ಮಹಾಯುದ್ಧ ಕಾಲದ ಬಾಂಬ್ ಪತ್ತೆ: ಜರ್ಮನಿ ನಗರದ 13,000 ಜನರ ಸ್ಥಳಾಂತರ- ಸ್ಫೋಟಗೊಳ್ಳದ ಬಾಂಬ್‌ನ ವಿಲೇವಾರಿಯೇ ಕಷ್ಟ
ಬರ್ಲಿನ್, ಆಗಸ್ಟ್ 08: ಜರ್ಮನಿಯ ಡಸೆಲ್ಡಾರ್ಫ್‌ನಲ್ಲಿನ ಅಧಿಕಾರಿಗಳು ಮಹಾಯುದ್ಧ-2 ಕಾಲದ ಬಾಂಬ್‌ವೊಂದನ್ನು ಪತ್ತೆ ಮಾಡಿದ್ದಾರೆ. ಸ್ಪೋಟಗೊಳ್ಳದ ಬಾಂಬ್ ಪತ್ತೆಯಾದ ನಂತರ 13,000 ನಿವಾಸಿಗಳನ್ನು ತಾತ್ಕಾಲಿಕವಾಗಿ ತಮ್ಮ ಮನೆಗಳನ್ನು ತೊರೆಯುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಬಾಂಬ್ ಅನ್ನು ವಿಲೇವಾರಿ ಮಾಡುವುದೇ ಅಧಿಕಾರಿಗಳಿಗೆ ಕಷ್ಟದ ಕೆಲಸವಾಗಿದೆ ಎಂದು ವರದಿಯಾಗಿದೆ.
ಸ್ಫೋಟಗೊಳ್ಳದ ಬಾಂಬ್ ಅನ್ನು ವಿಲೇವಾರಿ ಮಾಡಲು ಪೊಲೀಸ್ ಮತ್ತು ಬಾಂಬ್ ಸ್ಕ್ವಾಡ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಜರ್ಮನ್ ಸುದ್ದಿವಾಹಿನಿ ಡ್ಯೂಷ್ ವೆಲ್ಲೆ (ಡಿಡಬ್ಲ್ಯೂ) ಹೇಳಿದೆ.

ಒಂದು ಟನ್ ತೂಕದ ಶೆಲ್ ಅನ್ನು ಆಗಸ್ಟ್ 7 ರಂದು ಪತ್ತೆ ಹಚ್ಚಲಾಗಿದೆ. ನಗರದ ಮೃಗಾಲಯದ ಬಳಿ ಕೆಲಸದ ಸಮಯದಲ್ಲಿ ಇದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಸುದ್ದಿವಾಹಿನಿಗೆ ಹೇಳಿದ್ದಾರೆ. ಎರಡು ಮಹಾಯುದ್ಧಗಳ ಸಮಯದಲ್ಲಿ ಉಳಿದಿರುವ ಸಾವಿರಾರು ಬಾಂಬ್‌ಗಳನ್ನು ಹೂಳಲಾಗಿದೆ. ಅವುಗಳು ಈಗಲೂ ಪತ್ತೆಯಾಗುತ್ತಲೇ ಇವೆ ಎಂದು ವರದಿಗಳು ಹೇಳಿವೆ.
ಜರ್ಮನಿಯ ಡಸೆಲ್ಡಾರ್ಫ್‌ನಲ್ಲಿ ಸಿಕ್ಕಿರುವ ಬಾಂಬ್ ಸ್ಥಳದ 500-ಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ನಿವಾಸಿಗಳಿಗೆ ಪ್ರದೇಶವನ್ನು ತೊರೆಯುವಂತೆ ಆದೇಶಿಸಲಾಗಿದೆ. ವಿಲೇವಾರಿ ಕಾರ್ಯಾಚರಣೆಯ ಸಮಯದಲ್ಲಿ ತೆರವು ವಲಯದೊಳಗಿನ ರಸ್ತೆಗಳನ್ನು ಸಹ ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಕೆಲವು ನಿವಾಸಿಗಳು ತಮ್ಮ ಮನೆಯಿಂದ ಹೊರಬರುವಾಗ ತಮ್ಮ ಸಾಕುಪ್ರಾಣಿಗಳನ್ನು ತಮ್ಮೊಂದಿಗೆ ಹೊತ್ತೊಯ್ದಿರುವುದು ಕಂಡುಬಂದಿದೆ.

ಕಾರ್ಯಾಚರಣೆಯನ್ನು ಯಾವಾಗ ಪೂರ್ಣಗೊಳಿಸಲಾಗುತ್ತದೆ ಹಾಗೂ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
2017 ರಲ್ಲಿ, ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ 1.4 ಟನ್ ಬಾಂಬ್ ಪತ್ತೆಯಾದಾಗ 65,000 ಜನರನ್ನು ಸ್ಥಳಾಂತರಿಸಲಾಗಿತ್ತು.
ಡಿಸೆಂಬರ್ 2021 ರಲ್ಲಿ, ಮ್ಯೂನಿಚ್ ನಿಲ್ದಾಣದ ಬಳಿಯ ನಿರ್ಮಾಣ ಸ್ಥಳದಲ್ಲಿ ಎರಡನೇ ಮಹಾಯುದ್ಧದ ಬಾಂಬ್ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ನಾಲ್ಕು ಜನರು ಗಾಯಗೊಂಡಿದ್ದರು. ಇದು ರೈಲು ಸಂಚಾರವನ್ನು ಅಡ್ಡಿಪಡಿಸಿತ್ತು.

ಸ್ಮಿತ್ಸೋನಿಯನ್ ಮ್ಯಾಗಜೀನ್ ಪ್ರಕಾರ, ಯುಎಸ್ ( ಅಮೆರಿಕ ) ಮತ್ತು ಬ್ರಿಟಿಷ್ ( ಇಂಗ್ಲೆಂಡ್ ) ವಾಯುಪಡೆಗಳು 1940 ಮತ್ತು 1945 ರ ನಡುವೆ 2.7 ಮಿಲಿಯನ್ ಟನ್ ಬಾಂಬುಗಳನ್ನು ಯುರೋಪ್ ಮೇಲೆ ಹಾಕಿವೆ. ಅದರ ಅರ್ಧದಷ್ಟು ಜರ್ಮನಿಯ ಮೇಲೆ ಹಾಕಲಾಗಿದೆ.
ಮೇ 1945 ರಲ್ಲಿ ನಾಜಿ ಸರ್ಕಾರವು ಶರಣಾಗುವ ಹೊತ್ತಿಗೆ, ದೇಶದ ಕೈಗಾರಿಕಾ ಮೂಲಸೌಕರ್ಯವು ದುರ್ಬಲಗೊಂಡಿತು. ಹಲವಾರು ನಗರಗಳು ಸ್ಮಶಾನಗಳಾಗಿ ಮಾರ್ಪಟ್ಟವು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications