ಈ ಪುಟಾಣಿ ಗ್ಲೋರಿಯಸ್ ಚಾಕಲೇಟ್ ಬೆಲೆ ಎಷ್ಟು ಗೊತ್ತಾ?

ಒಬಿಡೋಸ್ (ಪೋರ್ಚುಗಲ್), ಮಾರ್ಚ್ 24 : ಚಾಕಲೇಟ್ ಹೆಸರು ಕೇಳಿದರೇನೇ ಅಬಾಲವೃದ್ಧರೆಲ್ಲರ ಬಾಯಲ್ಲಿ ನೀರೂರಲು ಪ್ರಾರಂಭಿಸುತ್ತದೆ. ಅದರಲ್ಲೂ, ವಿದೇಶದಿಂದ ತಂದಿರುವ, ಸ್ವಲ್ಪ ದುಬಾರಿ ಚಾಕಲೇಟುಗಳನ್ನು ತಿನ್ನುವುದೆಂದರೆ ಅದೇನೋ ಪ್ರೀತಿ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಚಾಕಲೇಟು ಎಷ್ಟೇ ದುಬಾರಿಯಾಗಿರಲಿ ತಿನ್ನಲೇಬೇಕೆನ್ನಿಸಿದರೆ ಇಲ್ಲೊಂದು 'ಗ್ಲೋರಿಯಸ್' ಎಂಬ ಚಾಕಲೇಟು ತಯಾರಾಗಿದೆ. ಒಂದು ಕೈ ನೋಡೇಬಿಡೋಣ ಎಂದು ಅಂದುಕೊಂಡವರು ವಿಮಾನ ಹತ್ತಿ ಪೋರ್ಚುಗಲ್ಲಿಗೆ ಬರಬೇಕು.

ಜಗತ್ತಿನ ಅತ್ಯಂತ ದುಬಾರಿಯಾದ ಚಾಕಲೇಟನ್ನು ಇಲ್ಲಿ ನಡೆಸಲಾಗುತ್ತಿರುವ ಚಾಕಲೇಟ್ ಉತ್ಸವದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಅದರ ಬೆಲೆ ಜಾಸ್ತಿಯೇನಿಲ್ಲ, ಕೇವಲ 7,728 ಯೂರೋಸ್, ಅಂದ್ರೆ ಅಂದಾಜು 6 ಲಕ್ಷ ರುಪಾಯಿಗಳು ಅಷ್ಟೇ.

Worlds costliest chocolate unveiled in Portugal

23 ಕ್ಯಾರಟ್ ಚಿನ್ನದ ಲೇಪವಿರುವ ಈ ಚಾಕಲೇಟು ಜಗತ್ತಿನ ಅತ್ಯಂತ ದುಬಾರಿ ಚಾಕಲೇಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಸರಿ ಎಸಳು, ವೈಟ್ ಟ್ರಫಲ್, ಮಡಗಾಸ್ಕರ್‌ನ ವೆನಿಲ್ಲಾ ಮತ್ತು ಚಿನ್ನದ ಫ್ಲೇಕ್ ಗಳನ್ನು ಈ ಚಾಕಲೇಟು ಹೊಂದಿದೆಯಂತೆ.

ಇದನ್ನು ತಯಾರಿಸಿರುವ ಡೇನಿಯೆಲ್ ಗೋಮ್ಸ್ ಎಂಬಾತ ಕಳೆದ ಒಂದು ವರ್ಷದಿಂದಲೇ ಈ ಚಾಕಲೇಟಿನ ತಯಾರಿಯಲ್ಲಿದ್ದರಂತೆ. ನೋಡಲು ಮಾತ್ರ ಅತ್ಯಂತ ಸುಂದರ ಮತ್ತು ಅತ್ಯಂತ ಮುದ್ದಾಗಿದೆ ಈ ಬಾನ್‌ಬಾನ್ ಚಾಕಲೇಟು. ನೋಡಲು ಇಷ್ಟೇ ಕಂಡರೂ ಒಮ್ಮೆಲೇ ಗುಳುಂ ಅನ್ನಿಸುವ ಹಾಗೂ ಇಲ್ಲ. ಇಷ್ಟಿಷ್ಟೇ ಇಷ್ಟಿಷ್ಟೇ ಸವಿಯಬೇಕು, 6 ಲಕ್ಷ ರುಪಾಯಿ ಕೊಟ್ಟಿರ್ತೀರಲ್ಲ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+