ಕ್ಯಾಲಿಫೋರ್ನಿಯಾದಲ್ಲಿ 10 ಜನರನ್ನು ಬಲಿತೆಗೆದುಕೊಂಡ ದೈತ್ಯ ಕಾಳ್ಗಿಚ್ಚು!

ಕ್ಯಾಲಿಫೋರ್ನಿಯಾ, ಅಕ್ಟೋಬರ್ 10: ಕ್ಯಾಲಿಫೋರ್ನಿಯಾದ ಬಳಿಯ ನಾಪಾ ಮತ್ತು ಸೊನೊಮಾ ಎಂಬ ಪ್ರದೇಶದ ನಡುವೆ ಆರಂಭವಾದ ಕಾಳ್ಗಿಚ್ಚಿನಿಂದ 10 ಜನ ಬಲಿಯಾದ ಘಟನೆ ಇಂದು(ಅ.10) ಬೆಳಿಗ್ಗೆ (ಭಾರತೀಯ ಕಾಲಮಾನದ ಪ್ರಕಾರ) ನಡೆದಿದೆ.

ನೂರಕ್ಕೂ ಹೆಚ್ಚುಜನ ಗಂಭೀರ ಗಾಯಗೊಂಡಿದ್ದು, 1500ಕ್ಕೂ ಹೆಚ್ಚು ಕಟ್ಟಡಗಳು ನಾಶವಾಗಿವೆ. 57,000 ಎಕರೆಯಷ್ಟು ಪ್ರದೇಶ ಸುಟ್ಟು ಕರಕಲಾಗಿದೆ.

Wildfire in California kills 10 people, 57,000 acre burn

ಈ ಕಾಳ್ಗಿಚ್ಚು ಭಾನುವಾರ ಸಂಜೆಯಿಂದಲೇ ಆರಂಭವಾಗಿದ್ದು, 8 ಕ್ಕೂ ಹೆಚ್ಚು ಪ್ರಾಂತ್ಯಗಳನ್ನು ಇದು ವ್ಯಾಪಿಸಿದ್ದ ಕಾರಣ ಬೆಂಕಿಯನ್ನು ಆರಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಆಕಾಶದವರೆಗೂ ಹೊಗೆ ಹಬ್ಬಿ, ಆಕಾಶ ಕೆಂಪು ಬಣ್ಣವಾಗಿ, ಭಯಾನಕ ದೃಶ್ಯ ಕಣ್ಮುಂದೆಯೇ ಇತ್ತು ಎಂಬುದು ಪ್ರತ್ಯಕ್ಷದರ್ಶಿಗಳ ಮಾತು.

ಈಗಾಗಲೇ ಸಿಕ್ಕ ವರದಿಯ ಪ್ರಕಾರ 10 ಜನ ಬಲಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಬಹುದೆಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+