ರದ ಹೆಬ್ಬಾವು ಆತನ ತಲೆಗೆ ಬಾಯಿ ಹಾಕಿಬಿಟ್ಟಿತ್ತು. ಆತನ ಅದೃಷ್ಟ ಕೂಡ ಚೆನ್ನಾಗಿತ್ತು ಅಂತಾ ಕಾಣುತ್ತೆ, ಸ್ವಲ್ಪದಲ್ಲೇ ಪ್ರಾಣ ಉಳಿಸಿಕೊಂಡಿದ್ದ.

ಸ್ಟೀವ್ ಇರ್ವಿನ್ ದುರಂತ ಸಾವು
ಜಾಯ್ ಬ್ರೀವೆರ್ ಹಣೆಗೆ ಹೆಬ್ಬಾವು ಬಾಯಿ ಹಾಕಿದ ಬಳಿಕ ಕೆಲವರು, ವನ್ಯಜೀವಿ ಜಗತ್ತಿನ ದಂತಕಥೆ ಸ್ಟೀವ್ ಇರ್ವಿನ್ ನೆನಪು ಮಾಡಿಕೊಂಡಿದ್ದಾರೆ. ಸ್ಟೀವ್ ಇರ್ವಿನ್ ಕೂಡ ಇದೇ ರೀತಿ ಡಾಕ್ಯುಮೆಂಟರ್ ಮಾಡುವಾಗ ಬಲಿಯಾಗಿದ್ದರು. ರಾತ್ರಿಹೊತ್ತು ಡಾಕ್ಯುಮೆಂಟರ್ ಶೂಟ್ ಮಾಡುವಾಗ ಸ್ಟ್ರಿಂಗ್‌ರೇ ಮೀನು ಸ್ಟೀವ್ ಇರ್ವಿನ್ ಅವರನ್ನ ಬಲಿಪಡೆದಿತ್ತು. ಆಸ್ಟ್ರೇಲಿಯಾದ ಬ್ಯಾಟ್ ರಿಫ್ ಎಂಬಲ್ಲಿ ಸ್ಟ್ರಿಂಗ್‌ರೇ ಮೀನು ನೇರ ಇರ್ವಿನ್‌ ಎದೆಗೆ ಮುಳ್ಳು ಬಿಟ್ಟಿತ್ತು. ಸ್ಟ್ರಿಂಗ್‌ರೇ ಮೀನಿನ ಮುಳ್ಳು ವಿಷಕಾರಿಯಾಗಿರುತ್ತದೆ. ನೇರವಾಗಿ ಇರ್ವಿನ್ ಎದೆಗೆ ಮುಳ್ಳು ಬಡಿದ ಹಿನ್ನೆಲೆಯಲ್ಲಿ ಇರ್ವಿನ್ ಮೃತಪಟ್ಟಿದ್ದರು. ಸ್ಟೀವ್ ಇರ್ವಿನ್ ಮೊಸಳೆಗಳನ್ನ ಗೊಂಬೆಗಳಂತೆ ಆಡಿಸುವ ಆಟದಲ್ಲಿ ಪೇಮಸ್. ಇದೀಗ ಹಾವಾಡಿಗ ಜಾಯ್ ಬ್ರೀವೆರ್ ಹೆಬ್ಬಾವಿನ ಬಾಯಿಂದ ಮಿಸ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+