ಪಾಕಿಸ್ತಾನದ ಹೆಡೆಮುರಿ ಕಟ್ಟಲು ಇರಾನ್ ಸೇನೆ ಬಾಂಬ್ ಹಾಕಿದ್ದು ಏಕೆ?

ಇರಾನ್ & ಪಾಕಿಸ್ತಾನದ ಮಧ್ಯೆ ಈಗ ಕಾಡ್ಗಿಚ್ಚೇ ಹೊತ್ತಿಕೊಂಡಿದ್ದು, ಇಬ್ಬರೂ ಫುಲ್ ಫೈಟ್ ನಡೆಸುತ್ತಿದ್ದಾರೆ. ತನ್ನ ನೆಲದ ಮೇಲೆ ದಾಳಿ ಮಾಡುತ್ತಿದ್ದ ಉಗ್ರರಿಗೆ ಇದೀಗ ಇರಾನ್ ಕೂಡ ಪಕ್ಕಾ ಪಾಠ ಕಲಿಸಿದೆ. ಪರಿಸ್ಥಿತಿ ಹೀಗಿದ್ದಾಗಲೇ ಪಾಕಿಸ್ತಾನ ಕೂಡ ಜಗಳಕ್ಕೆ ಸಿದ್ಧವಾಗುತ್ತಿದ್ದು ಈ ಮೂಲಕ ಎರಡು ಇಸ್ಲಾಂ ದೇಶಗಳ ನಡುವೆ ದ್ವೇಷ ಧಗಧಗಿಸುತ್ತಿದೆ. ಹಾಗಾದ್ರೆ ದಿಢೀರ್ ಹೀಗೆ ಇರಾನ್ ಸೇನೆ ಪಾಕಿಸ್ತಾನದ ಮೇಲೆ ದಾಳಿ ಮಾಡಿದ್ದಕ್ಕೆ ಕಾರಣಗಳು ಏನು? ಮುಂದೆ ಓದಿ.

ಅಂದಹಾಗೆ ಇದೀಗ ಪಾಕಿಸ್ತಾನದ ನೆಲದ ಮೇಲೆ ಇರಾನ್ ದಾಳಿ ನಡೆಸಲು ಹಲವು ಕಾರಣ ಇದೆ. ಅದರಲ್ಲಿ ಪ್ರಮುಖವಾಗಿ ತನ್ನ ನೆಲದ ಮೇಲೆ ಪದೇ ಪದೇ ಪಾಕಿಸ್ತಾನದ ಉಗ್ರರು ದಾಳಿ ನಡೆಸುತ್ತಿದ್ದಿದ್ದೇ ಕಾರಣ ಎನ್ನಲಾಗಿದೆ. ಅಂದಹಾಗೆ ಡಿಸೆಂಬರ್ 15, 2023 ರಂದು ಪಾಕ್‌ನ ಗಡಿಯಿಂದ 60 ಕಿಮೀ ದೂರದ ಇರಾನ್‌ನ ಸಿಸ್ತಾನ್ ಬಲುಚೆಸ್ತಾನ್ ಪ್ರಾಂತ್ಯದ ರಾಸ್ಕ್‌ನಲ್ಲಿರುವ ಪೊಲೀಸ್ ಠಾಣೆ ಮೇಲೆ ದಾಳಿ ನಡೆದಿತ್ತು. ಹಲವು ಬಂದೂಕುಧಾರಿಗಳು, ಹೀಗೆ ಅಟ್ಯಾಕ್‌ನ ನಡೆಸಿದ್ದರು. ಇದು ಇರಾನ್ ಪಿತ್ತ ನೆತ್ತಿಗೇರಿಸಿತ್ತು.

Why Iran is carrying out Air Strikes on these 3 countries including Pakistan? what is the reason?

ನಿರಂತರವಾಗಿ ಉಗ್ರರಿಂದ ಅಟ್ಯಾಕ್

ಈ ದಾಳಿಯಲ್ಲಿ 11 ಇರಾನಿನ ಭದ್ರತಾ ಸಿಬ್ಬಂದಿ ಹತ್ಯೆ ಆಗಿದ್ದರು, ಇನ್ನು ಜೈಶ್ ಅಲ್-ಅದ್ಲ್ ಸಂಘಟನೆ ಈ ಕೃತ್ಯ ಎಸಗಿದೆ ಎನ್ನಲಾಗಿತ್ತು. ಅಲ್ಲದೆ ಈ ಸಂಘಟನೆಯನ್ನ ಇರಾನ್ ಕೂಡ ಉಗ್ರ ಸಂಘಟನೆ ಪಟ್ಟಿಗೆ ಸೇರಿಸಿದೆ. ಇದಾದ ನಂತರ ಡಿಸೆಂಬರ್ 25 ರಂದು ಇರಾನ್‌ IRGC ಅಂದರೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹಿರಿಯ ಸಲಹೆಗಾರನ ಹತ್ಯೆಯಾಗಿತ್ತು. ಬ್ರಿಗೇಡಿಯರ್ ಜನರಲ್ ಸಯ್ಯದ್ ರಾಜಿ ಮೌಸವಿ ಡಮಾಸ್ಕಸ್‌ ದಕ್ಷಿಣ ಉಪನಗರ ವೈಮಾನಿಕ ದಾಳಿಯಲ್ಲಿ ಹತ್ಯೆ ಆಗಿದ್ದರು. ಈ ಘಟನೆ ಬಳಿಕ ಇರಾನ್ ಆಕ್ರೋಶ ಹೊರಹಾಕಿತ್ತು.

94 ಜನರ ಸಾವಿನ ಸೂತಕ

ಈ ಎಲ್ಲಾ ಘಟನೆ ಬಳಿಕ, 2024 ರ ಜನವರಿ 3ಕ್ಕೆ ಆಗ್ನೇಯ ಇರಾನ್‌ ಭಾಗದ ಕೆರ್ಮನ್‌ನಲ್ಲಿ ಭೀಕರ ಘಟನೆ ನಡೆದಿತ್ತು. 2020ರ ಜನವರಿಯಲ್ಲಿ ಅಮೆರಿಕದ ಸೇನೆಯಿಂದ ಹತ್ಯೆಯಾಗಿದ್ದ, ಜನರಲ್ ಸೊಲೈಮನಿ ಸ್ಮರಣಾರ್ಥ ಕಾರ್ಯಕ್ರಮ ನಡೆಯುವಾಗ ಅವಳಿ ಸ್ಫೋಟವು ಸಂಭವಿಸಿ ಕನಿಷ್ಠ 94 ಜನ ಸಾವನ್ನಪ್ಪಿದರು. ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನ ಅಫ್ಘಾನ್‌ನ ಶಾಖೆಯಾದ ಇಸ್ಲಾಮಿಕ್ ಸ್ಟೇಟ್-ಖೋರಾಸನ್ ದಾಳಿಯ ಹೊಣೆ ಹೊತ್ತುಕೊಂಡಿದೆ. ಇಂತಹ ಘಟನೆಗಳು ಪದೇ ಪದೇ ಮರುಕಳಿಸಿದ್ದು ಇರಾನ್ ತಾಳ್ಮೆ ಕೆಡಿಸಿತ್ತು.

Why Iran is carrying out Air Strikes on these 3 countries including Pakistan? what is the reason?

ಪ್ರತಿಕಾರ ತೀರಿಸಿಕೊಂಡ ಇರಾನ್ ಸೇನೆ?

ಅಕ್ಟೋಬರ್ 7ಕ್ಕೆ ಇಸ್ರೇಲ್ & ಹಮಾಸ್ ನಡುವಿನ ಗಾಜಾ ಯುದ್ಧದ ನಂತರ ಈ ಎಲ್ಲ ದಾಳಿಗಳು ನಡೆದವು. ಈ ಪ್ರದೇಶದಲ್ಲಿ ಇರಾನ್ ಬೆಂಬಲಿತ ಪಡೆಗಳು ಅಮೆರಿಕ ಹಾಗೂ ಇಸ್ರೇಲಿ ಪಡೆ ಸೇರಿ ವಾಣಿಜ್ಯ ಹಡಗು ಮೇಲೆ ದಾಳಿ ಮಾಡಲು ಆರಂಭಿಸಿದವು. ಪ್ರಾದೇಶಿಕ ಬಿಕ್ಕಟ್ಟು ಹೆಚ್ಚಾದಂತೆ ಭದ್ರತಾ ಸವಾಲು ಇರಾನ್‌ಗೆ ತಲೆನೋವಾಗಿದೆ. ಹೀಗಾಗಿ ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆ ನಡುವೆ ಇರಾನ್ ಜನವರಿ 15 & 16 ರಂದು ಪ್ರತೀಕಾರ ತೀರಿಸಿಕೊಂಡಿದೆ. ಇರಾಕ್, ಸಿರಿಯಾ ಹಾಗೂ ಪಾಕಿಸ್ತಾನದಲ್ಲಿ ದಾಳಿ ಮಾಡಿದೆ ಇರಾನ್ ಸೇನೆ.

ಶಿಯಾ Vs ಸುನ್ನಿ ಯುದ್ಧ?

ನೆರೆಯ ಪಾಕಿಸ್ತಾನದ ಬಲೂಚಿಸ್ತಾನದ ಗಡಿ ಪಟ್ಟಣವಾದ ಪಂಜ್‌ಗುರ್‌ನಲ್ಲಿ ಇರಾನ್‌ನ ಹಠಾತ್ ಅಟ್ಯಾಕ್, ಡಿಸೆಂಬರ್ 15ರ ರಾಸ್ಕ್‌ನಲ್ಲಿ ನಡೆದ ದಾಳಿಯ ಜವಾಬ್ದಾರಿ ಹೊತ್ತಿದ್ದ ಜೈಶ್ ಅಲ್-ಅದ್ಲ್‌ನ ತರಬೇತಿ ಶಿಬಿರ ಗುರಿ ಮಾಡಿಕೊಂಡಿತ್ತು. ಜೈಶ್ ಅಲ್-ಅದ್ಲ್, ಸುನ್ನಿ ಇಸ್ಲಾಮಿಸ್ಟ್ ಗುಂಪು. ಇರಾನ್‌ ಪೂರ್ವ ಪ್ರಾಂತ್ಯದ ಸಿಸ್ತಾನ್-ಬಲೂಚಿಸ್ತಾನ್ ಪ್ರತ್ಯೇಕಿಸಲು ಪ್ರಯತ್ನಿಸುತ್ತದೆ ಎಂಬ ಆರೋಪ ಕೂಡ ಇದೆ.

ಈ ಭಾಗವು, ಹೆಚ್ಚಾಗಿ ಸುನ್ನಿಗಳನ್ನು ಹೊಂದಿದೆ. ಇದು ದೇಶದ ಉಳಿದ ಭಾಗಗಳಿಂದ ಶಿಯಾ ಪಾದ್ರಿಗಳಿಂದ ಆಳಲ್ಪಟ್ಟಿದೆ. ಪಾಕಿಸ್ತಾನದ ನೆಲದಲ್ಲಿ ಜೈಶ್ ಇರುವಿಕೆಯ ಬಗ್ಗೆ, ಇರಾನ್ ಹಿಂದೆ ದೂರು ನೀಡಿತ್ತು. ಆದರೆ ಮಂಗಳವಾರದ ದಾಳಿ, ಪರಮಾಣು-ಸಶಸ್ತ್ರ ರಾಷ್ಟ್ರವಾದ ಇರಾನ್ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಿಸಿದೆ. ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟನ್ನು ದಕ್ಷಿಣ ಏಷ್ಯಾಕ್ಕೆ ಹರಡುವ ಅಪಾಯ ಕೂಡ ಈ ಮೂಲಕ ಹೆಚ್ಚಾಗಿದೆ.

ಒಟ್ನಲ್ಲಿ ಪಾಕಿಸ್ತಾನ & ಇರಾನ್ ನಡುವೆ ಈಗ ಕಾಡ್ಚಿಚ್ಚೇ ಹೊತ್ತಿಕೊಂಡಿದೆ. ತಮ್ಮ ಮೇಲೆ ದಾಳಿ ಮಾಡುತ್ತಿದ್ದ, ಉಗ್ರರು ಹಾಗೂ ಉಗ್ರ ಸಂಘಟನೆಗಳನ್ನು ನಾಶ ಮಾಡಲು ಇರಾನ್‌ಗೆ ಈಗ ಮನಸ್ಸಾಗಿದೆ. ಅಲ್ಲದೆ ಉಗ್ರರ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿದೆ ಇರಾನ್ ಸೇನೆ. ಆದರೆ ಇದೆಲ್ಲವೂ ಮುಂದೆ ಯಾವ ರೀತಿ ತಿರುವಿಗೆ ಕಾರಣವಾಗುತ್ತೆ? ಅನ್ನೋದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+