ಅಮೆರಿಕ ಕೊಂದ ಖಾಸಿಂ ಸೋಲೆಮಾನಿ ಯಾರು? ಟ್ರಂಪ್‌ಗೇಕೆ ಈತನ ಬಗ್ಗೆ ಭಯ?

ಅಮೆರಿಕ ಸೇನೆಯು ಏರ್‌ಸ್ಟ್ರೈಕ್ ನಡೆಸಿ ಬಾಗ್ದಾದ್ ವಿಮಾನ ನಿಲ್ದಾಣದ ಬಳಿ ಇರಾನ್‌ ನ ಸೇನಾ ಕಮಾಂಡರ್ ಖಾಸಿಂ ಸೋಲೆಮಾನಿ ಅನ್ನು ಹತ್ಯೆ ಮಾಡಿದೆ.

ಖಾಸಿಂ ಸೋಲೆಮಾನಿ ಹತ್ಯೆ ವಿಶ್ವದಾದ್ಯಂತ ಸಂಚಲನ ಮೂಡಿಸಿದೆ. ನಿನ್ನೆಯವರೆಗೂ ಖಾಸಿಂ ಸುಲೇಮಾನಿ ಯಾರೆಂದು ಸಹ ಗೊತ್ತಿಲ್ಲದವರೆಲ್ಲಾ ಇಂದು ಆತನ ಸಾವು ಜಗತ್ತಿನ ಮೇಲೆ ಬಿರುತ್ತಿರುವ ಪರೋಕ್ಷ ಪರಿಣಾಮಗಳನ್ನು ಕಂಡು ದಂಗಾಗಿದ್ದಾರೆ.

ಅಷ್ಟಕ್ಕೂ ಈ ಖಾಸಿಂ ಸೋಲೆಮಾನಿ ಯಾರು? ಈತನ ಕಂಡರೆ ಅಮೆರಕಕ್ಕೆ ಭಯವಿದ್ದಿದ್ದೇಕೆ? ಆತನನ್ನೇ ಕೊಲ್ಲಲು ಅಮೆರಿಕ ನಿಶ್ಚಯಿಸಿದ್ದು ಏಕೆ? ಹಾಗೂ ಆತನನ್ನು ಕೊಂದದ್ದು ಹೇಗೆ? ಇನ್ನೂ ಹಲವು ಪ್ರಶ್ನೆಗಳು ಉದ್ಭವಿಸಿವೆ.

ಖಾಸಿಂ ಸೋಲೆಮಾನಿ ಇರಾನ್‌ನ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕ್ರಾಪ್' ನ ಕಮಾಂಡರ್. ಈ ಸೇನೆ ತನ್ನನ್ನು ತಾನು 'ಇಸ್ಲಾಮಿಕ್ ಕ್ರಾಂತಿಯ ರಕ್ಷಕರ ಸೈನ್ಯ' ಎಂದು ಕರೆದುಕೊಳ್ಳುತ್ತದೆ. ಇರಾನ್ ಸೇನೆಗಿಂತಲೂ ಹೆಚ್ಚು ಮಹತ್ವದ್ದು, ಹೆಚ್ಚು ಆಕ್ರಮಣಶೀಲತೆ ಹೊಂದಿರುವ ಸೇನೆಯ ದೊಡ್ಡ ತಂಡ ಇದು. ಸ್ಥಳೀಯವಾಗಿ ಇದನ್ನು 'ಪಸ್ದಾರನ್' ಎಂದು ಕರೆಯಲಾಗುತ್ತದೆ.

ಇರಾನ್‌ ನಲ್ಲಿ ಭಾರಿ ಪ್ರಭಾವಿ ಆಗಿದ್ದ ಖಾಸಿಂ ಸೋಲೆಮಾನಿ ಇರಾನ್‌ ನ ಸರ್ಕಾರ ರಚನೆ, ವಿದೇಶಾಂಗ ವ್ಯವಹಾರ ಸೇರಿದಂತೆ ಹಲವು ವಿಚಾರಗಳಲ್ಲಿ ನಿರ್ಣಯ ತೆಗೆದುಕೊಳ್ಳುತ್ತಿದ್ದ ಅಥವಾ ಈತನ ನಿರ್ಣಯ ತೆಗೆದುಕೊಳ್ಳಲು ಈತನ ಸಲಹೆ ಅವಶ್ಯಕವಾಗಿತ್ತು. ಅಷ್ಟರಮಟ್ಟಿಗೆ ಇರಾನ್‌ ದೇಶದಲ್ಲಿ ಆತನ ಪ್ರಭಾವ ಇತ್ತು.

ಮಧ್ಯಪ್ರಾಚ್ಯರ ಪಾಲಿನ ಹೀರೋ, ಪಾಶ್ಚಿಮಾತ್ಯರ ಭಯೋತ್ಪಾದಕ

ಮಧ್ಯಪ್ರಾಚ್ಯರ ಪಾಲಿನ ಹೀರೋ, ಪಾಶ್ಚಿಮಾತ್ಯರ ಭಯೋತ್ಪಾದಕ

ಅಮೆರಿಕ ಗುಪ್ತಚರ ಇಲಾಖೆ ಸಿಐಎ ನ ವಿಶ್ಲೇಷಕ ಕೆನ್ನತ್ ಪೋಲ್ಲಕ್ ಬರೆದು 2017 ರಲ್ಲಿ ಬಿಡುಗಡೆ ಆದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಖಾಸಿಂ ಸೋಲೆಮಾನಿಗೆ ಸ್ಥಾನವಿತ್ತು. ಆತನ ಬಗ್ಗೆ ಬರೆದಿದ್ದ ಕೆನ್ನತ್ ಪೋಲ್ಲಕ್, 'ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ಖಾಸಿಂ ಸೋಲೆಮಾನಿ ಜೇಮ್ಸ್‌ ಬಾಂಡ್, ಎರ್ವಿನ್ ರೋಮೆಲ್, ಲೇಡಿ ಗಾಗ ಮೂರರ ಸಮ್ಮಿಲನ, ಅದೇ ಪಾಶ್ಚಿಮಾತ್ಯ ದೇಶಗಳಿಗೆ ಇರಾನ್‌ನ ಇಸ್ಲಾಂ ಕ್ರಾಂತಿಯನ್ನು ರಫ್ತು ಮಾಡುವ, ಪಾಶ್ಚಾತ್ಯ ಸಂಸ್ಕೃತಿಯನ್ನು ದಮನ ಮಾಡುವ, ಇರಾನ್‌ನ ಯುದ್ಧಗಳ ಹಿಂದಿರುವ ಶಕ್ತಿ' ಎಂದಿದ್ದ.

ಸಹಾಯ ಮಾಡಿದವನನ್ನೇ ಕೊಂದಿದೆ ಅಮೆರಿಕ

ಸಹಾಯ ಮಾಡಿದವನನ್ನೇ ಕೊಂದಿದೆ ಅಮೆರಿಕ

ಐಸಿಸ್ ಉಗ್ರರನ್ನು ಸಶಸ್ತ್ರ ಮೂಲಕ ಹಿಮ್ಮೆಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖಾಸಿಂ ಸೋಲೆಮಾನಿ, ಒಸಾಮಾ ಬಿನ್ ಲಾದೆನ್ ಹತ್ಯೆಯನ್ನು ಅಮೆರಿಕಕ್ಕೆ ಭಾರಿ ಸಹಾಯ ಮಾಡಿದ್ದ. ಒಂದು ಕಾಲದಲ್ಲಿ ಸಹಾಯ ಮಾಡಿದ್ದ ವ್ಯಕ್ತಿಯನ್ನೇ ಅಮೆರಿಕ ಇಂದು ಪರಲೋಕಕ್ಕೆ ಅಟ್ಟಿದೆ, ಆದರೆ ಇದರ ಹಿಂದೆ ಬಲವಾದ ರಾಜಕೀಯ ಕಾರಣವಿದೆ.

ಸಿರಿಯಾ, ಲೆಬನಾನ್ ನಲ್ಲಿ ಪ್ರಭಾವ ಹೊಂದಿದ್ದ ಸೋಲೆಮಾನಿ

ಸಿರಿಯಾ, ಲೆಬನಾನ್ ನಲ್ಲಿ ಪ್ರಭಾವ ಹೊಂದಿದ್ದ ಸೋಲೆಮಾನಿ

ಭಾರಿ ವೇಗವಾಗಿ ಪ್ರಭಾವ ವಿಸ್ತರಿಸುತ್ತಿದ್ದ ಖಾಸಿಂ ಸೋಲೆಮಾನಿ ಇರಾಕ್‌, ಲೆಬನಾನ್, ಸಿರಿಯಾ ಮೇಲೆ ಹಿಡಿತ ಸಾಧಿಸುವ ಹುನ್ನಾರದಲ್ಲಿದ್ದ. ಅಲ್ಲೆಲ್ಲಾ ಆತನ ಪ್ರಭಾವ ಹೆಚ್ಚಾಗಿತ್ತು, ಸಿರಿಯಾ, ಲೆಬನಾನ್ ವಿಶೇಷವಾಗಿ ಇರಾಖ್ ಮೇಲೆ ಸೋಲೆಮಾನಿ ಹಿಡಿತ ಸಾಧಿಸುವುದು ಅಮೆರಿಕಕ್ಕೆ ಇಷ್ಟವಿರಲಿಲ್ಲ. ಇರಾಖ್‌ ನಲ್ಲಿ ಇರಾನ್ ಪರ ಬಂಡುಕೋರರು ಹೆಚ್ಚಾಗಲು ಸೋಲೆಮಾನಿ ಕಾರಣ ಎಂಬುದು ಅಮೆರಿಕಕ್ಕೆ ಗೊತ್ತಿರದಿದ್ದೇನಲ್ಲ.

ಅಮೆರಿಕದ ವಿರುದ್ಧ ಭಯೋತ್ಪಾದರಿಕೆ ಸಹಕರಿಸಿದ್ದ ಸೋಲೆಮಾನಿ

ಅಮೆರಿಕದ ವಿರುದ್ಧ ಭಯೋತ್ಪಾದರಿಕೆ ಸಹಕರಿಸಿದ್ದ ಸೋಲೆಮಾನಿ

2003 ರ ನಂತರ ಸೋಲೆಮಾನಿ ಅಧಿಕಾರ ವ್ಯಾಪ್ತಿ ವಿಸ್ತರಿಸಿಕೊಂಡಾಗ ಬಂಡುಕೋರರನ್ನು, ಭಯೋತ್ಪಾದಕರನ್ನು ಬಳಸಿ ಅಮೆರಿಕದ ಮೇಲೆ ಸತತ ದಾಳಿಗಳಾಗುವಂತೆ ಸೋಲೆಮಾನಿ ಮಾಡಿದ್ದ. ಇದರಲ್ಲಿ ಹಿಜಬುಲ್ಲಾ ಮತ್ತು ಪ್ಯಾಲೆಸ್ತೇನಿ ಭಯೋತ್ಪಾದಕರು ಹೆಚ್ಚಿಗಿದ್ದರು. ಇವರ ಮೇಲೆ ಸೋಲೆಮಾನಿ ಹಿಡಿತ ಪರೋಕ್ಷವಾಗಿತ್ತು.

ಇರಾನ್ ಪರಮೋಚ್ಛ ನಾಯಕ ಆಗುವ ಸಾಧ್ಯತೆ ಇತ್ತು

ಇರಾನ್ ಪರಮೋಚ್ಛ ನಾಯಕ ಆಗುವ ಸಾಧ್ಯತೆ ಇತ್ತು

ಇರಾನ್‌ನ ಪರಮೋಚ್ಛ ನಾಯಕ ಅಲಿ ಖಮೇನಿ ಜೊತೆಯಾಗಿಯೂ ಬಹಿರಂಗವಾಗಿ ಕಾಣಿಸಿಕೊಂಡಿದ್ದ ಸೋಲೆಮಾನಿ, ಇರಾನ್‌ನ ಪರಮೋಚ್ಛ ನಾಯಕ ಆಗುವ ಎಲ್ಲ ಸಾಧ್ಯತೆಗಳೂ ಇತ್ತು. ಇಸ್ಲಾಂ ಪ್ರತಿಪಾದಕ ಆಗಿದ್ದ ಸೋಲೆಮಾನಿ ಅನ್ನೇ ಪರಮೋಚ್ಛ ನಾಯಕನಾಗಿ ಆಯ್ಕೆ ಮಾಡುವ ಇಚ್ಛೆ ಅಲಿ ಖಮೇನಿಗೆ ಇತ್ತಂತೆ ಇದು ಅಮೆರಿಕಕ್ಕೆ ಬೇಕಿರಲಿಲ್ಲ.

ಸೌದಿ ಅರೆಬಿಯಾ ತೈಲ ಸಂಸ್ಕರಣಾ ಘಟಕದ ಮೇಲೆ ದಾಳಿ

ಸೌದಿ ಅರೆಬಿಯಾ ತೈಲ ಸಂಸ್ಕರಣಾ ಘಟಕದ ಮೇಲೆ ದಾಳಿ

ಅಮೆರಿಕದೊಂದಿಗೆ ಈ ಹಿಂದಿನಿಂದಲೂ ವೈಷಮ್ಯ ಕಾಪಾಡಿಕೊಂಡು ಬಂದಿದ್ದ ಸೋಲೆಮಾನಿ, ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸದ್ ಸಿರಿಯಾದ ಬಂಡುಕೋರರ ವಿರುದ್ಧ ಯುದ್ಧ ಆರಂಭಿಸಲು ಈತನೇ ಕಾರಣ. ಕೆಲವೇ ತಿಂಗಳ ಹಿಂದೆ ಸೌದಿ ಅರೆಬಿಯಾದ ಅರಾಮ್ಕೊ ತೈಲ ಸಂಸ್ಕರಣಾ ಘಟಕದ ಮೇಲೆ ನಡೆದ ದಾಳಿಯಲ್ಲಿಯೂ ಸೋಲೆಮಾನಿ ಹಸ್ತ ಇರುವುದು ಬಹುತೇಕರಿಗೆ ಗೊತ್ತಿದ್ದ ವಿಷಯವೇ ಆಗಿತ್ತು.

ಅಮೆರಿಕದ ಧೂತಾವಾಸದ ಮೇಲೆ ಇರಾನಿ ಬಂಡುಕೋರರ ದಾಳಿ

ಅಮೆರಿಕದ ಧೂತಾವಾಸದ ಮೇಲೆ ಇರಾನಿ ಬಂಡುಕೋರರ ದಾಳಿ

ಕೊನೆಗೆ ಕೆಲವು ದಿನಗಳ ಹಿಂದಷ್ಟೆ ಬಾಗ್ದಾದಿನಲ್ಲಿನ ಅಮೆರಿಕದ ಧೂತಾವಾಸದ ಮೇಲೆ ನಡೆದ ದಾಳಿಯಲ್ಲಿಯೂ ಇದೇ ಸೋಲೆಮಾನಿ ಕೈವಾಡ ಇದ್ದ ಕಾರಣ, ಭವಿಷ್ಯದಲ್ಲಿ ತನಗೆ ಮುಳುವಾಗಬಹುದಾಗಿದ್ದ ಈಗಲೂ ಮಧ್ಯಪ್ರಾಚ್ಯ ದೇಶದ ಮೇಲೆ ಹಿಡಿತ ಸಾಧಿಸಲು ಮಗ್ಗಲು ಮುಳ್ಳಾಗಿರುವ ಸೋಲೆಮಾನಿ ಹತ್ಯೆಯನ್ನು ಅಮೆರಿಕ ಮಾಡಲು ಮುಂದಾಗಿದ್ದು ಮತ್ತು ಅದರಲ್ಲಿ ಯಶಸ್ವಿಯೂ ಆಗಿದೆ.

ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ್ದ ಅಮೆರಿಕ

ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ್ದ ಅಮೆರಿಕ

2019 ರ ಏಪ್ರಿಲ್‌ ನಲ್ಲಿ ಅಮರಿಕವು ಖಾಸಿಂ ಸೋಲೆಮಾನಿ ನೇತೃತ್ವದ ಇಸ್ಲಾಂ ರೆವಲ್ಯೂಶನರಿ ಗಾರ್ಡ್ಸ್‌ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಣೆ ಮಾಡಿ ಭಯೋತ್ಪಾದಕ ಸಂಘಟನೆಗಳ ಪಟ್ಟಿಯಲ್ಲಿ ಸೇರಿಸಲು ಒತ್ತಾಯ ಹೇರಿತು. ಇಸ್ಲಾಂ ರೆವಲ್ಯೂಶನರಿ ಗಾರ್ಡ್ಸ್‌, ಅಮೆರಿಕದ ಮೇಲೆ ದಾಳಿ ಮಾಡಲೆಂದು ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ಸಹಾಯ, ಶಸ್ತ್ರಾಸ್ತ್ರ, ತರಬೇತಿಗಳನ್ನು ನೀಡುತ್ತಿದೆ ಎಂದು ಆರೋಪಿಸಿತು.

'ಅಮೆರಿಕದ ರಾಜತಾಂತ್ರಿಕ ಸಿಬ್ಬಂದಿ ಮೇಲೆ ದಾಳಿಗೆ ಯೋಜಿಸಿದ್ದ'

'ಅಮೆರಿಕದ ರಾಜತಾಂತ್ರಿಕ ಸಿಬ್ಬಂದಿ ಮೇಲೆ ದಾಳಿಗೆ ಯೋಜಿಸಿದ್ದ'

ಖಾಸಿಂ ಸೋಲೆಮಾನಿ ಅನ್ನು ಏರ್‌ಸ್ಟ್ರೈಕ್‌ ಮೂಲಕ ಕೊಂದ ನಂತರ ಅಮೆರಿಕ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ, 'ಇರಾನ್‌ ಮತ್ತು ಮಧ್ಯಪ್ರಾಚ್ಯದ ಇತರೆಡೆ ಅಮೆರಿಕದ ನಾಗರೀಕರು, ಅಮೆರಿಕ ಸೇನೆ, ಸಿಬ್ಬಂದಿ, ರಾಜತಾಂತ್ರಿಕ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ದಾಳಿಗೆ ಯೋಜನೆ ರೂಪಿಸಿದ್ದ ಕಾರಣ ಖಾಸಿಂ ಸೋಲೆಮಾನಿಯನ್ನು ಹತ್ಯೆ ಮಾಡಲಾಗಿದೆ'.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+