76 ದಿನಗಳ ಬಳಿಕ ಚೀನಾದ ವುಹಾನ್‌ನಲ್ಲಿ ಲಾಕ್‌ಡೌನ್ ತೆರವು
ವುಹಾನ್, ಏಪ್ರಿಲ್ 8: ಕೊರೊನಾ ವೈರಸ್ ಹುಟ್ಟಿಗೆ ಕಾರಣವಾದ ವುಹಾನ್ ನಗರದಲ್ಲಿ ಅಂತಿಮವಾಗಿ ಲಾಕ್‌ಡೌನ್ ತೆರವುಗೊಂಡಿದೆ. ಸುಮಾರು 76 ದಿನಗಳ ಬಳಿಕ ಚೀನಾದ ಅತ್ಯಂತ ಸೂಕ್ಷ್ಮ ಪ್ರದೇಶ ಮೊದಲಿನಂತೆ ಕಾರ್ಯ ಆರಂಭಿಸಿದೆ.
Recommended Video
ಬುಧವಾರ ಬೆಳಿಗ್ಗೆ ವುಹಾನ್ ನಗರದಲ್ಲಿ ಮೊದಲ ರೈಲು ಪ್ರಯಾಣ ಮಾಡಿದೆ ಎಂದು ತಿಳಿದು ಬಂದಿದೆ. ಇನ್ನು ಕೊರೊನಾ ವೈರಸ್‌ನಿಂದ ತಪ್ಪಿಸಿಕೊಳ್ಳಲು ಸುಮಾರು ಎರಡೂವರೆ ತಿಂಗಳು ಕಾಲ ಮನೆಯೊಳಗೆ ಬಂಧಿಗಳಾಗಿದ್ದ ಜನರು ಹೊರಗೆ ಬಂದಿದ್ದಾರೆ.
ಈ ಮೂಲಕ ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಪ್ರಮುಖ ಅಸ್ತ್ರ ಎಂಬುದನ್ನು ಜಗತ್ತಿಗೆ ಚೀನಾದ ವುಹಾನ್ ನಗರ ತೋರಿಸಿದೆ. ಡಿಸೆಂಬರ್ ತಿಂಗಳಲ್ಲಿ ಕೊರೊನಾ ವೈರಸ್ ಮೊಟ್ಟ ಮೊದಲ ಬಾರಿಗೆ ವುಹಾನ್ ನಗರದಲ್ಲಿ ಪತ್ತೆಯಾಗಿತ್ತು. ಪ್ರಾಣಿಗಳ ಮಾರುಕಟ್ಟೆಯಿಂದ ಈ ವೈರಸ್ ಸೃಷ್ಠಿಯಾಗಿದೆ ಎಂದು ವೈದ್ಯರು, ತಜ್ಞರು ಸಂಶೋಧನಗಳ ಬಳಿಕ ಹೇಳಿದ್ದಾರೆ.

ಒಬ್ಬ ಮನುಷ್ಯನಿಂದ ಮತ್ತೊಬ್ಬ ಮನುಷ್ಯನಿಗೆ ಹರಡುತ್ತಿದೆ ಎಂದು ತಿಳಿದ ಚೀನಾ, ಕೊರೊನಾ ವಿರುದ್ಧ ಹೋರಾಡಲು ಜನವರಿಯಲ್ಲಿ ಲಾಕ್‌ಡೌನ್ ಘೋಷಣೆ ಮಾಡಿತ್ತು. ವಿಶೇಷವಾಗಿ ವುಹಾನ್ ನಗರವನ್ನು ಸಂಪೂರ್ಣವಾಗಿ ಬಂದ್ ಮಾಡಿತ್ತು. ಯಾರೊಬ್ಬರು ಮನೆಯಿಂದ ಹೊರಗೆ ಬರದಂತೆ ಕಣ್ಗಾವಲಿನಲ್ಲಿ ಇಡಲಾಗಿತ್ತು.
ಸದ್ಯ, ಚೀನಾದಲ್ಲಿ ಕೊರೊನಾ ವೈರಸ್ ನಿಯಂತ್ರಣದಲ್ಲಿದೆ ಎಂದು ಹೇಳಲಾಗುತ್ತಿದೆ. ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಇಳಿಮುಖವಾಗಿದೆ. ಹಾಗಾಗಿ, ಮಾರ್ಚ್ 25ರ ನಂತರ ಚೀನಾದಲ್ಲಿ ಲಾಕ್‌ಡೌನ್ ತೆರವುಗೊಳಿಸಲಾಗಿದೆ. ಆದರೆ ವುಹಾನ್ ನಗರದಲ್ಲಿ ಲಾಕ್‌ಡೌನ್ ಮುಂದುವರಿದಿತ್ತು. ಇದೀಗ, ಇಲ್ಲಿಯೂ ಲಾಕ್‌ಡೌನ್ ಮುಕ್ತವಾಗಿದೆ.












Click it and Unblock the Notifications