ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರೋಬ್ಬರಿ 30 ವರ್ಷಗಳ ಬಳಿಕ ಉಗುರು ತೆಗೆದ ಮಹಿಳೆ

|
Google Oneindia Kannada News

ಟೆಕ್ಸಾಸ್, ಏಪ್ರಿಲ್ 8: ತಮ್ಮ ಉದ್ದುದ್ದದ ಉಗುರುಗಳಿಂದಲೇ ದಾಖಲೆ ಬರೆದು ವಿಶ್ವದೆಲ್ಲೆಡೆ ಹೆಸರುವಾಸಿಯಾಗಿರುವ ಟೆಕ್ಸಾಸ್‌ನ ಮಹಿಳೆ ಅಯನ್ನಾ ವಿಲಿಯಮ್ಸ್‌ ಬರೋಬ್ಬರಿ ಮೂವತ್ತು ವರ್ಷಗಳ ನಂತರ ಕೊನೆಗೂ ತಮ್ಮ ಉಗುರುಗಳನ್ನು ತೆಗೆದಿದ್ದಾರೆ.

ಎರಡು ಕೈಗಳ ಬೆರಳುಗಳಲ್ಲಿಯೂ ಅತಿ ಉದ್ದದ ಉಗುರುಗಳನ್ನು ಹೊಂದಿರುವ ಮಹಿಳೆ ಎಂದು ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದ ಅವರು ಇದೇ ಮೊದಲ ಬಾರಿ, ಇಷ್ಟು ವರ್ಷಗಳ ನಂತರ ಉಗುರು ತೆಗೆದಿದ್ದಾರೆ.

58 ನಿಮಿಷದಲ್ಲಿ 46 ಭಕ್ಷ್ಯಗಳ ತಯಾರಿ; ಚೆನ್ನೈ ಹುಡುಗಿಯ ಚಮತ್ಕಾರ58 ನಿಮಿಷದಲ್ಲಿ 46 ಭಕ್ಷ್ಯಗಳ ತಯಾರಿ; ಚೆನ್ನೈ ಹುಡುಗಿಯ ಚಮತ್ಕಾರ

ಚಿಕ್ಕ ವಯಸ್ಸಿನಿಂದಲೂ ಉಗುರು ಬೆಳೆಸುವುದನ್ನು ಇಷ್ಟಪಡುತ್ತಿದ್ದ ಅಯನ್ನಾ, ನೇಲ್ ಆರ್ಟ್‌ ಬಗೆಗೂ ಆಸಕ್ತಿ ಹೊಂದಿದ್ದರು. ಇದರಲ್ಲೇ ಏಕೆ ವಿಶ್ವ ದಾಖಲೆ ಬರೆಯಬಾರದು ಎಂದು ಆಲೋಚಿಸಿದ ಅವರು, ತಮ್ಮ ಉಗುರುಗಳನ್ನು ದಾಖಲೆ ಮಟ್ಟದಲ್ಲಿ ಬೆಳೆಸಲು ಮುಂದಾದರು.

 Woman With Worlds Longest Nails Cuts Them After 30 Years

2017ರಲ್ಲಿ ಕೈಬೆರಳುಗಳ ಉಗುರನ್ನು 19 ಅಡಿ 10.9 ಇಂಚಿನವರೆಗೂ ಬೆಳೆಸಿ ದಾಖಲೆ ಸೃಷ್ಟಿಸಿದ್ದರು ಅಯನ್ನಾ. ಒಮ್ಮೆ ಅವರ ಉಗುರುಗಳಿಗೆ ಬಣ್ಣ ಹಚ್ಚಲು ಎರಡು ಬಾಟಲ್ ಬಣ್ಣ ಬೇಕಾಗಿತ್ತು.

ಆದರೆ ಇದೀಗ ಅವುಗಳನ್ನು ಕತ್ತರಿಸುತ್ತಿದ್ದು, ಕತ್ತರಿಸುವ ಮುನ್ನವೂ ಹೊಸ ದಾಖಲೆ ಬರೆದಿದ್ದಾರೆ. 24 ಇಂಚು 0.7 ಇಂಚಿನ ಉಗುರನ್ನು ಬೆಳೆಸಿ ಗಿನ್ನಿಸ್‌ನಲ್ಲಿ ದಾಖಲೆ ಬರೆದಿದ್ದಾರೆ. ಅಮೆರಿಕದ ಟ್ರಿನಿಟಿ ವಿಸ್ತಾ ಡರ್ಮಟಾಲಜಿಯ ಡಾ. ಅಲಿಸನ್ ರೀಡಿಂಗರ್ ಅವರು ಬುಧವಾರ ಅವರ ಉಗುರನ್ನು ತೆಗೆದಿದ್ದಾರೆ. "ಮೂರು ದಶಕಗಳಿಂದಲೂ ನಾನು ಉಗುರು ಬೆಳೆಸುತ್ತಿದ್ದೇನೆ. ನನ್ನ ಉಗುರುಗಳನ್ನು ಈಗ ಮಿಸ್ ಮಾಡಿಕೊಳ್ಳುತ್ತೇನೆ" ಎಂದಿದ್ದಾರೆ ಅಯನ್ನಾ.

English summary
Ayanna Williams, a woman from Texas who held the Guinness World Records title for having the longest fingernails on a pair of hands cut her nails after 30 years
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X