• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಬ್ಬೆರಗಾಗಿಸುವ ಸ್ಟೋರಿ: ಪ್ರಪಂಚದಲ್ಲೇ ಕೊರೊನಾವೈರಸ್ ಹೊಸ ದಾಖಲೆ!

|

ನವದೆಹಲಿ, ಜೂನ್.22: ನೊವೆಲ್ ಕೊರೊನಾವೈರಸ್. ಹಳ್ಳಿಯಿಂದ ದಿಲ್ಲಿವರೆಗೂ. ಅಮೆರಿಕಾದಿಂದ ಅಫಘಾನಿಸ್ತಾನ್ ವರೆಗೂ ಈ ಮಹಾಮಾರಿಯದ್ದೇ ಭೀತಿ. ಯಾವಾಗ, ಯಾರಿಗೆ, ಯಾವ ರೀತಿ ವೈರಸ್ ಅಂಟಿಕೊಳ್ಳುತ್ತೆ ಎನ್ನುವುದೇ ಆತಂಕ. ಇಂಥ ಡೇಂಜರ್ ವೈರಸ್ ಇದೀಗ ಮತ್ತೊಂದು ದಾಖಲೆ ಬರೆದಿದೆ.

ಮೇಡ್ ಇನ್ ಚೀನಾ ಎನಿಸಿರುವ ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಿಸುವಲ್ಲಿ ಜಗತ್ತೇ ಹಿನ್ನಡೆ ಅನುಭವಿಸಿದೆ. ಕಳೆದ 24 ಗಂಟೆಗಳಲ್ಲಿ ವಿಶ್ವದಲ್ಲೇ ಅತಿಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಸ್ಪಷ್ಟಪಡಿಸಿದೆ.

ಅಬ್ಬಬ್ಬಾ.. ಭಾರತದಲ್ಲಿ ಒಂದೇ ದಿನ ಇಷ್ಟೊಂದು ಜನರಿಗೆ ಕೊರೊನಾವೈರಸ್?

ಭಾನುವಾರ ಒಂದೇ ದಿನ ವಿಶ್ವದಲ್ಲಿ 1,83,000 ಮಂದಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿರುವುದು ದೃಢಪಟ್ಟಿದೆ. ಬ್ರೆಜಿಲ್ ವೊಂದರಲ್ಲೇ 54,771 ಜನರಿಗೆ ಕೊವಿಡ್-19 ಕನ್ಫರ್ಮ್ ಆಗಿದೆ. ಇನ್ನು, ಅಮೆರಿಕಾದಲ್ಲಿ 36,617 ಜನರಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ. ಜಾಗತಿಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತದಲ್ಲಿ ಒಂದೇ ದಿನ 15,413 ಮಂದಿಗೆ ಕೊರೊನಾವೈರಸ್ ಅಂಟಿಕೊಂಡಿದೆ.

WHO ನೀಡಿರುವ ಕೊರೊನಾವೈರಸ್ ಅಂಕಿ-ಅಂಶ

WHO ನೀಡಿರುವ ಕೊರೊನಾವೈರಸ್ ಅಂಕಿ-ಅಂಶ

ಕೊರೊನಾವೈರಸ್ ಸೋಂಕು ಹರಡುವಿಕೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಆಘಾತಕಾರಿ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಕಳೆದ 24 ಗಂಟೆಗಳಲ್ಲೇ ವಿಶ್ವದಲ್ಲಿ 1,83,020 ಜನರಿಗೆ ಕೊರೊನಾವರೈಸ್ ಸೋಂಕು ಅಂಟಿಕೊಂಡಿದೆ. ಒಟ್ಟು ಸೋಂಕಿತರ ಸಂಖ್ಯೆ 90,45,604ಕ್ಕೆ ಏರಿಕೆಯಾಗಿದ್ದು, ಇದುವರೆಗೂ ಮಹಾಮಾರಿಗೆ 4,70,698 ಜನರು ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲೇ ಕೊವಿಡ್-19ನಿಂದ 4743 ಜನರು ಪ್ರಾಣ ಬಿಟ್ಟಿದ್ದಾರೆ. ಒಟ್ಟು ಸಾವಿನ ಪ್ರಮಾಣದಲ್ಲಿ ಮೂರರ ಎರಡಷ್ಟು ಸಾವು ಅಮೆರಿಕಾ ಒಂದರಲ್ಲೇ ಸಂಭವಿಸಿದೆ.

ಸ್ಪೇನ್ ನಲ್ಲಿ ಸಾರ್ವಜನಿಕರಿಗೆ ಸಂಚಾರಕ್ಕೆ ಮುಕ್ತ ಅವಕಾಶ

ಸ್ಪೇನ್ ನಲ್ಲಿ ಸಾರ್ವಜನಿಕರಿಗೆ ಸಂಚಾರಕ್ಕೆ ಮುಕ್ತ ಅವಕಾಶ

ಕೊರೊನಾವೈರಸ್ ನಿಂದ ಲಾಕ್ ಡೌನ್ ಆಗಿದ್ದ ಸ್ಪೇನ್ ನಲ್ಲಿ ಪರಿಸ್ಥಿತಿ ತಿಳಿಗೊಂಡಿದೆ. ಮೂರು ತಿಂಗಳ ಬಳಿಕ ದೇಶದ 47 ಮಿಲಿಯನ್ ಜನತೆಗೆ ಸರ್ಕಾರವು ಸಿಹಿಸುದ್ದಿ ನೀಡಿದೆ. ಮಾರ್ಚ್.14ರಿಂದ ಲಾಕ್ ಡೌನ್ ಆಗಿದ್ದ ದೇಶವು ಸಂಚಾರಮುಕ್ತವಾಗಿದೆ. ಇದರ ಜೊತೆಗೆ ಬ್ರಿಟನ್ ನಿಂದ ಆಗಮಿಸುವ ಪ್ರಯಾಣಿಕರಿಗೆ ಕಡ್ಡಾಯಗೊಳಿಸಿದ್ದ 14 ದಿನಗಳ ದಿಗ್ಬಂಧನವನ್ನು ತೆರವುಗೊಳಿಸಲಾಗಿದೆ. 26 ಯುರೋಪ್ ರಾಷ್ಟ್ರದ ಪ್ರಜೆಗಳು ವೀಸಾ ಇಲ್ಲದೇ ಸಂಚರಿಸಲು ಅನುಮತಿ ನೀಡಿದೆ.

ಸ್ಪ್ಯಾನಿಷ್ ಪ್ರಧಾನಿ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮ

ಸ್ಪ್ಯಾನಿಷ್ ಪ್ರಧಾನಿ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮ

ಕೊರೊನಾವೈರಸ್ ಸೋಂಕು ಹರಡದಂತೆ ಸ್ಪ್ಯಾನಿಷ್ ನಲ್ಲಿ ಪ್ರಧಾನಮಂತ್ರಿ ಪೆಡ್ರೋ ಸಂಚೇಜ್ ತೀವ್ರ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರು. ಮೊದಲ ಹಂತದ ನಂತರದಲ್ಲಿ ಕೊರೊನಾವೈರಸ್ ಎರಡನೇ ಹಂತವನ್ನು ದೇಶವು ಎದುರಿಸಬೇಕಾಯಿತು ಎಂದು ತಿಳಿಸಿದರು.

ಪ್ರಜೆಗಳಿಗೆ ವೈದ್ಯಕೀಯ ತಪಾಸಣೆ ಪಡೆಯಲು ಟ್ರಂಪ್ ಮನವಿ

ಪ್ರಜೆಗಳಿಗೆ ವೈದ್ಯಕೀಯ ತಪಾಸಣೆ ಪಡೆಯಲು ಟ್ರಂಪ್ ಮನವಿ

ಕಳೆದ ಶನಿವಾರ ತುಲ್ಗಾ ಮತ್ತು ಓಕ್ಲಾಹೋಮಾ ಪ್ರದೇಶದಲ್ಲಿ ರ್ಯಾಲಿ ನಡೆಸಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಯೊಬ್ಬ ಪ್ರಜೆಯು ವೈದ್ಯಕೀಯ ತಪಾಸಣೆಗೆ ಒಳಗಾಗುವಂತೆ ಮನವಿ ಮಾಡಿಕೊಂಡರು. ದೇಶದಲ್ಲಿ ಈಗಾಗಲೇ ಕೊರೊನಾವೈರಸ್ ಸೋಂಕಿತರ ಸಂಖ್ಯೆ 25 ಲಕ್ಷದ ಗಡಿ ದಾಟಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಹೀಗಾಗಿ ಪ್ರತಿಯೊಬ್ಬರು ವೈದ್ಯಕೀಯ ತಪಾಸಣೆಗೊಳಗಾಗಬೇಕು ಎಂದು ಮನವಿ ಮಾಡಿಕೊಂಡರು.

ಅಮೆರಿಕಾದಲ್ಲಿ ಒಟ್ಟು 23,56,657ಕ್ಕೂ ಅಧಿಕ ಮಂದಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿದ್ದು, ಮಹಾಮಾರಿಗೆ ಈವರೆಗೂ 1,22,247 ಮಂದಿ ಉಸಿರು ನಿಲ್ಲಿಸಿದ್ದಾರೆ. 9,80,355ಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಜಾನ್ ಹಾಪ್ ಕಿನ್ಸ್ ಅಂಕಿ-ಅಂಶಗಳು ತಿಳಿಸಿವೆ.

ದೇಶದಲ್ಲಿ ಒಂದೇ ದಿನ 15413 ಮಂದಿಗೆ ಕೊವಿಡ್-19

ದೇಶದಲ್ಲಿ ಒಂದೇ ದಿನ 15413 ಮಂದಿಗೆ ಕೊವಿಡ್-19

ಭಾರತದಲ್ಲಿ ಭಾನುವಾರ ಒಂದೇ ದಿನ 15,413 ಮಂದಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,10,461ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ. ಕೊರೊನಾವೈರಸ್ ಹೆಮ್ಮಾರಿಯು ದೇಶದಲ್ಲಿ ಮರಣಮೃದಂಗ ಬಾರಿಸುತ್ತಿದೆ. 4,10,461 ಮಂದಿಗೆ ಕೊವಿಡ್-19 ಅಂಟಿಕೊಂಡಿರುವುದು ದೃಢಪಟ್ಟಿದ್ದರೆ ಈ ಪೈಕಿ 1,69,451 ಸೋಂಕಿತರು ಗುಣಮುಖರಾಗಿದ್ದಾರೆ. ಬಾಕಿ ಉಳಿದ 2,27, 756 ಮಂದಿ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ದೇಶಾದ್ಯಂತ ಮಹಾಮಾರಿಗೆ 13,254ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಅಂಕಿ-ಅಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

English summary
worldwide highest coronavirus cases reports from WHO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X