ಲಂಡನ್ನಿನಲ್ಲಿ 2 ಪೌಂಡಿಗೆ ಮನೆ ಮಾರಿದ ಶಿಕ್ಷಕಿ ರೇಖಾ

Posted By:
Subscribe to Oneindia Kannada

ಲಂಡನ್, ಫೆಬ್ರವರಿ 01: ಸುಮಾರು 250,000 ಪೌಂಡ್ ಗಳಷ್ಟು ಮಾರುಕಟ್ಟೆ ಮೌಲ್ಯವುಳ್ಳ ತಮ್ಮ ಮನೆಯನ್ನು ಕೇವಲ 2 ಪೌಂಡ್ ಗಳಿಗೆ ಲಂಡನ್ನಿನ ಶಿಕ್ಷಕಿ ರೇಖಾ ಪಟೇಲ್ ಅವರು ಮಾರಾಟ ಮಾಡಿದ್ದಾರೆ.

18ನೇ ಶತಮಾನದ ಈ ಬಂಗಲೆಯನ್ನು 2010ರಲ್ಲಿ ರೇಖಾ ಅವರು ಖರೀದಿ ಮಾಡಿದ್ದರು. ಮನೆ ಪುನರ್​ ನಿರ್ಮಾಣ ಕಾರ್ಯ ಕೈಗೊಂಡಿದ ರೇಖಾ ಅವರ ವಿರುದ್ಧ ಪಕ್ಕದ ಮನೆಯವರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಕಳೆದ ಆರು ವರ್ಷಗಳಿಂದ ನಡೆಯುತ್ತಿತ್ತು. ಹಾನಿ ಸಂಭವಿಸಿದ ಪಕ್ಕದ ಮನೆಯವರಿಗೆ ಹಾನಿ ಮೊತ್ತ ಹಾಗೂ ಕಾನೂನು ವೆಚ್ಚ ಸೇರಿ 60 ಲಕ್ಷ ರೂ. ಭರಿಸುವಂತೆ ಆದೇಶ ನೀಡಲಾಗಿತ್ತು.

Why UK's Rekha Patel Sold Her Home For 2 Pounds

ಪರಿಹಾರ ಮೊತ್ತ ಇಲ್ಲದ ಕಾರಣ, ಮನೆ ಮಾರಾಟ ಮಾಡಿ ನೆರೆ ಮನೆಯವರಿಗೆ ನೀಡುವಂತೆ ಕೋರ್ಟ್ ಹೇಳಿತ್ತು. ಇದಕ್ಕೆ ಒಪ್ಪದ ರೇಖಾ ಈ ಬಿಕ್ಕಟ್ಟಿನಿಂದ ತಪ್ಪಿಸಿಕೊಳ್ಳಲು ಮನೆಯನ್ನು ಕೇವಲ 2 ಪೌಂಡ್ (ಸುಮಾರು 168 ರೂಪಾಯಿ) ಗಳಿಗೆ ಮಾರಾಟ ಮಾಡಿದ್ದಾರೆ. ಈ ವ್ಯವಹಾರದಲ್ಲಿ ಎರಡು ಖಾಸಗಿ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ.

ಆಲ್ಲದೆ, ಇದೇ ಕಂಪನಿಯವರ ಜತೆ 10 ವರ್ಷಗಳ ಕಾಲ ತಿಂಗಳಿಗೆ 50 ಪೌಂಡ್ ನಂತೆ (4,000 ರೂ) ಬಾಡಿಗೆ ನೀಡುತ್ತ ಇದೇ ಮ್ಯಾಂಚೆಸ್ಟರ್ ನಲ್ಲಿರುವ ಮನೆಯಲ್ಲಿ ಇರಲು ಬಾಡಿಗೆದಾರರ ಒಪ್ಪಂದ ಮಾಡಿಕೊಂಡಿದ್ದಾರೆ(ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 43-year-old Indian-origin teacher in the UK has sold her home, which has a market value of 250,000 pounds, for a token of mere 2 pounds to ensure that she cannot be evicted from the property.
Please Wait while comments are loading...