ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್: ನೀವು ಮನೆಯಿಂದಲೇ ಡೇಟಿಂಗ್ ಮಾಡಬಹುದು: ಹೇಗಂತೀರಾ?

|
Google Oneindia Kannada News

ಕೊರೊನಾ ಲಾಕ್‌ಡೌನ್‌ನಿಂದ ಕೆಲವರು ಖಿನ್ನತೆಗೆ ಒಳಗಾಗಿರುವುದು ಸತ್ಯ. ಸ್ನೇಹಿತರಿಲ್ಲ, ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್ ಜೊತೆ ಬೇಟಿ ಇಲ್ಲ, ಮನೆಯಲ್ಲಿ ಒಂಟಿಯಾಗಿ ರೂಮಿನಲ್ಲಿ ಕುಳಿತಿರುವುದು ಹೀಗೆ ಹತ್ತು ಹಲವು ಸಮಸ್ಯೆಗಳು.

ಆದರೆ ಆನ್‌ಲೈನ್ ಡೇಟಿಂಗ್ ಅಪ್ಲಿಕೇಷನ್ ಮಾತ್ರ ಈ ಸಂದರ್ಭದಲ್ಲಿ ತನ್ನ ಬಳಕೆದಾರರನ್ನು ಹೆಚ್ಚಿಸಿಕೊಂಡಿದೆ.ಡೇಟಿಂಗ್ ಅಂದ್ರೆ ಸಾಮಾನ್ಯವಾಗಿ ಯಾವುದೋ ಹೋಟೆಲ್‌ಗಳಿಗೆ ಹೋಗುವುದು, ಪಾರ್ಕ್‌ಗಳಲ್ಲಿ ಕೈಕೈ ಹಿಡಿದು ವಾಕ್ ಮಾಡುವುದು, ಕ್ಯಾಂಡಲ್ ಲೈಟ್ ಡಿನ್ನರ್ ಹೀಗೆ ಯೋಚನೆ ಮಾಡ್ತಿದೀರಾ ಅಲ್ವಾ ಅದನ್ನು ಹೊರತುಪಡಿಸಿ ಕೂಡ ಒಂದು ಡೇಟಿಂಗ್ ಇದೆ.

ಸಂಕಷ್ಟದ ಸಮಯದಲ್ಲಿ ಮುಂದಾಳುತನದ ಕ್ಷೋಭೆ- ಏಕೆ-ಹೇಗೆ? ಸಂಕಷ್ಟದ ಸಮಯದಲ್ಲಿ ಮುಂದಾಳುತನದ ಕ್ಷೋಭೆ- ಏಕೆ-ಹೇಗೆ?

ಆದರೆ ಅದೆಲ್ಲವನ್ನೂ ಮೀರಿ ಒಂದು ಡೇಟಿಂಗ್ ಅಪ್ಲಿಕೇಷನ್ ಇದೆ. ಅದರಲ್ಲಿ ನೀವು ಮುಖತಃ ಭೇಟಿ ಮಾಡಬೇಕೆಂದೇನಿಲ್ಲ ನೀವು ಕುಳಿತಲ್ಲಿಂದಲೇ ಅವರ ಬಳಿ ಮಾತನಾಡಬಹುದು. ವಾಟ್ಸಾಪ್ ವಿಡಿಯೋ ಕಾಲ್ ರೀತಿ.

You Can Start Dating From Home Through Online Dating App

ಈ ಡೇಟಿಂಗ್ ಅಪ್ಲಿಕೇಷನ್ ಬಗ್ಗೆ ಕ್ಯಾರಿಸಾ ಬೆನೆಟ್ ವಿವರಿಸುವುದು ಹೀಗೆ' ವಿಡಿಯೋ ಚಾಟ್ ಮೂಲಕ ಡೇಟಿಂಗ್ ಮಾಡುವ ಎಕ್ಸ್‌ಪೀರಿಯನ್ಸ್‌ ಬೇರೇನೇ ಇದೆ ಎನ್ನುತ್ತಾರೆ..
ಕ್ಯಾರಿಸ್ಸಾ ಅವರನ್ನು ವಿಡಿಯೋ ಡೇಟಿಂಗ್ ಅಪ್ಲಿಕೇಷನ್‌ವೊಂದು ಕಳೆದ ಏಳು ವರ್ಷಗಳಿಂದ ಅವರ ಜೊತೆಗಿದೆ. ಆದರೆ ಕೊರೊನಾ ಸಂದರ್ಭದಲ್ಲಿ ಒಂದು ಭಾರಿ ಭಯ ಪಟ್ಟಿದ್ದರು.

ಹಿಂಗ್ ಡೇಟಿಂಗ್ ಆಪ್ ಕೊರೊನಾ ಸಂದರ್ಭದಲ್ಲೂ ಜೊತೆಯಾಗಿತ್ತು. ಕೊರೊನಾ ಸಂದರ್ಭದಲ್ಲಿ ಈ ಅಪ್ಲಿಕೇಷನ್ ಬಳಸುವವರ ಸಂಖ್ಯೆ ಶೇ.70 ರಷ್ಟು ಹೆಚ್ಚಾಗಿತ್ತು.
ಈ ಕಂಪನಿ ಮನೆಯಿಂದಲೇ ಡೇಟಿಂಗ್ ಮಾಡುವ ಅವಕಾಶವನ್ನು ಕಲ್ಪಿಸುತ್ತದೆ. ಕರೆ ಮಾಡಬಹುದು, ವಿಡಿಯೋ ಕಾಲ್ ಮಾಡಬಹುದು , ರಿಯಲ್ ಡೇಟಿಂಗ್‌ನಲ್ಲಿ ಇರುವಂತೆ ಅನ್ನಿಸಲು ಸ್ಕ್ರೀನ್ ಜೂಮ್‌ ಕೂಡ ಮಾಡಬಹುದಾಗಿದೆ.

ಮಾರ್ಚ್ 15ರ ಬಳಿಕ ಮೆಸೇಜ್ ಹಾಗೂ ವಿಡಿಯೋ ಕಾಲ್‌ಗಳ ಸಂಖ್ಯೆ ಶೇ.35ರಷ್ಟು ಹೆಚ್ಚಾಗಿದೆ.ಐಸೋಲೇಷನ್‌ನಲ್ಲಿದ್ದಾಗಲೂ ಕೂಡ ವಿಶ್ವದ ಯಾವುದೇ ಮೂಲೆಯಲ್ಲಿರುವವರ ಜೊತೆ ನೀವು ಮಾತನಾಡಬೇಕೆನಿಸಿದರೂ ಮಾತನಾಡುವ ಅವಕಾಶ ಕಲ್ಪಿಸಿಕೊಡಲಾಗಿತ್ತು.

ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ 1,042 ಬೆಡ್ ವ್ಯವಸ್ಥೆ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ 1,042 ಬೆಡ್ ವ್ಯವಸ್ಥೆ

ಹೀಗಾಗಿ ಕೊರೊನಾ ಸಂದರ್ಭದಲ್ಲೂ ಡೇಟಿಂಗ್ ಆಪ್ ಬಳಕೆದಾರರ ಸಂಖ್ಯೆ ಹೆಚ್ಚಾಗಿತ್ತು.ಮಾನಸಿಕ ತಜ್ಞರು ಹೇಳುವ ಪ್ರಕಾರ, ವಿಡಿಯೋ ಡೇಟಿಂಗ್ ಅಪ್ಲಿಕೇಷನ್‌ಗಳು ಒಳ್ಳೆಯದು ಒಬ್ಬರನ್ನೊಬ್ಬರು ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಒಂದೊಮ್ಮೆ ಐದಾರು ತಿಂಗಳು ಅವರು ದೂರ ಇರುವ ಸಂದರ್ಭ ಬಂದರೂ ಅವರು ಯಾವುದೇ ಮಾನಸಿಕ ಖಿನ್ನತೆಗೆ ಒಳಗಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೊರೊನಾಗೆ ತುತ್ತಾಗಿರುವರಿಗೆ ಕೂಡ ಪಾಸ್‌ಪೋರ್ಟ್ ಎನ್ನುವ ಹೊಸ ಫೀಚರ್ ಇದ್ದು ಅವರು ಅದರ ಮೂಲಕ ವಿಶ್ವದ ಯಾವುದೇ ಮೂಲೆಯಲ್ಲಿರುವವರ ಜೊತೆ ಮಾತನಾಡಬಹುದಾಗಿದೆ.

ಹಿಂಗ್ ಹಾಗೂ ಬಂಬಲ್ ಎನ್ನುವ ಎರಡು ಆನ್‌ಲೈನ್ ಡೇಟಿಂಗ್ ಅಪ್ಲಿಕೇಷನ್‌ಗಳು ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಜನರ ಖಿನ್ನತೆ ಹೋಗಲಾಡಿಸಲು ಸಾಕಷ್ಟು ಸಹಕಾರಿಯಾಗಿದೆ.

English summary
You Can Start Dating From Home Through Online Dating App, Instead of getting drinks at a bar, going for a walk in the park or meeting up for coffee, they've had to keep it to sending flirty texts and arranging virtual dates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X