ಚಿತ್ರಗಳು : ಪ್ಯಾರೀಸ್ ಐಫೆಲ್ ಟವರ್ ಮುಂದೆ ಯೋಗ ಪ್ರದರ್ಶನ

Posted By:
Subscribe to Oneindia Kannada

ಪ್ಯಾರೀಸ್, ಜೂನ್ 21 : ಎರಡನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪ್ಯಾರೀಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಜೂನ್ 19 ರಂದು ಐತಿಹಾಸಿಕ ಐಫೆಲ್ ಟವರ್ ಮುಂಭಾಗದಲ್ಲಿ 300 ಜನರು ಯೋಗ ಪ್ರದರ್ಶನ ನೀಡಿದರು.

ಯೋಗದ ಮಹತ್ವವನ್ನು ವಿಶ್ವಕ್ಕೆ ತಿಳಿಸಲು ಭಾರತೀಯ ರಾಯಭಾರ ಕಚೇರಿ ಜೂನ್ 18 ರಿಂದ 21ರ ತನಕ ಪ್ಯಾರೀಸ್‌ನಲ್ಲಿನ ವಿವಿಧ ಪ್ರದೇಶಗಳಲ್ಲಿ ಯೋಗ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗ ಮಾಡಲಿದ್ದಾರೆ. ['ಯೋಗ ಈಗ ಒಂದು ಅಂತರಾಷ್ಟ್ರೀಯ ಚಳವಳಿ']

ಐಫೆಲ್ ಟವರ್ ಮುಂಭಾಗದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲು 2000 ಜನರು ನೋಂದಣಿ ಮಾಡಿಕೊಂಡಿದ್ದರು. ಆದರೆ, ಭದ್ರತಾ ದೃಷ್ಟಿಯಿಂದಾಗಿ 300 ಜನರನ್ನು ಲಾಟರಿ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಯ್ಕೆ ಮಾಡಲಾಯಿತು. [ಯೋಗ ಬಲ್ಲವನಿಗೆ ರೋಗವಿಲ್ಲ : ಸಿದ್ದರಾಮಯ್ಯ]

ಪ್ಯಾರೀಸ್‌ನ ಶಿವಾನಂದ ಯೋಗ ಕೇಂದ್ರದ ಗುರುಗಳು ಯೋಗ ಹೇಳಿಕೊಡುವ ಮೂಲಕ ಈ ಕಾರ್ಯಕ್ರಮವನ್ನು ಆರಂಭಿಸಿದರು. ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ನೀಡಿದ ಭಾರತೀಯ ರಾಯಭಾರಿ ಡಾ.ಮೋಹನ್ ಕುಮಾರ್ ಅವರು, ಯೋಗದ ಮಹತ್ವ ಮತ್ತು ಆದರಿಂದ ಆಗುವ ಲಾಭಗಳ ಬಗ್ಗೆ ತಿಳಿಸಿಕೊಟ್ಟರು.

ಟವರ್ ಮುಂದೆ ಯೋಗ ಮಾಡಿದ 300 ಜನರು

ಟವರ್ ಮುಂದೆ ಯೋಗ ಮಾಡಿದ 300 ಜನರು

2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪ್ಯಾರೀಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಜೂನ್ 18 ರಿಂದ 21ರ ತನಕ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಜೂನ್ 19 ರಂದು ಐತಿಹಾಸಿಕ ಐಫೆಲ್ ಟವರ್ ಮುಂಭಾಗದಲ್ಲಿ 300 ಜನರು ಯೋಗ ಪ್ರದರ್ಶನ ನೀಡಿ ಗಮನ ಸೆಳೆದರು.

ಯೋಗ ಪ್ರದರ್ಶನಕ್ಕೆ ಭಾರೀ ಬೆಂಬಲ

ಯೋಗ ಪ್ರದರ್ಶನಕ್ಕೆ ಭಾರೀ ಬೆಂಬಲ

ಐತಿಹಾಸಿಕ ಐಫೆಲ್ ಟವರ್ ಮುಂಭಾಗದಲ್ಲಿ ಆಯೋಜಿಸಿದ್ದ ಯೋಗ ಪ್ರದರ್ಶನ ಕಾರ್ಯಕ್ರಮಕ್ಕೆ ಭಾರೀ ಜನ ಬೆಂಬಲ ವ್ಯಕ್ತವಾಯಿತು. 2 ಸಾವಿರಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಸಿದ್ದರು. ಆದರೆ, ಭದ್ರತಾ ದೃಷ್ಟಿಯಿಂದಾಗಿ 300 ಜನರನ್ನು ಮಾತ್ರ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.

ಸುಲಭ ಆಸನಗಳ ಪ್ರದರ್ಶನ

ಸುಲಭ ಆಸನಗಳ ಪ್ರದರ್ಶನ

ಪ್ಯಾರೀಸ್‌ನಲ್ಲಿರುವ ಶಿವಾನಂದ ಯೋಗ ಕೇಂದ್ರದ ಗುರುಗಳು ಐಫೆಲ್ ಟವರ್ ಮುಂಭಾಗದಲ್ಲಿದ್ದ ಎಲ್ಲರಿಗೂ ಯೋಗ ಹೇಳಿಕೊಟ್ಟರು. ಸುಲಭವಾದ ಆಸನ ಮತ್ತು ಮುದ್ರೆಗಳನ್ನು ಎಲ್ಲರೂ ಪ್ರದರ್ಶಿಸಿದರು.

ಯಾರು ಪಾಲ್ಗೊಂಡಿದ್ದರು?

ಯಾರು ಪಾಲ್ಗೊಂಡಿದ್ದರು?

ಭಾರತೀಯ ರಾಯಭಾರಿ ಡಾ.ಮೋಹನ್ ಕುಮಾರ್, ಉಪ ರಾಯಭಾರಿ ಮನೀಸ್ ಪ್ರಭಾತ್, ಸಾಂಸ್ಕೃತಿಕ ಕಾರ್ಯದರ್ಶಿ ಲಾವಣ್ಯ ಕುಮಾರ್ ಮುಂತಾದವರು ಐಫೆಲ್ ಟವರ್ ಮುಂದೆ ಯೋಗ ಪ್ರದರ್ಶನ ನೀಡಿದರು.

ಯೋಗ ಪ್ರದರ್ಶನ ನೀಡಿದ 2 ಸಾವಿರ ಜನರು

ಯೋಗ ಪ್ರದರ್ಶನ ನೀಡಿದ 2 ಸಾವಿರ ಜನರು

ಜೂನ್ 18ರಂದು ಪ್ಯಾರೀಸ್‌ನ ಲಾ ವಿಲ್ಲೆಟ್ಟೆ ಪಾರ್ಕ್‌ನಲ್ಲಿ ಯೋಗ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. 2 ಸಾವಿರಕ್ಕೂ ಅಧಿಕ ಜನರು ಇಲ್ಲಿ ಯೋಗಾಭ್ಯಾಸ ಮಾಡಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಯೋಗದಿಂದಾದ ಉಪಯೋಗಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಅವಕಾಶ ನೀಡಲಾಗಿತ್ತು.

ನದಿ ತಟದಲ್ಲಿ ಯೋಗಾಭ್ಯಾಸ

ನದಿ ತಟದಲ್ಲಿ ಯೋಗಾಭ್ಯಾಸ

ಜೂನ್ 21ರಂದು ರಾಯಭಾರ ಕಚೇರಿ ಸೀನ್ ನದಿ ತಟದಲ್ಲಿ ಯೋಗ ಪ್ರದರ್ಶನ ಕಾರ್ಯಕ್ರಮ ಆಯೋಜಿಸಿದೆ. ಫ್ರಾನ್ಸ್‌ನ ಇತರ ಭಾಗದಲ್ಲಿಯೂ ಯೋಗ ದಿನಾಚರಣೆ ಆಚರಿಸಲಾಗಿದೆ.

'ಯೋಗ ಪುರಾತನ ವಿಜ್ಞಾನ'

'ಯೋಗ ಪುರಾತನ ವಿಜ್ಞಾನ'

ಐಫೆಲ್ ಟವರ್ ಮುಂಭಾಗದಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ನ್ಯೂಸ್ ನೆಟ್‌ವರ್ಕ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಸತೀಶ್ ರೆಡ್ಡಿ ಅವರು, 'ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಯೋಗ ಪುರಾತನ ವಿಜ್ಞಾನವಾಗಿದ್ದು, ದೇಹದ ಆರೋಗ್ಯಕ್ಕೆ, ಮನಸ್ಸಿನ ಶಾಂತಿಗೆ ಇದು ಸಹಕಾರಿ' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Embassy of India, Paris is organizing a series of events on Yoga on the occasion of the Second International Day of Yoga. As a part of these celebrations, a Yoga event was organized at the iconic Eiffel Tower on 19 June 2016.
Please Wait while comments are loading...