ನಿದ್ರಾಹೀನತೆಯಲ್ಲಿ ಭಾರತೀಯರು ಮುಂದೆ: ಸಮೀಕ್ಷೆ

Posted By:
Subscribe to Oneindia Kannada

ವಿಶ್ವ ನಿದ್ರಾ ದಿನದ ಅಂಗವಾಗಿ ಸಮೀಕ್ಷೆಯೊಂದು ಹೊರ ಬಂದಿದ್ದು, ನಿದ್ರಾಹೀನತೆಯಿಂದ ಬಳಲುವವರ ಪೈಕಿ ಭಾರತೀಯರು ಇತರರಿಗಿಂತ ಮುಂದಿದ್ದಾರೆ ಎಂದು ತಿಳಿದು ಬಂದಿದೆ. ನಿದ್ರೆ ಮಾಡುವುದರಲ್ಲೂ ಕಂಜೂಸ್ ತನ ತೋರುವ ಭಾರತೀಯರು ರಾತ್ರಿಯಿಂದ ಬೆಳಗ್ಗೆ ಲೆಕ್ಕದಂತೆ ಸರಾಸರಿ 6.55 ಗಂಟೆ ನಿದ್ದೆಗೆ ಜಾರುತ್ತಿದ್ದಾರೆ.

2016ರ ಜನವರಿಯಿಂದ ಡಿಸೆಂಬರ್ ತನಕ ಕಲೆ ಹಾಕಲಾದ ಮಾಹಿತಿ, ಅಂಕಿ ಅಂಶದ ಆಧಾರದ ಮೇಲೆ ಅಮೆರಿಕ ಹಾಗೂ ಯುರೋಪ್ ಗೆ ಹೋಲಿಸಿದರೆ ಏಷ್ಯದವರು ಕಡಿಮೆ ಸರಾಸರಿ ನಿದ್ದೆ ಮಾಡುತ್ತಿದ್ದಾರಂತೆ.

World Sleep Day : Indians most sleep deprived

ಕುಂಭಕರ್ಣನ ವಂಶಸ್ಥರು: ಸಮೀಕ್ಷೆ ನಡೆಸಲಾದ 18ಕ್ಕೂ ಅಧಿಕ ಪ್ರಮುಖ ದೇಶಗಳ ಪೈಕಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಯುಕೆ ಹೆಚ್ಚು ಸಮಯ ನಿದ್ದೆಯಲ್ಲಿ ಕಳೆಯುತ್ತಿದ್ದಾರೆ.

ಕೆನಡಾ, ಜರ್ಮನಿ, ಫ್ರಾನ್ಸ್, ನ್ಯೂಜಿಲೆಂಡ್ ಹಾಗೂ ಯುನೈಟೆಡ್ ಕಿಂಗ್ಡಮ್ ಗಳಲ್ಲಿ ಕನಿಷ್ಠ 7 ಗಂಟೆ ನಿದ್ದೆ ಮಾಡುತ್ತಾರೆ. ಭಾರತ, ಜಪಾನ್, ತೈವಾನ್, ಹಾಂಕಾಂಗ್ ನಲ್ಲಿ 6 ಕ್ಕಿಂತ ಹೆಚ್ಚು ಅವಧಿ ನಿದ್ದೆ ಮಾಡುವುದಿಲ್ಲ. ಭಾರತೀಯರು ಸರಾಸರಿ 6 ಗಂಟೆ 55 ನಿಮಿಷ ನಿದ್ರಿಸುತ್ತಾರೆ ಎಂದು ಸಮೀಕ್ಷೆ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On the eve of World Sleep Day, a study has revealed that Indians are some of the poorest sleepers in the world, clocking in an average of 6.55 hours a night.
Please Wait while comments are loading...