ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಶಕ್ತಿಶಾಲಿ ಪಾಸ್‌ಪೋರ್ಟ್‌ ಪಟ್ಟಿ 2023 ಬಿಡುಗಡೆ: ಜಪಾನ್‌ಗೆ 1ನೇ ಸ್ಥಾನ, ಭಾರತದ ಸ್ಥಾನ ತಿಳಿಯಿರಿ

|
Google Oneindia Kannada News

ಬೆಂಗಳೂರು, ಜನವರಿ 11: ವೀಸಾ ಇಲ್ಲದೇ ಭಾರತ ಮತ್ತು ಜಪಾನಿನಲ್ಲಿ ಭೇಟಿ ನೀಡಬಹುದಾದ ಸ್ಥಳಗಳ ಬಗ್ಗೆ ಮಾಹಿತಿ ಒಳಗೊಂಡ 2023ರ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ಬಿಡುಗಡೆ ಆಗಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ 2023ರ ಪ್ರಕಾರ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ವೀಸಾ ಇಲ್ಲದೇ ನಮ್ಮ ದೇಶದ 59 ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಅದೇ ರೀತಿ ಜಪಾನಿನ ಪಾಸ್‌ಪೋರ್ಟ್ ಹೊಂದಿರುವ ವ್ಯಕ್ತಿಗಳು ಅಲ್ಲಿನ 227 ಸ್ಥಳಗಳ ಪೈಕಿ 193 ಸ್ಥಳಗಳಿಗೆ ವೀಸಾ ಇಲ್ಲದೇ (ಮುಕ್ತ) ಭೇಟಿ ನೀಡಬಹುದಾಗಿದೆ.

ಜಪಾನಿನ ಪಾಸ್‌ಪೋರ್ಟ್ ಸತತ ಐದನೇ ವರ್ಷಕ್ಕೆ ವಿಶ್ವದ ಎಲ್ಲಾ ಪಾಸ್‌ಪೋರ್ಟ್‌ಗಳಲ್ಲಿ ಅತ್ಯಂತ ಶಕ್ತಿಶಾಲಿ ಎನ್ನಲಾಗಿದೆ. ಏಕೆಂದರೆ ಈ ಪಾಸ್‌ಪೋರ್ಟ್ ಹೊಂದಿರುವವರು ಆ ದೇಶಗಳಲ್ಲಿನ ಒಟ್ಟು ಸ್ಥಳಗಳ ಪೈಕಿ 193 ಕಡೆಗೆ ವೀಸಾ-ಮುಕ್ತ ಪ್ರವೇಶಕ್ಕೆ ಅನುಮತಿ ನೀಡಿದೆ. ಇಷ್ಟು ಸ್ಥಳಗಳಿಗೆ ವೀಸಾ ಇಲ್ಲದೇ ತೆರಳಲು ಅವಕಾಶ ನೀಡಿರುವ ಪೈಕಿ ಜಪಾನ್ ಅಗ್ರಸ್ಥಾನದಲ್ಲಿದೆ. ಭಾರತವು ಕಳೆದ ಎರಡು ವರ್ಷದಲ್ಲಿ ಪಾಸ್‌ಪೋರ್ಟ್ ವಿಚಾರದಲ್ಲಿ ಸುಧಾರಣೆ ತಂದಿದೆ. ಪ್ರಸ್ತುತ ಸೂಚ್ಯಂಕದಲ್ಲಿ ಭಾರತ 85 ನೇ ಸ್ಥಾನದಲ್ಲಿದೆ.

Worlds Most Powerful Passports 2023 List : Japan Tops the List, Check Indias Rank

ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು 59 ದೇಶಗಳಿಗೆ ವೀಸಾ-ಮುಕ್ತವಾಗಿ ಪ್ರಯಾಣಿಸಬಹುದು. ಮೌರಿಟಾನಿಯನ್ ಮತ್ತು ಉಜ್ಬೇಕಿಸ್ತಾನ್ ಪಾಸ್‌ಪೋರ್ಟ್‌ಗಳು ಭಾರತದಂತೆಯೇ ಶಕ್ತಿಯುತವಾಗಿವೆ ಎಂದು ಹೆನ್ಲಿ ಸೂಚ್ಯಂಕದ ವರದಿ ಮಾಹಿತಿ ನೀಡಿದೆ.

ಹೆನ್ಲಿ ಸೂಚ್ಯಂಕ: ಅಗ್ರ 10 ಸ್ಥಾನ ದೇಶಗಳ ಪಟ್ಟಿ-ಸ್ಥಳ ಮಾಹಿತಿ

1. ಜಪಾನ್ - 193 ಸ್ಥಳಗಳು

2. ಸಿಂಗಾಪುರ ಮತ್ತು ದಕ್ಷಿಣ ಕೊರಿಯಾ - 192

3. ಜರ್ಮನಿ ಮತ್ತು ಸ್ಪೇನ್- 190

4. ಫಿನ್‌ಲ್ಯಾಂಡ್, ಇಟಲಿ ಹಾಗೂ ಲಕ್ಸೆಂಬರ್ಗ್- 189

5. ಆಸ್ಟ್ರಿಯಾ, ಡೆನ್ಮಾರ್ಕ್, ನೆದರ್ಲ್ಯಾಂಡ್ಸ್ ಮತ್ತು ಸ್ವೀಡನ್- 188

6. ಫ್ರಾನ್ಸ್, ಐರ್ಲೆಂಡ್, ಪೋರ್ಚುಗಲ್ ಹಾಗೂ ಯುನೈಟೆಡ್ ಕಿಂಗ್‌ಡಮ್ -187

7. ಬೆಲ್ಜಿಯಂ, ಜೆಕ್ ರಿಪಬ್ಲಿಕ್, ನ್ಯೂಜಿಲ್ಯಾಂಡ್, ನಾರ್ವೆ, ಸ್ವಿಟ್ಜರ್‌ಲ್ಯಾಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ -186

Worlds Most Powerful Passports 2023 List : Japan Tops the List, Check Indias Rank

8. ಆಸ್ಟ್ರೇಲಿಯಾ, ಕೆನಡಾ, ಗ್ರೀಸ್ ಮತ್ತು ಮಾಲ್ಟಾ - 185

9. ಹಂಗೇರಿ ಮತ್ತು ಪೋಲೆಂಡ್ - 184

10. ಲಿಥುವೇನಿಯಾ ಮತ್ತು ಸ್ಲೋವಾಕಿಯಾ -183

85 ನೇ ಸ್ಥಾನದಲ್ಲಿ ಭಾರತ, ಮೌರಿಟಾನಿಯಾ, ಉಜ್ಬೇಕಿಸ್ತಾನ್- 59 ಇವೆ.

ಹೆನ್ಲಿ ಸೂಚ್ಯಂಕ: ಕಡೆಯ 10 ಸ್ಥಾನ ಪಡೆದ ದೇಶಗಳ ಪಟ್ಟಿ- ಸ್ಥಳ

109. ಅಫ್ಘಾನಿಸ್ತಾನ- 27

108. ಇರಾಕ್ - 29

107. ಸಿರಿಯಾ - 30

106. ಪಾಕಿಸ್ತಾನ - 32

105. ಯೆಮೆನ್ - 34

104. ಸೊಮಾಲಿಯಾ - 35

103. ನೇಪಾಳ, ಪ್ಯಾಲೇಸ್ಟಿನಿಯನ್ ಪ್ರದೇಶ - 38

102. ಉತ್ತರ ಕೊರಿಯಾ - 40

101. ಬಾಂಗ್ಲಾದೇಶ, ಕೊಸೊವೊ ಮತ್ತು ಲಿಬಿಯಾ - 41

100. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಲೆಬನಾನ್, ಶ್ರೀಲಂಕಾ ಮತ್ತು ಸುಡಾನ್ - 42

ಈ ಸೂಚ್ಯಂಕವನ್ನು ಸುಮಾರು 20 ವರ್ಷದ ಹಿಂದೆ ಡಾ.ಕ್ರಿಶ್ಚಿಯನ್ ಎಚ್ ಕೈಲಿನ್ ಎಂಬುವವರು ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ಕಂಡು ಹಿಡಿದರು. ಈ ಸೂಚ್ಯಂಕವು ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (IATA)ನ ವಿಶೇಷ ಮತ್ತು ಅಧಿಕೃತ ಮಾಹಿತಿಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ವೀಸಾ ಇಲ್ಲದೆಯೇ ದೇಶಗಳಿಗೆ ಹೋಗಬಹುದಾದ ಮಾಹಿತಿ ಆಧರಿಸಿದ ಶ್ರೇಣಿಗಳನ್ನು ಕೊಡಲಾಗಿದೆ.

English summary
World's most powerful passports 2023 List release. Japan Tops the List, Check India's Rank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X