• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಫ್ಘಾನಿಸ್ತಾನದಲ್ಲಿ ಭಾರತ ಕರೆದ ಎನ್ಎಸ್ಎ ಸಭೆಗೆ ಎಷ್ಟು ರಾಷ್ಟ್ರಗಳಿಗೆ ಆಹ್ವಾನ?

|
Google Oneindia Kannada News

ನವದೆಹಲಿ, ನವೆಂಬರ್ 8: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರದಲ್ಲಿ ಭಾರತ ಕರೆದಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯು ಸಾಕಷ್ಟು ವಿಶೇಷ ಎನಿಸಿದೆ. ಮಧ್ಯ ಏಷ್ಯಾದಲ್ಲೇ ಮೊದಲ ಬಾರಿಗೆ ವಿಶಿಷ್ಟವಾದ ಸಭೆಗೆ ಭಾರತ ನಾಂದಿ ಹಾಡಿದೆ.

ಇದೇ ಮೊದಲ ಬಾರಿಗೆ ಇರಾನ್, ರಷ್ಯಾ ಮತ್ತು ತಜಕಿಸ್ತಾನ್, ಕಿರ್ಗಿಸ್ತಾನ್, ಕಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ಸೇರಿದಂತೆ ಎಲ್ಲಾ ಐದು ಮಧ್ಯ ಏಷ್ಯಾದ ದೇಶಗಳನ್ನು ಅಫ್ಘಾನಿಸ್ತಾನದ ಎನ್ಎಸ್ಎ ಮಟ್ಟದ ಸಭೆಯಲ್ಲಿ ಭಾಗವಹಿಸಲು ಭಾರತ ಆಹ್ವಾನಿಸಿದೆ.

ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ಗೌಪ್ಯ ಮಾಹಿತಿ ಮುಚ್ಚಿಟ್ಟಿದೆಯಾ ಅಮೆರಿಕಾ? ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ಗೌಪ್ಯ ಮಾಹಿತಿ ಮುಚ್ಚಿಟ್ಟಿದೆಯಾ ಅಮೆರಿಕಾ?

ನವೆಂಬರ್ 10ರಂದು ಭಾರತದ NSA ಅಜಿತ್ ದೋವಲ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರ (NSAs) ಮಟ್ಟದ ಸಭೆ ನಡೆಯಲಿದೆ. ಈ ಹಿಂದಿನ ಎರಡು ಸಭೆಗಳನ್ನು 2018ರ ಸೆಪ್ಟೆಂಬರ್ ಮತ್ತು 2019ರ ಡಿಸೆಂಬರ್ ತಿಂಗಳಿನಲ್ಲಿ ಇರಾನ್‌ನಲ್ಲಿ ನಡೆಸಲಾಗಿತ್ತು. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ಭಾರತದಲ್ಲಿ ಮೂರನೇ ಸಭೆಯನ್ನು ನಡೆಸುವುದಕ್ಕೆ ಸಾಧ್ಯವಾಗಿರಲಿಲ್ಲ.

ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ ಉದ್ದೇಶ:

ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯು ಗಡಿಯಾಚೆಗಿನ ಭಯೋತ್ಪಾದಕ ಬೆದರಿಕೆ, ಭಯೋತ್ಪಾದಕ ಗುಂಪುಗಳ ಉಪಸ್ಥಿತಿ, ರಾಜಕೀಯ ಅಸ್ಥಿರತೆ ಮತ್ತು ಅಫ್ಘಾನಿಸ್ತಾನದಿಂದ ಉಗ್ರವಾದದ ಹರಡುವಿಕೆ ಮತ್ತು ಆಮೂಲಾಗ್ರ ವಿಚಾರ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ.ಕಳೆದ ಆಗಸ್ಟ್ ತಿಂಗಳಿನಲ್ಲಿ ಅಫ್ಘಾನಿಸ್ತಾನದ ಪ್ರಜಾಪ್ರಭುತ್ವ ಸರ್ಕಾರದ ವಿರುದ್ಧ ದಂಗೆ ಎದ್ದು ತಾಲಿಬಾನ್ ಸಂಘಟನೆಯು ತಮ್ಮದೇ ಸರ್ಕಾರ ರಚಿಸಿದ ನಂತರದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಭಾರತವು ವಿಶೇಷ ಕಾಳಜಿಯನ್ನು ಹೊಂದಿದೆ. ತಾಲಿಬಾನ್ ಸರ್ಕಾರ ರಚನೆ ನಂತರದಲ್ಲಿ ಎದುರಾಗುವ ಭದ್ರತಾ ಸವಾಲುಗಳು, ಅಫ್ಘಾನಿಸ್ತಾನದಲ್ಲಿ ಇರುವ ಸ್ಥಿರತೆ, ಅಂತರ್ಗತ ಸರ್ಕಾರ ರಚನೆ ಹಾಗೂ ಪ್ರಸ್ತುತ ಚರ್ಚಿಸಬೇಕಾದ ವಿಷಯಗಳನ್ನು ಪ್ರಮುಖ ವಿಷಯಗಳನ್ನಾಗಿ ಗುರುತಿಸಲಾಗಿದೆ.

ಭಾರತ ತೊಡಗಿಸಿಕೊಂಡಿರುವ ಯೋಜನೆ:
ಇರಾನ್‌ನಲ್ಲಿನ ಚಬಹಾರ್ ಬಂದರು ಯೋಜನೆ ಮತ್ತು ತುರ್ಕಮೆನಿಸ್ತಾನ್-ಅಫ್ಘಾನಿಸ್ತಾನ-ಪಾಕಿಸ್ತಾನ-ಭಾರತ (TAPI) ಗ್ಯಾಸ್ ಪೈಪ್‌ಲೈನ್ ಸೇರಿದಂತೆ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಗಳಲ್ಲಿ ಭಾರತ ತೊಡಗಿಸಿಕೊಂಡಿದೆ. ಈ ಯೋಜನೆಗಳ ಮೇಲೆ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಯಾವ ರೀತಿ ಪರಿಣಾಮ ಬೀರಬಲ್ಲದು ಎಂಬುದರ ಬಗ್ಗೆ ಎನ್ಎಸ್ಎ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಯುದ್ಧದಿಂದ ತೀವ್ರ ಹಾನಿಗೊಳಗಾದ ಅಫ್ಘಾನಿಸ್ತಾನದ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಉತ್ತಮ ವ್ಯಾಪಾರಿ ಸಂಬಂಧ ಹಾಗೂ ಪಾಲುದಾರಿಯಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಲಿದೆ.

ಎನ್ಎಸ್ಎ ಸಭೆಗೆ ಹಾಜರಾಗಲು ಎಷ್ಟು ರಾಷ್ಟ್ರಗಳಿಗೆ ಆಹ್ವಾನ?:
ಚೀನಾ, ಇರಾನ್, ಕಜಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನಲ್ಲಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಆಹ್ವಾನವನ್ನು ನೀಡಲಾಗಿದೆ. ಕಳೆದ ತಿಂಗಳು ನವದೆಹಲಿ ಆಹ್ವಾನಿತ ರಾಷ್ಟ್ರಗಳ ರಾಯಭಾರ ಕಚೇರಿಯ ಮೂಲಕ ರಾಷ್ಟ್ರೀಯ ಭದ್ರತಾ ಮಂಡಳಿಯ ಸೆಕ್ರೆಟರಿಯೇಟ್‌ನಿಂದ ಆಹ್ವಾನಗಳನ್ನು ಕಳುಹಿಸಲಾಗಿತ್ತು.
ಇರಾನ್, ರಷ್ಯಾ ಮತ್ತು ತಜಿಕಿಸ್ತಾನ್, ಕಿರ್ಗಿಸ್ತಾನ್, ಕಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ಸೇರಿದಂತೆ ಎಲ್ಲಾ ಐದು ಮಧ್ಯ ಏಷ್ಯಾದ ದೇಶಗಳು ಸಭೆಯಲ್ಲಿ ಭಾಗವಹಿಸುವುದು ಖಚಿತವಾಗಿದೆ. ಆದರೆ, ಚೀನಾ ಮತ್ತು ಪಾಕಿಸ್ತಾನ ಭಾಗವಹಿಸುವಿಕೆ ಬಗ್ಗೆ ಖಚಿತಪಡಿಸಿಲ್ಲ. ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಸಭೆಗೆ ಹಾಜರಾಗುವುದಿಲ್ಲ ಎಂದು ಘೋಷಿಸಿದ್ದಾರೆ.

ತಾಲಿಬಾನ್ ಬಗ್ಗೆ ಭಾರತದ ನಿಲುವು:
ಅಫ್ಘಾನಿಸ್ತಾನದಲ್ಲಿ ಪ್ರಧಾನಮಂತ್ರಿ ಹಸನ್ ಅಖುಂಡ್ ನೇತೃತ್ವದ ತಾಲಿಬಾನ್ ಆಡಳಿತವನ್ನು ಸದ್ಯಕ್ಕೆ ಯಾವುದೇ ದೇಶವು ಗುರುತಿಸಿಲ್ಲ. ಆದರೆ, ಭಾರತ ಸೇರಿದಂತೆ ಹಲವು ರಾಷ್ಟ್ರಗಳು ತಾಲಿಬಾನ್ ಅಧಿಕಾರಿಗಳನ್ನು ವಿವಿಧ ಹಂತಗಳಲ್ಲಿ ತೊಡಗಿಸಿಕೊಂಡಿವೆ. ಅಫ್ಘಾನಿಸ್ತಾನದ ಕುರಿತ ಯುಎನ್ ಸಭೆಯಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ತಾಲಿಬಾನ್ ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳನ್ನು 'ಅರ್ಥವಾಗುವಂತೆ ಕಾಳಜಿ'ಯೊಂದಿಗೆ ನವದೆಹಲಿ ಗಮನಿಸುತ್ತಿದೆ ಎಂದು ಹೇಳಿದ್ದರು.
ಭಾರತವು ಅಫ್ಘಾನಿಸ್ತಾನ ಮತ್ತು ಅದರ ಜನರೊಂದಿಗೆ ಹಿಂದಿನಿಂದಲೂ ಐತಿಹಾಸಿಕ ಸಂಬಂಧವನ್ನು ಹೊಂದಿದೆ ಎಂಬುದನ್ನು ಗಮನಿಸುವುದು ಸೂಕ್ತವಾಗಿದೆ. ತಾಲಿಬಾನ್ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲು ಅಫ್ಘಾನ್ ಸರ್ಕಾರದೊಂದಿಗೆ ದೇಶವು ಉತ್ತಮ ಸ್ನೇಹ ಸಂಬಂಧವನ್ನು ಹೊಂದಿತ್ತು. ಸ್ವಾಧೀನದ ನಂತರ, ಭಾರತವು ಯಾವಾಗಲೂ ಆಫ್ಘನ್ ಜನರೊಂದಿಗೆ ನಿಂತಿದೆ ಮತ್ತು ಹಿಂದೆ ಮಾಡಿದಂತೆ ಮಾನವೀಯ ನೆರವು ಕಳುಹಿಸಲು ಸಿದ್ಧವಾಗಿದೆ ಎಂದು ಪುನರುಚ್ಚರಿಸಿದೆ.

English summary
Why India is Holding NSA Meet in Afghanistan: Read Here Which Nations are Attends.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X