ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯವರು ಇಷ್ಟು ವರ್ಷ ಇಂಡೋನೇಷ್ಯಾವನ್ನು ದೂರವಿಟ್ಟಿದ್ದೇಕೆ?

By ಶುಭಮ್ ಘೋಷ್
|
Google Oneindia Kannada News

ನರೇಂದ್ರ ಮೋದಿಯವರು ಪ್ರಧಾನಿಯಾಗಿ 4 ವರ್ಷಗಳ ಹಿಂದೆ ಪ್ರಮಾಣ ವಚನ ಸ್ವೀಕರಿಸಿದ ಕ್ಷಣದಿಂದಲೇ ಇತರ ರಾಷ್ಟ್ರಗಳೊಂದಿಗೆ ಸಂಬಂಧ ವೃದ್ಧಿಸುವ ಬಗ್ಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ, ವಿಶೇಷ ಕಾಳಜಿ ತೋರಿಸಿದ್ದಾರೆ.

ಈ ನಾಲ್ಕು ವರ್ಷಗಳಲ್ಲಿ ಅವರು ಹಲವಾರು ರಾಷ್ಟ್ರಗಳಿಗೆ ಹಲವಾರು ಬಾರಿ ಭೇಟಿ ಕೊಟ್ಟಿದ್ದಾರೆ. ಇದು ಪ್ರಶಂಸೆಗೂ, ಟೀಕೆಗೂ ಕಾರಣವಾಗಿದೆ. ಅವರ ವಿದೇಶಿ ಭೇಟಿಯನ್ನು ವಿದೇಶಿ ನಾಯಕರೇ ಶ್ಲಾಷಿಸಿದ್ದಾರೆ. ಆದರೆ, ಟೀಕೆ ಎಷ್ಟರಮಟ್ಟಿಗೆ ವ್ಯಕ್ತವಾಗಿದೆಯೆಂದರೆ, ಮೋದಿಯವರು 'ಭಾರತಕ್ಕೆ ಭೇಟಿ' ಯಾವಾಗ ನೀಡುತ್ತಾರೆ ಎಂದು ವ್ಯಂಗ್ಯವಾಡುವಷ್ಟರ ಮಟ್ಟಿಗೆ.

ನೀವು ಗಾಂಧಿ, ನೆಹರೂ ಇರಿಸಿದ್ದ ಜೈಲುಗಳಿವು: ಬ್ರಿಟನ್‌ಗೆ ಮೋದಿ ಖಡಕ್ ಉತ್ತರನೀವು ಗಾಂಧಿ, ನೆಹರೂ ಇರಿಸಿದ್ದ ಜೈಲುಗಳಿವು: ಬ್ರಿಟನ್‌ಗೆ ಮೋದಿ ಖಡಕ್ ಉತ್ತರ

ವಿಶ್ವದಾದ್ಯಂತ ಮನ್ನಣೆ ಗಳಿಸುತ್ತಿರುವ ಮೋದಿಯವರು ಇಷ್ಟು ವರ್ಷಗಳ ಕಾಲ, ಏಷ್ಯಾದ 7ನೇ ದೊಡ್ಡ ಮತ್ತು ದಕ್ಷಿಣ ಏಷ್ಯಾದ ಅತೀದೊಡ್ಡ ರಾಷ್ಟ್ರ ಇಂಡೋನೇಷ್ಯಾಗೆ ಭೇಟಿ ನೀಡದಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.

Why did Modi ignore Indonesia for so long?

ಯಾವುದೇ ದೇಶಕ್ಕೆ ಹೋಗಲಿ ದ್ವಿಪಕ್ಷೀಯ ಮಾತುಕತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿರುವ ನರೇಂದ್ರ ಮೋದಿಯವರು, ವಿಶ್ವದ ಅತಿದೊಡ್ಡ ಮುಸ್ಲಿಂ ರಾಷ್ಟ್ರಗಳಲ್ಲಿ ಒಂದು ಎಂದು ಅನ್ನಿಸಿಕೊಂಡಿರುವ ಇಂಡೋನೇಷ್ಯಾಗೆ ಭೇಟಿ ನೀಡುತ್ತಿರುವುದು ತಡವಾಯಿತೆ? ಹತ್ತಿರದಲ್ಲೇ ಇರುವ ಸಿಂಗಪುರ ಮತ್ತು ಮಲೇಷಿಯಾಗೆ ಭೇಟಿ ನೀಡಿದ್ದಾರೆ, ಆದರೆ, ಇಂಡೋನೇಷ್ಯಾವನ್ನು ಕಡೆಗಣಿಸುತ್ತ ಬಂದಿದ್ದರು. ಈಗ ಕಾಲಕೂಡಿ ಬಂದಿದೆ.

ಭಾರತದ ಹತ್ತಿರದಲ್ಲಿರುವ ಎಲ್ಲ ರಾಷ್ಟ್ರಗಳಿಗೂ ಮೋದಿ ಭೇಟಿ ನೀಡಿ, ಸಂಬಂಧ ಗಟ್ಟಿಗೊಳಿಸುವತ್ತ ಸಾಕಷ್ಟು ಶ್ರಮ ವಹಿಸಿದ್ದಾರೆ. ಆದರೆ, ಹತ್ತಿರದಲ್ಲಿರುವ ಇಂಡೋನೇಷ್ಯಾ ಮೇಲೆ ಏಕೋ ಭಾರತದ ರಾಡಾರ್ ಕಣ್ಣು ಬಿದ್ದಿದ್ದಿಲ್ಲ (ಭಾರತದ ಅಂಡಮಾನ್ ನಿಂದ ಇಂಡೋನೇಷ್ಯಾದ ಬಂದಾ ಆಚೆ ಹತ್ತಿರದಲ್ಲೇ ಇದೆ).

ಮೋದಿಯನ್ನು ಹಾಡಿ ಹೊಗಳಿದ ಮುಸ್ಲಿಂ ದೇಶದ ಮಾಧ್ಯಮಮೋದಿಯನ್ನು ಹಾಡಿ ಹೊಗಳಿದ ಮುಸ್ಲಿಂ ದೇಶದ ಮಾಧ್ಯಮ

2016ರ ಅಕ್ಟೋಬರ್ ನಲ್ಲಿ ಭಾರತದ ಅಂಡಮಾನ್ ನಲ್ಲಿ ಭಾರತ ಮತ್ತು ಇಂಡೋನೇಷ್ಯಾ ರಾಷ್ಟ್ರಗಳ ಜಂಟಿಯಾಗಿ 17 ದಿನಗಳ ಕಾಲ ಪ್ಯಾಟ್ರೋಲಿಂಗ್ ಮಾಡಿದ್ದರೂ ಅದು ಹೆಚ್ಚು ಗಮನ ಸೆಳೆಯದಿರುವುದು ದುರಾದೃಷ್ಟದ ಸಂಗತಿ. ಅದೇ ಸಮಯದಲ್ಲಿ ಅಮೆರಿಕಾದ ಚುನಾವಣೆ ಮತ್ತು ಭಾರತದಲ್ಲಿ ಅಪನಗದೀಕರಣ ಬಿರುಗಾಳಿ ಎಬ್ಬಿಸಿದ್ದರಿಂದ ಇದು ಗಮನ ಸೆಳೆಯದೇ ಹೋಯಿತು.

Why did Modi ignore Indonesia for so long?

ದೇಶದ ವಿಸ್ತೀರ್ಣ, ಧರ್ಮ, ಜನಸಂಖ್ಯೆ, ರಾಜಕೀಯವನ್ನು ಗಮನಿಸಿದರೆ ಭಾರತ ಮತ್ತು ಇಂಡೋನೇಷ್ಯಾಗೆ ಸಾಮ್ಯತೆಯಿದೆ. ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕೂಡ ಎರಡೂ ರಾಷ್ಟ್ರಗಳು ಒಂದೇ ಬಗೆಯ ಇತಿಹಾಸ ಹೊಂದಿವೆ. ಇದು ಎರಡೂ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಒಪ್ಪಂದಕ್ಕೆ ಹೆಚ್ಚು ಒತ್ತು ನೀಡಬೇಕಿತ್ತು. ಆದರೆ, ದುರಾದೃಷ್ಟವಶಾತ್ ಅದು ಆಗಿಲ್ಲ.

ಸಂಕೀರ್ಣ ಸಂಬಂಧ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಹೊರತರಲ್ಲಿ, ಏಷ್ಯಾದಲ್ಲಿ ರಾಜತಾಂತ್ರಿಕ ವ್ಯವಸ್ಥೆಗಾಗಿ ಮತ್ತು ಅಲಿಪ್ತ ಒಕ್ಕೂಟ ಸ್ಥಾಪಿಸಲು ಎರಡೂ ರಾಷ್ಟ್ರಗಳು ಶ್ರಮಿಸಿದ್ದವು. 1940ರ ದಶಕದಲ್ಲಿ ಜರುಗಿದ ಏಷ್ಯನ್ ರಿಲೇಶನ್ಸ್ ಕಾನ್ಫರನ್ಸ್ ಮತ್ತು 1950ರ ದಶಕದಲ್ಲಿ ಜರುಗಿದ ಬಂಡುಂಗ್ ಕಾನ್ಫರನ್ಸ್ ನಲ್ಲಿ ನವದೆಹಲಿ ಮತ್ತು ಜಕಾರ್ತಾಗಳೆರಡು ಜಂಟಿಯಾಗಿ ತೊಡಗಿಕೊಂಡಿದ್ದವು.

ಆದರೆ, 1960ರ ದಶಕದಲ್ಲಿ ನೆಹರೂ ಆಡಳಿತ ಕೊನೆಗಾಣುತ್ತಿದ್ದಂತೆ ದಕ್ಷಿಣ ಏಷ್ಯಾದ ಒಕ್ಕೂಟದಿಂದ ಭಾರತ ಹಿಂಜರಿಯಲು ಆರಂಭಿಸಿತು. 1962ರಲ್ಲಿ ನಡೆದ ಭಾರತ ಮತ್ತು ಚೀನಾ ನಡುವಿನ ಯುದ್ಧ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಇಂಡೋನೇಷ್ಯಾ ಜೊತೆಗಿನ ಸಂಪರ್ಕವೂ ಕಡಿತಗೊಳ್ಳಲು ಆರಂಭಿಸಿತು.

Why did Modi ignore Indonesia for so long?

1961ರಲ್ಲಿ ಚೀನಾ ಜೊತೆ ಒಡಂಬಡಿಕೆ ಮಾಡಿಕೊಂಡ ಇಂಡೋನೇಷ್ಯಾ ಭಾರತದ ವಿದ್ರೋಹಿ ರಾಷ್ಟ್ರದಂತೆ ವ್ಯವಹರಿಸಲು ಆರಂಭಿಸಿತು. 1965ರ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ಇಂಡೋನೇಷ್ಯಾ ಪಾಕಿಸ್ತಾನಕ್ಕೆ ಬೆಂಬಲ ನೀಡಿತು. ಮಲೇಷಿಯಾ ಜೊತೆ ಭಾರತ ಉತ್ತಮ ಸಂಬಂಧ ಹೊಂದಿದ್ದು ಕೂಡ ಇಂಡೋನೇಷ್ಯಾಗೆ ನುಂಗಲಾರದ ತುತ್ತಾಗಿತ್ತು. ಅಲ್ಲದೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಎರಡೂ ರಾಷ್ಟ್ರಗಳು ಕಾಳಗ ನಡೆಸುತ್ತಲೇ ಬಂದಿವೆ.

20ನೇ ಶತಮಾನದ ಕೊನೆಯಲ್ಲಿ ಮತ್ತು 21ನೇ ಶತಮಾನದ ಆದಿಯಲ್ಲಿ ಎರಡೂ ರಾಷ್ಟ್ರಗಳ ನಡುವಿನ ಬಿಗಿಯಾದ ರಾಜತಾಂತ್ರಿಕ ಸಂಬಂಧಗಳು ಸಡಿಲಗೊಳ್ಳಲು ಆರಂಭಿಸಿದವು. ಇದೀಗ ದಕ್ಷಿಣ ಏಷ್ಯಾದಲ್ಲಿ ಇಂಡೋನೇಷ್ಯಾ ಭಾರತದೊಡನೆ ವ್ಯಾಪಾರ ವಹಿವಾಟು ಮಾಡುತ್ತಿರುವ ಎರಡನೇ ಅತೀದೊಡ್ಡ ರಾಷ್ಟ್ರವಾಗಿದೆ.

ನರೇಂದ್ರ ಮೋದಿಯವರಂತೆ 2014ರಲ್ಲಿ ಇಂಡೋನೇಷ್ಯಾದ ರಾಷ್ಟ್ರಪತಿ ಜೋಕೋ ವಿಡೋಡೋ ಅವರು ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಚೀನಾ ಮತ್ತು ಅಮೆರಿಕಾದ ಜೊತೆ ಆರ್ಥಿಕ ವ್ಯವಹಾರವನ್ನು ಕುದುರಿಸುವುದರ ಜೊತೆಗೆ ಸಮುದ್ರ ಸಂಬಂಧಿ ಹಕ್ಕು ಸ್ಥಾಪಿಸುವಲ್ಲಿ ಮತ್ತು ನೌಕಾ ಭದ್ರತೆಯನ್ನು ಉತ್ತಮಪಡಿಸುವಲ್ಲಿ ಸಫಲರಾಗಿದ್ದಾರೆ. ಈ ವಿಷಯದಲ್ಲಿ ಅವರು ಎಷ್ಟು ಆಕ್ರಮಣಕಾರಿ ನೀತಿ ಅನುಸರಿಸುತ್ತಿದ್ದಾರೆಂದರೆ, ತಮ್ಮ ವ್ಯಾಪ್ತಿಯಲ್ಲಿ ಅತಿಕ್ರಮಣ ಮಾಡುವವ ಕೆಲ ಹಡಗುಗಳನ್ನು ಮುಳುಗಿಸಿದ್ದಾರೆ.

ಚೀನಾಗೆ ಟಾಂಗ್ ನೀಡುವ ಉದ್ದೇಶದಿಂದ ಫಿಜಿ, ಮೋಜಾಂಬಿಕ್, ತಾಂಜಾನಿಯಾದಂಥ ಸಣ್ಣ ರಾಷ್ಟ್ರಗಳಲ್ಲಿ ಭೇಟಿ ನೀಡಿರುವ ಮೋದಿಯವರು ಈ ಸರಕಾರದ ಕಡೆಯ ಅವಧಿಯಲ್ಲಿ ಇಂಡೋನೇಷ್ಯಾಗೆ ಏಕೆ ಭೇಟಿ ನೀಡುತ್ತಿದ್ದಾರೆ ಎಂದು ಅರಿಯದ ಸಂಗತಿಯಾಗಿದೆ. ವಿಡೋಡೋ ಅವರೇ 2016 ಮತ್ತು 2018ರಲ್ಲಿ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ.

English summary
Why did Narendra Modi ignore Indonesia, a key maritime nation, for so long?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X