• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೆ ವ್ಯಾಪಾರಕ್ಕೆ ತೆರೆದುಕೊಂಡ ವಿಶ್ವ ವಾಣಿಜ್ಯ ಕೇಂದ್ರ

|

ವಾಷಿಂಗ್ಟನ್, ನ. 4: ಉಗ್ರರ ದಾಳಿಯಾಗಿ ಸಿಕ್ಕು ನೆಲಸಮವಾಗಿದ್ದ ವಿಶ್ವ ವಾಣಿಜ್ಯ ಕೆಂದ್ರದ ಜಾಗದಲ್ಲಿ ಮತ್ತೆ ಅಷ್ಟೇ ಸುಂದರವಾದ ಕಟ್ಟಡ ತಲೆ ಎತ್ತಿದೆ. 13 ವರ್ಷದ ನಂತರ ಅಮೇರಿಕದ ವಿಶ್ವ ವಾಣಿಜ್ಯ ಕೇಂದ್ರ ಹೊಸ ಹೆಸರಿನಲ್ಲಿ ಮತ್ತೆ ವ್ಯಾಪಾರಕ್ಕೆ ತೆರೆದುಕೊಂಡಿದೆ.

ಸಪ್ಟೆಂಬರ್ 11, 2001 ರಂದು ಉಗ್ರರು ಕಟ್ಟಡಕ್ಕೆ ವಿಮಾನ ಡಿಕ್ಕಿ ಹೊಡೆಸಿದ್ದರು. ಪರಿಣಾಮ 2,700 ಜನ ಪ್ರಾಣ ತೆತ್ತಿದ್ದರು. ಒಸಾಮಾ ಬಿನ್ ಲಾಡೆನ್ ಕೃತ್ಯಕ್ಕೆ 16 ಎಕರೆ ಪ್ರದೇಶದಲ್ಲಿದ್ದ ಕಟ್ಟಡ ಕುಸಿದು ಬಿದ್ದಿತ್ತು. ಅಮಾಯಕರು ಪ್ರಾಣ ನೀಡಿದ್ದು, ನಂತರ ಅಮೆರಿಕ ಲಾಡೆನ್ ಬೇಟೆಯಾಡಿದ್ದು ಇತಿಹಾಸದ ಪುಟ ಸೇರಿದೆ.[ಭಯೋತ್ಪಾದಕರ ದಾಳಿ: ಎರಡು ಕಟ್ಟಡ ನೆಲಸಮ]

ಕಟ್ಟಡವನ್ನು ನವೀಕರಣ ಮಾಡಿ ಮತ್ತೆ ವ್ಯಾಪಾರಕ್ಕೆ ಸಿದ್ಧಮಾಡಿರುವುದು ಅಮೆರಿಕ ಇತಿಹಾಸದಲ್ಲೇ ಒಂದು ಮೈಲಿಗಲ್ಲು. ಸುಮಾರು 3,000 ಜನ ಮತ್ತೆ ವಿವಿಧ ಕೆಲಸಗಳಲ್ಲಿ ಭಾಗಿಯಾಗಲಿದ್ದಾರೆ. ವಿಶ್ವದ ಅತಿ ಎತ್ತರದ ಕಟ್ಟಡಗಳಲ್ಲಿ ಈ 'ಕಾಂಡೆ ನೆಸ್ಟ್' ಸಹ ಒಂದಾಗಲಿದೆ ಎಂದು ನ್ಯೂ ಯಾರ್ಕ್ ಪೋರ್ಟ್ ಅಥಾರಟಿಯ ನಿರ್ದೇಶಕ ಪೆಟ್ರಿಕ್ ಫೋಯ್ ಹೇಳಿದ್ದಾರೆ.

ಈ ಹೊಸ ವಾಣಿಜ್ಯ ಕಟ್ಟಡಕ್ಕೆ ಒಂದೆ ಶಬ್ದದ ಉತ್ತರ ಹೇಳಲು ಸಾಧ್ಯವಿಲ್ಲ. ಹೊಸ ರೀತಿಯ ಡಿಸೈನ್, ಐಷಾರಾಮಿ ವಸ್ತುಗಳು, ದಿನದ 24 ಗಂಟೆಯೂ ತೆರೆದಿರುವ ಸೇವೆ ಇದರ ವೈಶಿಷ್ಟ್ಯ ಎಂದು ವಿವರಿಸಿದರು.[ಒಂಬತ್ತು ಹನ್ನೊಂದರ ಒಂದು ಸ್ಮರಣೆ]

ಇದು ಅಮೆರಿಕದಲ್ಲೆ ಅತ್ಯುಚ್ಚ ರಕ್ಷಣಾ ವ್ಯವಸ್ಥೆ ಹೊಂದಿರುವ ಕಟ್ಟಡವಾಗಿದೆ. ಈಗಾಗಲೇ ಶೇ. 60 ಭಾಗವನ್ನು ಲೀಸ್ ಗೆ ನೀಡಲಾಗಿದೆ. ಗ್ರಾಹಕರ ಸಮಸ್ಯೆ ಅರಿಯಲು ಒಂದು ಕೇಂದ್ರವನ್ನು ಸ್ಥಾಪಿಸಲಾಗುವುದು. 1,776 ಅಡಿ ಎತ್ತರದ ಕಟ್ಟಡ ನಿಮರ್ಮಾಣ ಮಾಡಲು ಸುಮಾರು ಎಂಟು ವರ್ಷಗಳೇ ಹಿಡಿದಿವೆ. ರಾಜಕೀಯ , ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಮೆಟ್ಟಿ ಕಟ್ಟಡ ತಲೆ ಎತ್ತಿ ನಿಂತಿದೆ ಎಂದು ಅವರು ತಿಳಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Thirteen years after the 9/11 terrorist attack, World Trade Center is opening for business again. It's the centerpiece of the 16-acre site where the decimated twin towers once stood and where more than 2,700 people died on Sept. 11, 2001, buried under smoking mounds of fiery debris.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more